– ಸತತ 7 ಗಂಟೆಗಳ ಕಾಲ ಮಿಂಚಿನ ಕಾರ್ಯಾಚರಣೆ
ಮುಂಬೈ: ಹೈ ಪ್ರೊಫೈಲ್ ಡ್ರಗ್ಸ್ ಪ್ರಕರಣ ಬೇಧಿಸಿರುವ ಎನ್‍ಸಿಬಿ ಕಾರ್ಯಾಚರಣೆ ರಣರೋಚಕವಾಗಿದ್ದು, ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್ ಮಾಡಿ ಅದೇ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
ಸಮುದ್ರದಲ್ಲಿ ತೇಲುತ್ತ ಬಾಲಿವುಡ್ ನಟರು, ಉದ್ಯಮಿಗಳ ಮಕ್ಕಳು ಡ್ರಗ್ಸ್ ಪಾರ್ಟಿ ಮಾಡಿದ್ದರೆ. ಈ ವರೆಗೆ ಎನ್‍ಸಿಬಿ ಪೊಲೀಸರು 13 ಜನರನ್ನು ವಶಕ್ಕೆ ಪಡೆದಿದ್ದಾರೆ. ಐಷಾರಾಮಿ ಹಡಗಿನಲ್ಲಿ ಎನ್‍ಸಿಬಿ ಕಾರ್ಯಾಚರಣೆಯೇ ರೋಚಕವಾಗಿತ್ತು. ಎನ್‍ಸಿಬಿ ಸಮೀರ್ ವಾಂಖೆಡೆ ಟೀಮ್ ಮಾರುವೇಷದಲ್ಲಿ ಹಡಗಿನಲ್ಲಿ ಪ್ರಯಾಣಿಸಿ ಆಪರೇಷನ್ ನಡೆಸಿದೆ. ಕಾರ್ಯಾಚರಣೆಯಲ್ಲಿ ಯಶಸ್ವಿ ಸಹ ಆಗಿದ್ದು, ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಸೇರಿದಂತೆ ಹಲವು ಪ್ರತಿಷ್ಟಿತರ ಮಕ್ಕಳನ್ನು ವಶಕ್ಕೆ ಪಡೆದಿದೆ. ಇದನ್ನೂ ಓದಿ: ಹೈ ಪ್ರೊಫೈಲ್ ಡ್ರಗ್ಸ್ ಕೇಸ್- ಶಾರುಖ್ ಖಾನ್ ಪುತ್ರನಿಗೆ ಬಂಧನ ಭೀತಿ
Advertisement
Advertisement
ಹೇಗಿತ್ತು ರಣರೋಚಕ ಕಾರ್ಯಾಚಣೆ?
ಪ್ರತಿಷ್ಟಿತರ ಮಕ್ಕಳು ರೇವ್ ಪಾರ್ಟಿ ನಡೆಸುವ ಬಗ್ಗೆ 2 ವಾರದ ಹಿಂದೆಯೇ ಎನ್‍ಸಿಬಿಗೆ ಸುಳಿವು ಸಿಕ್ಕಿತ್ತು. ಆದರೆ ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ನಡೆಯಲಿದೆ ಎಂದಷ್ಟೇ ಮಾಹಿತಿ ಲಭ್ಯವಾಗಿತ್ತು. ಶನಿವಾರ ಸಂಜೆ ಹಡಗು ಮುಂಬೈನಿಂದ ಗೋವಾಗೆ ಹೊರಡುವ ಬಗ್ಗೆ ತಿಳಿದಿತ್ತು. ರೇವ್ ಪಾರ್ಟಿ ಜಾಡು ಹಿಡಿದು ಹೊರಟಿದ್ದ ಎನ್‍ಸಿಬಿ, ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್ ಮಾಡಿ, ಅದೇ ಹಡಗಿನಲ್ಲಿ ಅಧಿಕಾರಿಗಳು ಪ್ರಯಾಣಿಸಿದ್ದರು.
Advertisement
Advertisement
ಸತತ 7 ಗಂಟೆಗಳ ಕಾಲ ಎನ್‍ಸಿಬಿ ರೋಚಕ ಕಾರ್ಯಾಚರಣೆ ನಡೆಸಿದ್ದು, ದಾಳಿಯ ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ಹಡಗು ಸಮುದ್ರದ ಮಧ್ಯಕ್ಕೆ ಹೋಗುತ್ತಿದ್ದಂತೆ ಡ್ರಗ್ಸ್ ಪಾರ್ಟಿ ಶುರುವಾಗಿದೆ. ಡ್ರಗ್ಸ್ ಪಾರ್ಟಿ ಶುರುವಾಗುತ್ತಿದ್ದಂತೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹಾಗೂ ಉದ್ಯಮಿಗಳ ಮಕ್ಕಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಒಟ್ಟು 13 ಆರೋಪಿಗಳನ್ನು ಮಾದಕ ವಸ್ತು ನಿಗ್ರಹ ದಳ ವಶಕ್ಕೆ ಪಡೆದಿದೆ. ಇದನ್ನೂ ಓದಿ: ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ- ಸ್ಟಾರ್ ನಟನ ಮಗ ಸೇರಿ ಹತ್ತು ಮಂದಿ ವಶಕ್ಕೆ
ಹಡಗಿನಲ್ಲಿದ್ದ ಕೊಕೇನ್ ಸೇರಿ ವಿವಿಧ ಮಾದರಿಯ ಡ್ರಗ್ಸ್ ವಶಕ್ಕೆ ಪಡೆದಿದೆ. ಹಡಗು ಮುಂಬೈನತ್ತ ಹೊರಡುವಂತೆ ಕ್ಯಾಪ್ಟನ್‍ಗೆ ಸೂಚನೆ ನೀಡಿದ್ದಾರೆ. ಬಳಿಕ ಗೋವಾ ತಲುಪಬೇಕಿದ್ದ ಹಡಗು ದಕ್ಷಿಣ ಮುಂಬೈನ ಬಲಾರ್ಡ್ ಪೀರ್‍ನತ್ತ ಹಿಂದಿರುಗಿದೆ. ಬಳಿಕ ಮಾದಕ ವಸ್ತು ಸಮೇತ ಆರೋಪಿಗಳನ್ನು ಎನ್‍ಸಿಬಿ ವಶಕ್ಕೆ ಪಡೆದಿದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಗಳ ಮೂವರು ಪುತ್ರಿಯರು ಸೇರಿ ಈ ವರೆಗೆ 13 ಜನರನ್ನು ಎನ್‍ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಡ್ರಗ್ಸ್ ಕೇಸ್‍ನಲ್ಲಿ 6 ಮಂದಿಗೆ ಸಮನ್ಸ್ ನೀಡಲಾಗಿದೆ. ಕೆಲವೇ ಕ್ಷಣಗಳಲ್ಲಿ 6 ಮಂದಿ ವಿಚಾರಣೆಗೆ ಹಾಜರಾಗಬೇಕಿದೆ. ಮುಂಬೈನ ಎನ್‍ಸಿಬಿ ಕಚೇರಿಯಲ್ಲೇ 6 ಮಂದಿ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ಬಾಲಿವುಡ್ ಡ್ರಗ್ಸ್ ವ್ಯೂಹದಲ್ಲಿ ಶಾರೂಖ್ ಪುತ್ರ? – ಆರ್ಯನ್ ಫೋನ್ ಎನ್‍ಸಿಬಿ ವಶಕ್ಕೆ