ಬೆಂಗಳೂರು: ಡೆಡ್ಲಿ ಕೊರೊನಾ ಭೀತಿಯ ಎಫೆಕ್ಟ್ ಈಗ ಬೆಂಗಳೂರಿನ ಟ್ರಾಫಿಕ್ ಪೊಲೀಸರಿಗೂ ತಟ್ಟಿದೆ. ದಿನಕ್ಕೆ ನೂರಾರು ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದ ಡ್ರಂಕ್ & ಡ್ರೈವ್ ಕೇಸ್‍ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿವೆ.
ಕೊರೊನಾ ಎಫೆಕ್ಟ್ ಹಂತ ಹಂತವಾಗಿ ಎಲ್ಲಾ ವಲಯಗಳಿಗೂ ತಟ್ಟುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕು ಪತ್ತೆಯಾದವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಡಿಡಿ ಕೇಸ್‍ಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿವೆ. ವಾಹನ ಸವಾರರಿಂದ ಎಲ್ಲಿ ನಮಗೆ ಕೊರೊನಾ ಬರುತ್ತೋ ಎನ್ನುವ ಭೀತಿಯಲ್ಲಿ ಟ್ರಾಫಿಕ್ ಪೊಲೀಸರು ಡಿಡಿ ಚೆಕ್ ಮಾಡುವುದಕ್ಕೆ ಹಿಂದೇಟು ಹಾಕಿದರು.
Advertisement
Advertisement
ಅಲ್ಲದೆ ವಾಹನ ಸವಾರರು ಕೂಡ ಒಂದೇ ಅಲ್ಕೋಮೀಟರಿನಲ್ಲಿ ಎಲ್ಲರಿಗೂ ಚೆಕ್ ಮಾಡುತ್ತಾರೆ. ಹೀಗಾಗಿ ಬೇರೆ ವಾಹನ ಸವಾರರಿಂದ ನಮಗೂ ವೈರಸ್ ಬರುವ ಭೀತಿ ಇದೆ ಎಂದು ಡಿಡಿ ಚೆಕ್ ಮಾಡಿಸಿಕೊಳ್ಳುವುದಕ್ಕೆ ವಾಹನ ಸವಾರರು ಕೂಡ ಹಿಂದೇಟು ಹಾಕಿದರು. ಪ್ರಮುಖವಾಗಿ ಪೊಲೀಸರು ಮಾಸ್ಕ್ ಇಲ್ಲದೇ ಕೆಲಸ ಮಾಡುವುದಕ್ಕೆ ಬೇಸರ ವ್ಯಕ್ತಪಡಿಸಿ, ಮಾಸ್ಕ್ ಕೊಡಿಸುವಂತೆ ಮೇಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು.
Advertisement
Advertisement
ಇದನ್ನು ಅರಿತ ಪೊಲೀಸ್ ಇಲಾಖೆಯೇ ಎಲ್ಲಾ ಸಿಬ್ಬಂದಿಗೂ ಮಾಸ್ಕ್ ಧರಿಸಿ ಡಿಡಿ ಚೆಕ್ ಮಾಡುವಂತೆ ಆದೇಶ ಹೊರಡಿಸಿ ಇಲಾಖೆ ಕಡೆಯಿಂದ ಮಾಸ್ಕ್‍ಗಳನ್ನು ನೀಡಿತ್ತು. ಇಷ್ಟದ್ರು ಕಳೆದ ಒಂದು ವಾರದಿಂದೀಚೆಗೆ ಡಿಡಿ ಕೇಸ್‍ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ದಿನಕ್ಕೆ 400-500 ಕೇಸ್‍ಗಳು ಬುಕ್ ಆಗುತ್ತಿದ್ದ ಜಾಗದಲ್ಲಿ ದಿನಕ್ಕೆ ಕೇವಲ 30-40 ಕೇಸ್‍ಗಳು ಮಾತ್ರ ಪತ್ತೆಯಾಗುತ್ತಿವೆ. ಕಳೆದ ಶನಿವಾರ 494 ಡ್ರಂಕ್ & ಡ್ರೈವ್ ಕೇಸ್‍ಗಳು ಬುಕ್ ಆಗಿದ್ರೆ, ಈ ವಾರ ಕೇವಲ 28 ಕೇಸ್‍ಗಳು ಮಾತ್ರ ಬುಕ್ ಆಗಿವೆ.