ಬೆಂಗಳೂರು: ಕುಡಿದು ಬರುತ್ತಿದ್ದ ಎಲೆಕ್ಟ್ರಿಕ್ ಬಸ್ ಡ್ರೈವರ್‌ಗಳ ಬಳಿ ಲಂಚ ಪಡೆದು ಡ್ಯೂಟಿ ನೀಡಿದ್ದಕ್ಕೆ ಬಿಎಂಟಿಸಿ ಅಧಿಕಾರಿ ಸೇರಿ 9 ಮಂದಿಯನ್ನು ಅಮಾನತು ಮಾಡಲಾಗಿದೆ.
ಘಟಕ ವ್ಯವಸ್ಥಾಪಕ ಎಂ.ಜಿ.ಕೃಷ್ಣ, ಸಂಚಾರ ನಿರೀಕ್ಷಕ ಶ್ರೀನಿವಾಸ ಡಿ, ಅರುಣ್ ಕುಮಾರ್.ಇ.ಎಸ್. (ಸಹಾಯಕ ಲೆಕ್ಕಿಗ), ಕಿರಿಯ ಸಹಾಯಕಿ ಪ್ರತಿಭಾ ಕೆ.ಎಸ್, ಕರ್ನಾಟಕ ರಾಜ್ಯ ಸಾರಿಗೆ ಹವಲ್ದಾರ್ ಮಂಜುನಾಥ ಎಂ, ಪೇದೆ ಮಂಜುನಾಥ ಎಸ್.ಜಿ, ಚೇತನ ಕುಮಾರ್, ಪುನೀತ್ ಕುಮಾರ್, ಲಕ್ಷ್ಮೀ.ಕೆ ಅಮಾನತಾಗಿದ್ದಾರೆ. ಇದನ್ನೂ ಓದಿ: Anekal | ಆಹ್ವಾನ ಪತ್ರಿಕೆ ಕೊಡುವ ನೆಪದಲ್ಲಿ ಬಂದು ಮನೆಯಲ್ಲಿದ್ದ ಚಿನ್ನಾಭರಣ ದರೋಡೆ
ಬಿಎಂಟಿಸಿ ಚಾಲಕರು ಕುಡಿದು ಡ್ರೈವ್ ಮಾಡುತ್ತಿರುವ ವೀಡಿಯೋ ವೈರಲ್ ಆಗಿತ್ತು. ಕುಡಿದು ಬರುತ್ತಿದ್ದ ಬಸ್ ಡ್ರೈವರ್‌ಗಳಿಗೆ ಲಂಚ ಪಡೆದು ಅಧಿಕಾರಿಗಳು ಡ್ಯೂಟಿ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಡಿಪೋ ಮ್ಯಾನೇಜರ್ ಸೇರಿದಂತೆ 9 ಚಾಲಕರು ಸಸ್ಪೆಂಡ್ ಆಗಿದ್ದಾರೆ.
ಡಿಪೋ- 35 ರ (ಕನ್ನಹಳ್ಳಿ) ಎಲೆಕ್ಟ್ರಿಕ್ ಬಸ್‌ಗಳನ್ನು ಡ್ರೈವಿಂಗ್ ಮಾಡಲು ಚಾಲಕರು ಕುಡಿದು ಬರುತ್ತಿದ್ದರು. ಸುಮಾರು 150 ಕ್ಕೂ ಹೆಚ್ಚು ಡ್ರೈವರ್‌ಗಳ ಬಳಿ ಅಧಿಕಾರಿಗಳು ಸಾವಿರಾರು ರೂಪಾಯಿ ಹಣ ಪಡೆದು ಬಸ್ ಓಡಿಸಲು ಅವಕಾಶ ನೀಡಿದ್ದರು. ಇದರಿಂದ ಅಪಘಾತ ಪ್ರಮಾಣ ಕೂಡ ಹೆಚ್ಚಳವಾಗಿದೆ. ಅದಕ್ಕಾಗಿ ಕಠಿಣ ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: Kolar | 5 ವರ್ಷದ ಮಗಳನ್ನು ಕೊಂದು ತಂದೆ ಆತ್ಮಹತ್ಯೆ


