LatestMain PostNational

ಕುಡಿದ ಮತ್ತಿನಲ್ಲಿ ಚಿಕಿತ್ಸೆ, ಮಹಿಳಾ ರೋಗಿಯನ್ನು ಥಳಿಸಿದ ಡಾಕ್ಟರ್

ರಾಯ್ಪುರ: ಮದ್ಯದ ಅಮಲಿನಲ್ಲಿ ವೈದ್ಯನೊಬ್ಬ (Doctor) ಮಹಿಳಾ (Woman) ರೋಗಿಗೆ (Patient) ಚಿಕಿತ್ಸೆ ನೀಡಿದ್ದಲ್ಲದೇ ಆಕೆಗೆ ಥಳಿಸಿರುವ ಘಟನೆ ಛತ್ತೀಸ್‌ಗಢದ (Chhattisgarh) ಕೋರ್ಬಾ ಜಿಲ್ಲೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆಯ ಆಡಳಿತ ಮಂಡಳಿ ವೈದ್ಯನ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಮಹಿಳೆ ಸುಖಮತಿ ಅವರ ಆರೋಗ್ಯ ತಡರಾತ್ರಿ ಹದಗೆಟ್ಟಿದ್ದ ಕಾರಣ ಅವರ ಮಗ ಶ್ಯಾಮ್ ಕುಮಾರ್ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯಲು 108 ಹಾಗೂ 112 ಸಹಾಯವಾಣಿಗೆ ಕರೆ ಮಾಡಿದ್ದರು. ಆದರೆ ಅವರು ಸ್ಥಳ ತಲುಪುವಾಗ ತಡವಾಗುತ್ತದೆ ಎಂದಿದ್ದಾರೆ. ತಮ್ಮ ತಾಯಿಯ ಆರೋಗ್ಯ ಕ್ಷೀಣಿಸುತ್ತಿದ್ದರಿಂದ ಗಾಬರಿಗೊಳಗಾದ ಕುಮಾರ್ ಆಟೋ ರಿಕ್ಷಾದ ಮೂಲಕ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ತಾಯಿಯನ್ನು ಆಸ್ಪತ್ರೆಗೆ ಸೇರಿಸಿದಾಗ ವೈದ್ಯ ಕುಡಿದ ಮತ್ತಿನಲ್ಲಿದ್ದು, ಈ ವೇಳೆ ಆತ ಅನಾರೋಗ್ಯ ಪೀಡಿತ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಕೋಪಗೊಂಡ ಕುಮಾರ್ ವೈದ್ಯನ ನಡೆಯನ್ನು ಪ್ರಶ್ನಿಸಿದ್ದಾನೆ. ಆದರೆ ವೈದ್ಯ ಸುಮ್ಮನಿರುವಂತೆ ಹೇಳಿ ಕುಮಾರ್‌ನ ಬಾಯಿ ಮುಚ್ಚಿಸಿದ್ದಾನೆ. ಇದನ್ನೂ ಓದಿ: ಪ್ಯಾಂಟ್ ಜಿಪ್ ತೆಗೆದು ಬಸ್‍ನಲ್ಲಿ ವೈದ್ಯೆ ಜೊತೆ ಅಸಭ್ಯ ದುರ್ವತನೆ – ಕ್ಲೀನರ್ ಅರೆಸ್ಟ್

ವೈದ್ಯ ಮಹಿಳಾ ರೋಗಿಗೆ ಥಳಿಸುತ್ತಿರುವುದನ್ನು ಅಲ್ಲೇ ಇದ್ದವರೊಬ್ಬರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಘಟನೆ ಬೆಳಕಿಗೆ ಬಂದಿದೆ.

ವೈದ್ಯ ಕುಡಿದ ಅಮಲಿನಲ್ಲಿ ರೋಗಿಗೆ ಥಳಿಸಿರುವ ವಿಚಾರ ತಮ್ಮ ಗಮನಕ್ಕೆ ಬಂದಿದ್ದು, ವೈದ್ಯನ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಡೀನ್ ಡಾ. ಅವಿನಾಶ್ ಮೆಶ್ರಾಮ್ ತಿಳಿಸಿದ್ದಾರೆ. ಇದನ್ನೂ ಓದಿ: ಮಾಟಗಾರ್ತಿ ನೀನು, ನನಗೆ ಮದ್ವೆ ಆಗಲು ಬಿಡಲ್ಲ- ಮಗನಿಂದ ತಾಯಿಯ ಹತ್ಯೆ

Live Tv

Leave a Reply

Your email address will not be published. Required fields are marked *

Back to top button