ರಾಯ್ಪುರ: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೋರ್ವ ಆಸ್ಪತ್ರೆಯ ಸ್ಕೈವಾಕ್‍ನಿಂದ ಕೆಳಗೆ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯ್ಪುರದಲ್ಲಿ ನಡೆದಿದೆ.
ಗಾಯಗೊಂಡ ವ್ಯಕ್ತಿಯನ್ನು ಮಧ್ಯಪ್ರದೇಶದ ಸತ್ನಾ ಮೂಲದ ಸುಜಿತ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತನ ಸೊಂಟಕ್ಕೆ ಗಂಭೀರವಾಗಿ ಪೆಟ್ಟುಬಿದ್ದಿದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
Advertisement
2003ರಲ್ಲಿ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯುತ್ತಿದ್ದ ಸುಜಿತ್ ಕುಮಾರ್, ಮೂರ್ಛೆ ರೋಗವನ್ನು ಸಹ ಹೊಂದಿದ್ದ. ಮೂರ್ಛೆ ರೋಗ ಹೊಂದಿದ್ದರಿಂದ ಅವರನ್ನು ಡಾ.ಭೀಮ್ ರಾವ್ ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇದನ್ನೂ ಓದಿ: ಸತತ 15ನೇ ದಿನ ಏರಿಕೆ – ಪೆಟ್ರೋಲ್, ಡೀಸೆಲ್ 80 ಪೈಸೆ ಏರಿಕೆ
Advertisement
ತನ್ನ ಲಗೇಜ್ ಮತ್ತು ಪ್ರಮಾಣಪತ್ರಗಳನ್ನು ಕೇಳುವ ಮೂಲಕ ಸುಜಿತ್ ಕುಮಾರ್ ಆಸ್ಪತ್ರೆಯಲ್ಲಿ ರಂಪಾಟ ಮಾಡಿ, ನಂತರ ಆಸ್ಪತ್ರೆಯಿಂದ ಓಡಿಹೋಗಿ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಸ್ಕೈವಾಕ್ ಅನ್ನು ಏರಿ ಕಿರಾಡಲು ಆರಂಭಿಸಿದ್ದಾನೆ. ಅಲ್ಲದೇ ಕುಡಿದ ಅಮಲಿನಲ್ಲಿ ಸುಜಿತ್ ಕುಮಾರ್ ಸ್ಕೈವಾಕ್ ಮೇಲೆ ಹತ್ತಿ ಜಿಗಿಯುತ್ತೇನೆ ಎಂದು ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಬೆಳಗಾವಿ ಜಿಲ್ಲೆಯಲ್ಲಿ ಅಕಾಲಿಕ ಮಳೆ ಅವಾಂತರ – ಭಾರೀ ಬಿರುಗಾಳಿ, ಆಲಿಕಲ್ಲು ಸಹಿತ ಮಳೆ
Advertisement
ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಕುಲದೀಪ್ ಜುನೇಜಾ ಅವರು ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ಸುಜಿತ್ ಕುಮಾರ್‍ನನ್ನು ಸಮಾಧಾನಗೊಳಿಸಿ ಕೆಳಗೆ ಬರುವಂತೆ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಸುಜಿತ್ ಯಾರ ಮಾತನ್ನು ಕೇಳದೇ ಸ್ಕೈವಾಕ್ ಮೇಲೆ ಓಡಲು ಆರಂಭಿಸಿ ನಂತರ 7 ರಿಂದ 8 ಅಡಿ ಎತ್ತರದಿಂದ ಕೆಳಗೆ ಜಿಗಿದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.