ಕೋಲಾರ: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ, ಕೊಲೆಯಲ್ಲಿ ಅಂತ್ಯವಾದ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆ ಮುಳಬಾಗಿಲು (Mulabagilu) ನಗರದ ಹೊರವಲಯದಲ್ಲಿರುವ ಬಾರ್ ಎದುರು ಘಟನೆ ನಡೆದಿದೆ. ಮುಳಬಾಗಿಲು ಹೈದರ್ ನಗರ ನಿವಾಸಿ ಮತೀನ್ (25) ಕೊಲೆಯಾದ ವ್ಯಕ್ತಿ. ಸ್ನೇಹಿತ ಮೊಯಿನ್‌ನಿಂದಲೇ ಮತೀನ್ ಹತ್ಯೆಯಾಗಿದ್ದಾನೆ. ಕುಡಿದ ಮತ್ತಿನಲ್ಲಿ ಇಬ್ಬರ ಮಧ್ಯೆ ಜಗಳ ಪ್ರಾರಂಭವಾಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಮೋದಿ ನಿವೃತ್ತಿ ಘೋಷಣೆ ಬಗ್ಗೆ ಮಾತನಾಡಿದ್ದಾರೆ: ಸಂಜಯ್ ರಾವತ್
ಬಾರ್‌ನಲ್ಲಿ ಕುಡಿದ ಬಳಿಕ ಎದುರಿಗೆ ಇದ್ದ ಮರದ ಕೆಳಗೆ ಮತೀನ್ ಹಾಗೂ ಮೊಯಿನ್ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಮತೀನ್ ಸ್ನೇಹಿತ (Friends) ಮೊಯಿನ್‌ನನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಕೋಪಗೊಂಡ ಮೊಯಿನ್ ಕಬ್ಬಿಣದ ರಾಡ್‌ನಿಂದ ಮತೀನ್‌ಗೆ ಇರಿದು ಪರಾರಿಯಾಗಿದ್ದಾನೆ. ಇದನ್ನೂ ಓದಿ: ದಕ್ಷಿಣ ಭಾರತದ ಅತಿ ದೊಡ್ಡ ಅಂಗಾಂಗ ಮರು ಪಡೆಯುವ ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆ
ಕೊಲೆಯ ದೃಶ್ಯಗಳು ಬಾರ್‌ಗೆ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಏ.2ಕ್ಕೆ ವಕ್ಫ್ ತಿದ್ದುಪಡಿ ಬಿಲ್‌ಗೆ ಕೇಂದ್ರ ಸಿದ್ಧತೆ – ಈಗ ಏನಿದೆ? ಏನು ಬದಲಾಗಲಿದೆ?