ಕುಡಿದ ಮತ್ತಿನಲ್ಲಿ ಗೂಳಿ ಸವಾರಿ ಮಾಡಿದ ಯುವಕ

Public TV
2 Min Read
Drunk Man Rides Bull At Night Rishikesh

ಡೆಹ್ರಾಡೋನ್: ಕುಡಕನೊಬ್ಬ ಬೀದಿಯಲ್ಲಿ ಗೂಳಿಯ (Bull) ಮೇಲೆ ಸವಾರಿ ಮಾಡಿದ ಘಟನೆ ಉತ್ತರಾಖಂಡದ (Uttarakhand) ರಿಷಿಕೇಶದ (Rishikesh) ತಪೋವನ ಪ್ರದೇಶದಲ್ಲಿ ನಡೆದಿದೆ.

ಕುಡಿದ ಮತ್ತಿನಲ್ಲಿದ್ದ ಯುವಕ (Drunk Man) ವೈರಲ್ ವೀಡಿಯೋವನ್ನು ಮಾಡಲು ಈ ರೀತಿ ಮಾಡಿದ್ದ. ಯುವಕನು ಗೂಳಿಯ ಮೇಲೆ ಕುಳಿತು ರಸ್ತೆಯಲ್ಲಿ ಸವಾರಿ ಮಾಡುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಉತ್ತರಾಖಂಡದ ಪೊಲೀಸರು ತನಿಖೆ ನಡೆಸಿದ್ದಾರೆ.

ಈ ವೇಳೆ ಯುವಕನನ್ನು ಉತ್ತರಾಖಂಡದ ರಿಷಿಕೇಶದ ತಪೋವನ ಪ್ರದೇಶದ ನಿವಾಸಿ ಎಂದು ಗುರುತಿಸಲಾಗಿದೆ. ಅಷ್ಟೇ ಅಲ್ಲದೇ ಆತನ ವಿರುದ್ಧ ಮಧ್ಯರಾತ್ರಿಯ ಸಮಯದಲ್ಲಿ ಅಶಾಂತಿಯನ್ನು ಸೃಷ್ಟಿಸಿರುವುದು ಹಾಗೂ ಪ್ರಾಣಿಗಳನ್ನು ಅನುಚಿತವಾಗಿ ನಡೆಸಿಕೊಂಡಿರುವ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ಆತನನ್ನು ವಿಚಾರಣೆಗೆ ಒಳಪಡಿಸಿ ಭವಿಷ್ಯದಲ್ಲಿ ಪ್ರಾಣಿಗಳೊಂದಿಗೆ ಇಂತಹ ಸಾಹಸಗಳನ್ನು ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಕುರಿತು ಉತ್ತರಾಖಂಡ ಪೊಲೀಸರು ಟ್ವೀಟ್ ಮಾಡಿದ್ದಾರೆ. ಟ್ವೀಟ್‍ನಲ್ಲಿ ಋಷಿಕೇಶದ ತಪೋವನದಲ್ಲಿ ಕುಡುಕನೊಬ್ಬ ಗೂಳಿಯ ಮೇಲೆ ಸವಾರಿ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ವೀಡಿಯೋಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಭವಿಷ್ಯದಲ್ಲಿ ಈ ರೀತಿ ಪ್ರಾಣಿಗಳೊಂದಿಗೆ ಅನುಚಿತವಾಗಿ ವರ್ತಿಸದಂತೆ ಯುವಕನಿಗೆ ಎಚ್ಚರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರರ ಜೊತೆ ಸ್ಥಳೀಯರ ಶಾಮೀಲು – ಜಮ್ಮು ಕಾಶ್ಮೀರದಲ್ಲಿ 15 ಕಡೆ ಎನ್‍ಐಎ ಶೋಧ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಈ ವೀಡಿಯೋ ಕುರಿತು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೇ ಈ ರೀತಿ ಮಾಡುವುದು ಸೂಕ್ತವಲ್ಲ ಎಂದು ತಿಳಿಸಿದರೇ, ಇನ್ನೂ ಕೆಲವರು ಈ ವೀಡಿಯೋವನ್ನು ಜೆಲ್ಲಿಕಟ್ಟಿಗೆ ಹೋಲಿಸಿದ್ದಾರೆ. ಇದನ್ನೂ ಓದಿ: ಮತಗಟ್ಟೆ ತರಬೇತಿಯಲ್ಲಿ ಉದ್ಧಟತನ – ಮಹಿಳಾ ಇನ್‌ಸ್ಪೆಕ್ಟರ್‌ ಅಮಾನತು

Share This Article