– ಕಾರು ಚಾಲಕ ಅರೆಸ್ಟ್
ನವದೆಹಲಿ: ಕುಡಿದ ಅಮಲಿನಲ್ಲಿ ಫುಟ್‌ಪಾತ್‌ನಲ್ಲಿ (Footpath) ಮಲಗಿದ್ದವರ ಮೇಲೆ ಆಡಿ ಕಾರು (Audi Car) ಹರಿಸಿದ ಪರಿಣಾಮ ಐವರು ಗಾಯಗೊಂಡಿರುವ ಘಟನೆ ದೆಹಲಿಯ ವಸಂತ್ ವಿಹಾರ್‌ನಲ್ಲಿ (Vasant Vihar) ನಡೆದಿದೆ.
ಆಡಿ ಕಾರು ಚಾಲಕ ಕುಡಿದ ಮತ್ತಿನಲ್ಲಿ ಫುಟ್‌ಪಾತ್ ಮೇಲೆ ಮಲಗಿದ್ದ ರಾಜಸ್ಥಾನದ ಮಹಿಳೆ, ಪತಿ ಮತ್ತು ಮಗಳು ಹಾಗೂ ಮತ್ತೊಂದು ದಂಪತಿ ಮೇಲೆ ಕಾರು ಹರಿಸಿದ್ದಾನೆ. ನೋಯ್ಡಾದಿಂದ ಮನೆಗೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಮುಕುಟ – ಸೋಮವಾರ ಸಿಗಂದೂರು ಸೇತುವೆ ಲೋಕಾರ್ಪಣೆ
ಜುಲೈ 9ರ ಮಧ್ಯರಾತ್ರಿ 1:45ರ ಸುಮಾರಿಗೆ ಘಟನೆ ಸಂಭವಿಸಿದೆ. ಈ ವೇಳೆ ಚಾಲಕ ಮದ್ಯಪಾನ ಮಾಡಿರುವುದು ಮೆಡಿಕಲ್ ರಿಪೋರ್ಟ್‌ನಲ್ಲಿ ದೃಢಪಟ್ಟಿದೆ. ಘಟನೆ ಸಂಬಂಧ ಕಾರು ಚಾಲಕ, ದ್ವಾರಕಾ ನಿವಾಸಿ ಉತ್ಸವ್ ಶೇಖರ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಲೈಂಗಿಕ ಬಯಕೆ ತೀರಿಸುವಂತೆ ಕಾಲೇಜು HODಯಿಂದ ಕಿರುಕುಳ – ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ