Connect with us

Bengaluru City

ಕುಡಿದ ಮತ್ತಿನಲ್ಲಿ ಠಾಣೆಯಲ್ಲಿ ಬಟ್ಟೆ ಹರಿದು ರಂಪಾಟ – ಯುವತಿಯಿಂದ ಪೊಲೀಸರ ಮೇಲೆ ಹಲ್ಲೆ: ವಿಡಿಯೋ

Published

on

ಬೆಂಗಳೂರು: ಕೀನ್ಯಾ ಮೂಲದ ಯುವತಿಯೊಬ್ಬಳು ಕುಡಿದ ಮತ್ತಿನಲ್ಲಿ ತನ್ನ ಬಟ್ಟೆ ಹರಿದುಕೊಂಡು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ರಂಪಾಟ ಮಾಡಿದ್ದಾಳೆ.

ಸಾಶಾ ಕುಡಿದು ಪೊಲೀಸರ ಮೇಲೆ ಹಲ್ಲೆ ಮಾಡಿದ ಯುವತಿ. ಗುರುವಾರ ತಡರಾತ್ರಿ ಸಾಶಾ ಬಾಣಸವಾಡಿಯ ಕಮ್ಮನಹಳ್ಳಿ ಸರ್ಕಲ್ ಬಳಿ ಕುಡಿದು ಗಲಾಟೆ ಮಾಡುತ್ತಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾಳೆ. ಕೊನೆಗೆ ಪೊಲೀಸರು ಸಾಶಾಳನ್ನು ಬಾಣಸವಾಡಿ ಪೊಲೀಸ್ ಠಾಣೆಗೆ ಕರೆ ತಂದಿದ್ದರು.

ಕಮ್ಮನಹಳ್ಳಿ ಪಬ್ ಸಮೀಪ ರಾತ್ರಿ 1 ಗಂಟೆ ವೇಳೆಗೆ ಪಾರ್ಟಿ ಮುಗಿಸಿ ಮನೆಗೆ ಹೋಗುತ್ತಿದ್ದೆ. ಆಗ ಹಿರಿಯ ಪೇದೆ ಆಟೋ ಹತ್ತುವ ವೇಳೆ ನನ್ನನ್ನು ಆಟೋದಿಂದ ಕೆಳಗಿಳಿಸಿ ಥಳಿಸಿ ಗೋ ಹೋಂ ಗೋ ಹೋಂ ಎಂದು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಘಟನೆ ಕುರಿತು ದೂರು ನೀಡಲು ಹೋದಾಗ ಮತ್ತೆ ಲೇಡಿ ಪೊಲೀಸರು ತಮ್ಮ ಹಲ್ಲೆ ನಡೆಸಿದ್ದಾರೆ ಎಂಬ ಸಾಶಾ ಆರೋಪಿಸಿ ರಂಪಾಟ ಮಾಡಿದ್ದಾಳೆ.

ಸಾಶಾ ಠಾಣೆ ಬಂದ ನಂತರ ಬಟ್ಟೆ ಹರಿದುಕೊಂಡು ರಂಪಾಟ ಮಾಡಿದ್ದಾಳೆ. ಸೆರೆ ಹಿಡಿಯಲು ಹೋದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾಳೆ. ಸಾಶಾ ಎಂಟು ಜನ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು, ಈಗ ಪೊಲೀಸರು ಆಕೆಯ ವಿರುದ್ಧ ರುದ್ಧ ಐಪಿಸಿ ಸೆಕ್ಷನ್ 323(ಸ್ವಇಚ್ಚೆಯಿಂದ ಹಾನಿ) 354(ಸ್ತ್ರೀ ಕಿರಿಕಿರಿ), 506(ಬೆದರಿಕೆ) 504(ಉದ್ದೇಶ ಪೂರ್ವಕ ನಿಂದನೆ) ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ.

ಸಾಶಾ ಹಲ್ಲೆ ವೇಳೆ ಗಾಯಗೊಂಡಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆಯುತ್ತಿದ್ದಾಳೆ.

https://www.youtube.com/watch?v=JTAzavzNDMo

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *