ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿರುವ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ 8 ಆರೋಪಿಗಳು ಜೈಲುಪಾಲಾಗಿದ್ದಾರೆ.
ಸುದೀರ್ಘ ಎರಡು ಗಂಟೆಗಳ ಕಾಲ ವಾದ-ಪ್ರತಿವಾದ ಆಲಿಸಿದ ಮುಂಬೈನ ಖಿಲ್ಲಾ ಕೋರ್ಟ್, ಆರ್ಯನ್ ಖಾನ್ ಮತ್ತು ಇತರರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. ಅಲ್ಲದೇ, ಶಾರೂಖ್ ಪುತ್ರ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಇದನ್ನೂ ಓದಿ: ಏರ್‌ಪೋರ್ಟ್ ಸಿಟಿಯಲ್ಲಿ ರೀಟೇಲ್ ಡೈನಿಂಗ್, ಎಂಟರ್ಟೈನ್ಮೆಂಟ್ ಗ್ರಾಮ ನಿರ್ಮಾಣ ಆರಂಭ
Advertisement
Advertisement
ಈ ಬೆನ್ನಲ್ಲೇ ಮತ್ತೊಮ್ಮೆ ಜಾಮೀನು ಅರ್ಜಿ ಸಲ್ಲಿದ್ದು, ನಾಳೆ ವಿಚಾರಣೆಗೆ ಬರುವ ಸಾಧ್ಯತೆಯಿದೆ. ನಾಳೆಯೂ ಆರ್ಯನ್‍ಗೆ ಜಾಮೀನು ನೀಡಬಾರದು ಎಂದು ವಾದ ಮಂಡಿಸಲು ಎನ್‍ಸಿಬಿ ತಯಾರಿ ನಡೆಸಿದೆ.
Advertisement
ಇಂದಿನ ವಿಚಾರಣೆ ವೇಳೆ ವಾದ ಮಂಡಿಸಿದ ಎನ್‍ಸಿಬಿ ಪರ ವಕೀಲರು, ಪ್ರಕರಣದಲ್ಲಿ ಈವರೆಗೂ 17 ಮಂದಿಯನ್ನು ಬಂಧಿಸಲಾಗಿದೆ. ಸದ್ಯದಲ್ಲೇ ಇನ್ನಷ್ಟು ದಾಳಿ ನಡೆಸಲಿದ್ದೇವೆ. ಮುಂದೆ ಬಂಧಿಸುವ ಆರೋಪಿಗಳ ಗುರುತನ್ನು ಪತ್ತೆ ಹಚ್ಚಬೇಕಿದೆ. ಜೊತೆಗೆ ಆರ್ಯನ್‍ಗೂ ಡ್ರಗ್ ವ್ಯವಹಾರಕ್ಕೂ ಇರುವ ನಂಟು ಪತ್ತೆ ಹಚ್ಚಬೇಕಿದೆ. ಹೀಗಾಗಿ ಅಕ್ಟೋಬರ್ 11ರವರೆಗೂ ಕಸ್ಟಡಿಗೆ ನೀಡಿ ಎಂದು ವಾದ ಮಂಡಿಸಿದ್ರು. ಆದರೆ ಸದ್ಯದ ಮಟ್ಟಿಗೆ ವಿಚಾರಣೆ ಅಗತ್ಯವಿಲ್ಲ ಎಂದು ಭಾವಿಸಿದ್ದೇವೆ ಎಂದ ಕೋರ್ಟ್, ಎಲ್ಲರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿತು.