– ದೇಶದಲ್ಲಿ ಡ್ರಗ್ಸ್ ವಿರುದ್ಧ ಮೋದಿ ಸರ್ಕಾರ ಸಮರ ಸಾರಿದೆ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಶಾಲಾ – ಕಾಲೇಜುಗಳು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಡ್ರಗ್ಸ್ ಮಾರಾಟವಾಗುತ್ತಿದೆ. ಇದರ ವಿರುದ್ಧ ರಾಜ್ಯಗಳು ಸಮರ ಸಾರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ಮಾದಕ ದ್ರವ್ಯ ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಮ್ಮೇಳನಕ್ಕೆ ಚಾಲನೆ ನೀಡಿ ಅವರಿಂದು ಮಾತನಾಡಿದರು. ಇದನ್ನೂ ಓದಿ: ಜೆಪಿಸಿ ತನಿಖೆಗೆ ಆಗ್ರಹಿಸಿ ಪ್ರತಿಭಟನೆ- ಪ್ರತಿಪಕ್ಷಗಳ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು
Advertisement
Advertisement
ಪಾಕಿಸ್ತಾನ, ಇರಾನ್ ಭಾಗಗಳಿಂದ ಸಮುದ್ರ ಮಾರ್ಗಗಳ ಮೂಲಕ ಡ್ರಗ್ಸ್ ಭಾರತಕ್ಕೆ ರವಾನೆಯಾಗುತ್ತಿದೆ. ಆದ್ದರಿಂದ ದಕ್ಷಿಣ ಭಾಗದ ಕೋಸ್ಟ್ ಗಾರ್ಡ್ ನಲ್ಲಿ ಹೆಚ್ಚು ಮುಂಜಾಗ್ರತೆ ವಹಿಸಬೇಕು. 30%, 40%, 50% ಜನತೆ ಡ್ರಗ್ಸ್‌ಗೆ ಅಡಿಕ್ಟ್ ಆದ್ರೆ ಹೇಗೆ? ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟಗಳಲ್ಲಿ ಸಮಿತಿಗಳು ರಚನೆಯಾಗಿದ್ದು, ನಿರಂತರವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಲಂಡನ್‌ನ ಭಾರತೀಯ ಹೈಕಮಿಷನ್ ಮೇಲೆ ದಾಳಿ – ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು
Advertisement
ದೇಶದಲ್ಲಿ ಡ್ರಗ್ಸ್ ನಿರ್ಮೂಲನೆ ಮಾಡಲು ಮೋದಿ ನೇತೃತ್ವದ ಸರ್ಕಾರ ಸಮರ ಸಾರಿದೆ. ಜನರಿಗೆ ಡ್ರಗ್ಸ್ ಮುಕ್ತ ರಾಜ್ಯ, ದೇಶ ಮಾಡೋದು ಈ ಅಭಿಯಾನದ ಉದ್ದೇಶ ಸಹ ಆಗಿದೆ. ಡ್ರಗ್ಸ್ ಮುಕ್ತ ದೇಶ ಹಾಗೂ 5 ಟ್ರೆಲಿಯನ್ ಆರ್ಥಿಕ ವ್ಯವಸ್ಥೆ ನಿರ್ಮಾಣ ಮಾಡುವ ಗುರಿಯನ್ನಿಟ್ಟುಕೊಂಡು ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ಪ್ರತಿ ಮನೆ ಮನೆಯಲ್ಲೂ ಡ್ರಗ್ಸ್ ವಿರುದ್ಧ ಅಭಿಯಾನ ಶುರುವಾಗಬೇಕು ಎಂದು ಕರೆ ನೀಡಿದರು.
Advertisement
ಡ್ರಗ್ಸ್ ಮುಕ್ತ ಮಾಡೋದು ಎಲ್ಲ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಬೇಕು. ಎಲ್ಲ ಇಲಾಖೆಗಳೂ ಇದಕ್ಕೆ ಕೈ ಜೋಡಿಸಬೇಕು. ಮಾದಕ ವ್ಯಸನಿಗಳಿಗೆ ಪುನರ್ವಸತಿ ಕಲ್ಪಿಸೋದು, ಡ್ರಗ್ಸ್ ನಾಶ ಮಾಡೋದು, ಡ್ರಗ್ಸ್ ಮಾರಾಟದ ವಿರುದ್ಧ ಸಮರ ಸಾರೋದು ನಮ್ಮೆಲ್ಲರ ಗುರಿಯಾಗಬೇಕು. ಸಣ್ಣ-ಸಣ್ಣ ವ್ಯಕ್ತಿಗಳಿಗೆ ಡ್ರಗ್ಸ್ ಸಾಗಣೆ ಆಗ್ತಿದೆ. ಇದು ಹೇಗೆ ಆಗ್ತಿದೆ ಅನ್ನೋದನ್ನ ಪತ್ತೆ ಹಚ್ಚಿ ಕ್ರಮ ಆಗಬೇಕು ಎಂದು ತಾಕೀತು ಮಾಡಿದರು.
ನಮ್ಮಲ್ಲಿ ಪ್ರಬಲ ಕಾನೂನುಗಳಿವೆ. ಅವುಗಳನ್ನ ಸಮರ್ಥವಾಗಿ ಬಳಸಿಕೊಳ್ಳಬೇಕು. ಕಾನೂನು ಸಮರ್ಥವಾಗಿ ಬಳಕೆ ಮಾಡಿಕೊಂಡರೆ ಡ್ರಗ್ಸ್ ಮುಕ್ತ ದೇಶಕ್ಕೆ ಸಹಾಯವಾಗುತ್ತದೆ. ಡ್ರಗ್ಸ್, ಡ್ರಗ್ಸ್ ನೆಟ್‌ವರ್ಕ್, ಡ್ರಗ್ಸ್ ಅಪರಾಧಿಗಳು ಮತ್ತು ಡ್ರಗ್ಸ್ ವ್ಯಸನಿಗಳು ಈ ನಾಲ್ಕರ ವಿರುದ್ಧ ನಾವು ಕೆಲಸ ಮಾಡಬೇಕು. ಈಗಾಗಲೇ ದೇಶದಲ್ಲಿ 8 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ನಾಶ ಮಾಡಲಾಗಿದೆ. ಎನ್‌ಸಿಬಿ ಇಂತಹ ಮಹತ್ವದ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.