– ಬೆಂಗಳೂರಿನಲ್ಲೇ ಸಿಕ್ಕಿಬಿತ್ತು ಮಾದಕ..!
ಬೆಂಗಳೂರು: ಡ್ರಗ್ಸ್ ಪೊಲೀಸರು ಎಷ್ಟೇ ಪ್ರಯತ್ನ ಮಾಡಿದ್ರು ಡ್ರಗ್ಸ್ ಪೆಡ್ಲರ್ ಗಳು ಮಾತ್ರ ಪೊಲೀಸರ ಕಣ್ತಪ್ಪಿಸಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅರಾಮಾಗಿ ಸಪ್ಲೈ ಮಾಡ್ತಾನೆ ಇದ್ದಾರೆ. ಬೆಂಗಳೂರು ಎನ್‍ಸಿಬಿ ಅಧಿಕಾರಿಗಳು ಇಂದು ಮತ್ತೊಂದು ಡ್ರಗ್ಸ್ ಜಾಲವನ್ನು ಪತ್ತೆ ಮಾಡಿದ್ದಾರೆ. ಲೆಹೆಂಗಾದ ಫಾಲ್ಸ್ ಲೈನ್‍ನಲ್ಲಿ ಡ್ರಗ್ಸ್ ಇಟ್ಟು ಆಸ್ಟ್ರೇಲಿಯಾಗೆ ಪಾರ್ಸಲ್ ಮಾಡ್ತಿದ್ದ ಖತರ್ನಾಕ್ ಡ್ರಗ್ ಪೆಡ್ಲರ್‍ನನ್ನ ಬಂಧಿಸಿದ್ದಾರೆ.
Advertisement
ಬೆಂಗಳೂರಿನಿಂದ ಸ್ವಿಫ್ಟ್ ಕಾರಿನಲ್ಲಿ ಹೈದರಾಬಾದ್‍ಗೆ ಡ್ರಗ್ಸ್ ಸಾಗಿಸಲಾಗ್ತಿತ್ತು. ಹೈದ್ರಾಬಾದ್‍ನಿಂದ ಆಸ್ಟ್ರೇಲಿಯಾಗೆ ಡ್ರಗ್ಸ್ ರೀಚ್ ಆಗ್ಬೇಕಿತ್ತು. ಮಾಲ್ ಸಾಗಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎನ್‍ಸಿಬಿ ಪೊಲೀಸರು ದೇವನಹಳ್ಳಿ ಟೋಲ್ ಬಳಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂರು ಲೆಹೆಂಗಾಗಳಲ್ಲಿ ಇರಿಸಲಾಗಿದ್ದ ಸ್ಯೂಡೋಫೆಡ್ರಿನ್ ಎಂಬ ಸುಮಾರು 3 ಕೆಜಿ ಬಿಳಿ ಬಣ್ಣದ ಹರಳಿನ ರೂಪದಲ್ಲಿರುವ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.
Advertisement
Advertisement
ಇನ್ನು ಚೆನ್ನೈನಿಂದ ಡ್ರಗ್ಸ್ ರವಾನಿಸಲಾಗಿತ್ತು ಎಂಬ ಮಾಹಿತಿ ಸಿಕ್ಕಿದೆ. ಅದೇನೇ ಇರಲಿ ಉದ್ಯಾನನಗರಿ, ಸಿಲಿಕಾನ್ ಸಿಟಿ ಅಂತಾ ಕರೆಸಿಕೊಳ್ಳುವ ನಮ್ಮ ಬೆಂಗಳೂರಿನಿಂದಲೇ ಬೇರೆ ಬೇರೆ ಕಡೆ ಡ್ರಗ್ಸ್ ಸಪ್ಲೈ ಆಗ್ತಿರೋದು ವಿಪರ್ಯಾಸ. ಇದನ್ನೂ ಓದಿ: ಡಿಲೇ ಆಗಿದ್ದಕ್ಕೆ ಯಾವ ಮಾನಮರ್ಯಾದೆ ಹೋಗಲ್ಲ, ಬದನೆಕಾಯಿಯೂ ಆಗಿಲ್ಲ: ಸುದೀಪ್