– ಕಾರಿನ ಜೊತೆ ಲ್ಯಾಪ್‍ಟಾಪ್, 18 ಸಾವಿರನೂ ಕಳೆದುಕೊಂಡ
ನವದೆಹಲಿ: ವ್ಯಕ್ತಿಯೊಬ್ಬ ಮದ್ಯದ (Alcohol) ಅಮಲಿನಲ್ಲಿ ತನ್ನ ಸ್ವಂತ ಕಾರನ್ನು ಬೇರೆಯವರಿಗೆ ಕೊಟ್ಟು ಬಳಿಕ ತಾನು ಮೆಟ್ರೋ (Metro) ದ ಮೂಲಕ ಮನೆಗೆ ಬಂದ ವಿಚಿತ್ರ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ವ್ಯಕ್ತಿಯನ್ನು 30 ವರ್ಷದ ಅಮಿತ್ ಪ್ರಕಾಶ್ (Amit Prakash) ಎಂದು ಗುರುತಿಸಲಾಗಿದ್ದು, ಈತ ಗ್ರೇಟರ್ ಕೈಲಾಶ್-|| ನಿವಾಸಿ. ಈತ ಕಾರಿನ ಜೊತೆ ಲ್ಯಾಪ್‍ಟಾಪ್ ಹಾಗೂ 18 ಸಾವಿರ ರೂ. ನಗದು ಕೂಡ ನೀಡಿದ್ದಾನೆ. ಸದ್ಯ ಕಾರು ತೆಗೆದುಕೊಂಡು ಹೋಗಿರುವವನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Advertisement
ಗುರುಗ್ರಾಮದ ಖಾಸಗಿ ಕಂಪನಿ ಒಂದರಲ್ಲಿ ಅಮಿತ್ ಪ್ರಕಾಶ್ ಕೆಲಸ ಮಾಡುತ್ತಿದ್ದಾನೆ. ಎಂದಿನಂತೆ ಶುಕ್ರವಾರ ಸಂಜೆ ಕೆಲಸ ಮುಗಿಸಿ ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ಲೇಕ್ ಫಾರೆಸ್ಟ್ ವೈನ್ ಶಾಪ್‍ಗೆ ತೆರಳಿದ್ದಾನೆ. ಈ ವೇಳೆ ಅಮಿತ್ ಅಲ್ಲಿ ಕಂಠಪೂರ್ತಿ ಕುಡಿದಿದ್ದಾನೆ. ಇದನ್ನೂ ಓದಿ: 10 ರೂ. ಕೇಳಿದ್ದಕ್ಕೆ ಅಪ್ರಾಪ್ತ ಮಗನನ್ನು ಕತ್ತು ಹಿಸುಕಿ ಕೊಂದ ತಂದೆ
Advertisement
Advertisement
ಅಮಿತ್ ಕುಡಿದ ಮತ್ತಿನಲ್ಲಿ ಇರುವುದನ್ನು ಗಮನಿಸಿದ ಅಪರಿಚಿತ ವ್ಯಕ್ತಿಯೊಬ್ಬ ತಾನು ಕೂಡ ತಮ್ಮ ಜೊತೆ ಸೇರಿಕೊಳ್ಳಬಹುದೇ ಎಂದು ಕೇಳಿದ್ದಾನೆ. ಈ ವೇಳೆ ಅಮಿತ್ ಓಕೆ ಅಂದಿದ್ದು, ಕುಡಿದ ಮತ್ತಿನಲ್ಲಿ ಇನ್ನೊಂದು ವೈನ್ ಬಾಟ್ಲಿ ಖರೀದಿಸುವಂತೆ ಹೇಳಿದ್ದಾನೆ. ಈ ಸಮಯದಲ್ಲಿ ಆ ವ್ಯಕ್ತಿ 2 ಸಾವಿರ ರೂ. ಬೆಲೆ ಬಾಳುವ ಬಾಟ್ಲಿಗೆ 20,000 ರೂ. ಪಡೆದಿದ್ದಾನೆ.
Advertisement
ಇದಾದ ಕೆಲ ಹೊತ್ತಿನ ಬಳಿಕ ಆತನೇ ಅಮಿತ್ ಕಾರ್ ಡ್ರೈವ್ ಮಾಡಿಕೊಂಡು ಬಂದಿದ್ದು, ಆತನನ್ನು ದೆಹಲಿಯಲ್ಲಿರುವ ಸುಭಾಷ್ ಚೌಕ್ ಮೆಟ್ರೋ ನಿಲ್ದಾಣದ ಬಳಿ ಬಿಟ್ಟು ಕಾರು ಸಮೇತ ಪರಾರಿಯಾಗಿದ್ದಾನೆ.
ಇತ್ತ ಮರುದಿನ ಬೆಳಗ್ಗೆ ಅಮಿತ್‍ಗೆ ಹಿಂದಿನ ದಿನ ನಡೆದ ಘಟನೆಗಳು ನೆನಪಾದವು. ಕೂಡಲೇ ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿ ದೂರು ದಾಖಲಿಸಿದ್ದಾನೆ. ಸದ್ಯ ಪೊಲೀಸರು ಅಪರಿಚಿ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.