ನವದೆಹಲಿ: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ರಣಜಿ ಪಂದ್ಯ ನಡೆಯುವ ವೇಳೆ ಮೈದಾನದಲ್ಲಿ ಕಾರು ಚಾಲನೆ ಮಾಡಿರುವ ಘಟನೆ ದೆಹಲಿಯ ಏರ್ ಫೋರ್ಸ್ ಕ್ರೀಡಾಂಗಣದಲ್ಲಿ ನಡೆದಿದೆ.
ದೆಹಲಿ ಹಾಗೂ ಉತ್ತರ ಪ್ರದೇಶದ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದ ಮೂರನೇ ದಿನದಾಟದ ವೇಳೆ ಘಟನೆ ಸಂಭವಿಸಿದ್ದು, ಸಂಜೆ ಸುಮಾರು 4.40 ಸಮಯದಲ್ಲಿ ವ್ಯಾಗನ್ ಆರ್ ಕಾರು ಇದಕ್ಕಿದ್ದಂತೆ ಮೈದಾನವನ್ನು ಪ್ರವೇಶಿಸಿ ಆಟಗಾರರಲ್ಲಿ ಅತಂಕವನ್ನು ಸೃಷ್ಟಿಸಿತ್ತು. ಈ ವೇಳೆ ಟೀಂ ಇಂಡಿಯಾದ ಅಂತರಾಷ್ಟ್ರೀಯ ಆಟಗಾರರಾದ ಗೌತಮ್ ಗಂಭೀರ್, ಇಶಾಂತ್ ಶರ್ಮಾ, ರಿಷಬ್ ಪಂತ್ ಮೈದಾನದಲ್ಲಿದ್ದರು.
Advertisement
ಕುಡಿದು ಮೈದಾನಕ್ಕೆ ಕಾರು ನುಗ್ಗಿಸಿದ ವ್ಯಕ್ತಿ ಗಿರೀಶ್ ಶರ್ಮಾ ಎಂದು ತಿಳಿದು ಬಂದಿದ್ದು, ಸದ್ಯ ಏರ್ ಫೋರ್ಸ್ ಕ್ರೀಡಾಂಗಣದ ಭದ್ರತಾ ಸಿಬ್ಬಂದಿ ಈತನನ್ನು ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
Advertisement
ಕ್ರೀಡಾಂಗಣದ ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದ್ದು, ಕ್ರೀಡಾಂಗಣಕ್ಕೆ ಕಾರು ಪ್ರವೇಶಿಸಬೇಕಾದರೆ ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಲಾಗುತ್ತದೆ. ಆದರೆ ಕುಡಿದು ಚಾಲನೆ ಮಾಡುತ್ತಿದ್ದ ಗಿರೀಶ್ ಶರ್ಮಾ ಕಾರನ್ನು ಪರಿಶೀಲನೆ ನಡೆಸಿರಲಿಲ್ಲ. ಈ ವೇಳೆ ಪಾರ್ಕಿಂಗ್‍ಗೆ ತೆರಳಬೇಕಿದ್ದ ಕಾರು ನೇರ ಮೈದಾನವನ್ನು ಪ್ರವೇಶಿಸಿದೆ.
Advertisement
ಮೂರನೇ ದಿನದಾಟದ ಅಂತ್ಯದ ವೇಳೆಗೆ ಸುರೇಶ್ ರೈನಾ ನಾಯಕತ್ವದ ಉತ್ತರ ಪ್ರದೇಶ ತಂಡ ಎರಡನೇ ಇನಿಂಗ್ಸ್ ನಲ್ಲಿ 224 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದ್ದು, 246 ರನ್ ಗಳ ಮುನ್ನಡೆ ಸಾಧಿಸಿದೆ. ಉತ್ತರ ಪ್ರದೇಶ ಪರ ಅಕ್ಷ ದೀಪ್ ನಾಥ್ ಔಟಗಾದೆ 110 ರನ್ ಗಳಿಸಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ ಉತ್ತರ ಪ್ರದೇಶ 291 ರನ್ ಗಳಿಸಿತ್ತು.
Advertisement
ಇನ್ನುಳಿದಂತೆ ದೆಹಲಿ ತಂಡವು ಮೊದಲ ಇನಿಂಗ್ಸ್ ನಲ್ಲಿ ಧ್ರುವ ಶೊರೆ(98) ಗಂಭೀರ್(86) ಆಟದ ನೆರವಿನಿಂದ 269 ರನ್ ಗಳಿಸಿತ್ತು.
Drive in theater just progressed to #DriveIn match. Shocking scene in between #RanjiTrophy match today witnessed with @GautamGambhir
I:NDTV pic.twitter.com/fNq44TlZBZ
— Ishant Sharma (@ImIshant) November 3, 2017