ಮುಂಬೈ: ಹೈ ಪ್ರೊಫೈಲ್ ಡ್ರಗ್ಸ್ ಕೇಸ್‍ಗೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‍ಗೆ ಬಂಧನ ಭೀತಿ ಎದುರಾಗಿದೆ.
Advertisement
ಆರ್ಯನ್ ಖಾನ್ ಐಷಾರಾಮಿ ಹಡಗಿನ ಡ್ರಗ್ಸ್ ಪಾರ್ಟಿಗೆ ಗೆಸ್ಟ್ ಆಗಿದ್ದ. ಹೀಗಾಗಿ ಆರ್ಯನ್ ಖಾನ್ ವಶಕ್ಕೆ ಪಡೆದಿರುವ ಎನ್‍ಸಿಬಿ ಅಧಿಕಾರಿಗಳು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ವೇಳೆ ಮೊಬೈಲ್‍ನ್ನು ಸಹ ವಶಪಡಿಸಿಕೊಂಡಿದ್ದು, ಆರ್ಯನ್ ಖಾನ್ ಮೊಬೈಲ್ ಚಾಟಿಂಗ್ ಪರಿಶೀಲಿಸಿದ್ದಾರೆ. ಇನ್ನೊಂದೆಡೆ ಡ್ರಗ್ಸ್ ಸೇವನೆ ಬಗ್ಗೆ ಆರ್ಯನ್ ಖಾನ್ ರಕ್ತ ಪರೀಕ್ಷೆ ನಡೆಸಲು ಸಿದ್ಧತೆ ಸಹ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಡ್ರಗ್ಸ್ ಕೇಸ್‍ನಲ್ಲಿ ಶಾರೂಖ್ ಖಾನ್ ಪುತ್ರನಿಗೆ ಬಂಧನ ಭೀತಿ ಎದುರಾಗಿದೆ. ಇದನ್ನೂ ಓದಿ: ಬಾಲಿವುಡ್ ಡ್ರಗ್ಸ್ ವ್ಯೂಹದಲ್ಲಿ ಶಾರೂಖ್ ಪುತ್ರ? – ಆರ್ಯನ್ ಫೋನ್ ಎನ್‍ಸಿಬಿ ವಶಕ್ಕೆ
Advertisement
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಗಳ ಮೂವರು ಪುತ್ರಿಯರು ಸೇರಿ ಈ ವರೆಗೆ 13 ಜನರನ್ನು ಎನ್‍ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಡ್ರಗ್ಸ್ ಕೇಸ್‍ನಲ್ಲಿ 6 ಮಂದಿಗೆ ಸಮನ್ಸ್ ನೀಡಲಾಗಿದೆ. ಕೆಲವೇ ಕ್ಷಣಗಳಲ್ಲಿ 6 ಮಂದಿ ವಿಚಾರಣೆಗೆ ಹಾಜರಾಗಬೇಕಿದೆ. ಮುಂಬೈನ ಎನ್‍ಸಿಬಿ ಕಚೇರಿಯಲ್ಲೇ 6 ಮಂದಿ ವಿಚಾರಣೆ ನಡೆಯಲಿದೆ.
Advertisement
Advertisement
ಹಡಗಿನಲ್ಲಿ ಡ್ರಗ್ಸ್ ಪತ್ತೆ
ಐಷಾರಾಮಿ ಹಡಗಿನಲ್ಲಿ ಸ್ಟಾರ್ ನಟರ ಮಕ್ಕಳ ಡ್ರಗ್ಸ್ ಪಾರ್ಟಿ ಮಾಡಿದ್ದು, ಹಡಗಿನ ಪ್ರಯಾಣಿಕರ ಲಗೇಜ್‍ನಲ್ಲಿ ಡ್ರಗ್ಸ್ ಸಿಕ್ಕಿದೆ ಎಂದು ಹಡಗಿನ ಆಡಳಿತ ಮಂಡಳಿಯಿಂದ ಹೇಳಿಕೆ ಬಿಡುಗಡೆ ಮಾಡಿದೆ. ಹಡಗಿನಲ್ಲಿ ಎಂಡಿಎಂಎ, ಹಶೀಸ್, ಕೊಕೇನ್ ಸಿಕ್ಕಿದೆ ಎಂದು ಹಡಗಿನ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ- ಸ್ಟಾರ್ ನಟನ ಮಗ ಸೇರಿ ಹತ್ತು ಮಂದಿ ವಶಕ್ಕೆ
ಫ್ಯಾಷನ್ ಟಿವಿ ಎಂಡಿಯಿಂದ ಪಾರ್ಟಿ
ಖಾಸಗಿ ಫ್ಯಾಷನ್ ಟಿವಿ ಎಂಡಿ ಡ್ರಗ್ಸ್ ಪಾರ್ಟಿ ಆಯೋಜಿಸಿದ್ದು, ಈ ಪಾರ್ಟಿಯಲ್ಲಿ ಉದ್ಯಮಿಗಳ ಮಕ್ಕಳು ಸೇರಿ ಒಟ್ಟು 13 ಜನ ಭಾಗಿಯಾಗಿದ್ದರು. ಹೀಗಾಗಿ ಖಾಸಗಿ ಫ್ಯಾಷನ್ ಟಿವಿ ಎಂಡಿಗೂ ಎನ್‍ಸಿಬಿ ಡ್ರಿಲ್ ಮಾಡಿದೆ.