ಬೆಂಗಳೂರು: ಉತ್ತರ ಭಾರತ ಮೂಲದ ಯುವತಿಯರು ನಾಗರಬಾವಿ ರಿಂಗ್ ರಸ್ತೆಯಲ್ಲಿರುವ ನಮ್ಮೂರ ತಿಂಡಿ ಹೋಟೆಲ್ ಬಳಿ ರಂಪಾಟ ನಡೆಸಿದ್ದಾರೆ. ಹೋಟೆಲ್ ಬಳಿ ಇದ್ದ ಫ್ಲವರ್ ಡೆಕೋರೇಟರ್ ಅಂಗಡಿ ಮಾಲೀಕನನ್ನು ಹಿಡಿದು ಥಳಿಸಿದ್ದಾರೆ.
ಫ್ಲವರ್ ಡೆಕೋರೇಟರ್ ಅಂಗಡಿಗೆ ನಾಲ್ವರು ಯುವತಿಯರು ಮತ್ತು ಒಬ್ಬ ಯುವಕ ವ್ಯಾಪರಕ್ಕಾಗಿ ಆಗಮಿಸಿ ಅಂಗಡಿ ಮಾಲೀಕನ ಜೊತೆ ಗಲಾಟೆಗೆ ಇಳಿದಿದ್ದಾರೆ. ಮೂವರು ಹುಡುಗಿಯರು ಫ್ಲವರ್ ಡೆಕೋರೇಟರ್ ನನ್ನ ಹಿಡಿದು ಥಳಿಸಿದ್ದಾರೆ.
Advertisement
ಇದನ್ನು ಗಮನಿಸಿದ ಸ್ಥಳೀಯರು ಅಂಗಡಿ ಬಳಿ ಜಮಾಯಿಸಿದ್ದಾರೆ. ವಿಡಿಯೋ ಮಾಡಲು ಮುಂದಾದ ಜನರ ಮೇಲೂ ಹುಡುಗಿಯರು ರಂಪಾಟ ಮಾಡಿದ್ದಾರೆ. ಜನ ಸೇರುತ್ತಿದ್ದಂತೆ ಒಬ್ಬಾಕೆ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಸ್ಥಳೀಯರಿಂದ ಯುವತಿಯರ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
Advertisement
ಯುವತಿಯರ ರಂಪಾಟದಿಂದ ರೊಚ್ಚಿಗೆದ್ದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಮೂವರು ಯುವತಿಯರು ಮತ್ತು ಒಬ್ಬ ಯುವಕನನ್ನು ಬಂಧಿಸಿದ್ದಾರೆ. ಅಂಗಡಿ ಮಾಲೀಕನಿಂದ ಮತ್ತು ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆ ಪಡೆದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Advertisement
https://www.youtube.com/watch?v=romlKVTH408