ಬೆಂಗ್ಳೂರಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಲು ಹಿಂದಿನ ಬಿಜೆಪಿ ಆಡಳಿತವೆ ಕಾರಣ: ರಾಮಲಿಂಗಾರೆಡ್ಡಿ

Public TV
1 Min Read
Ramalinga Reddy 1

ಬೆಂಗಳೂರು: ನಗರದಲ್ಲಿ (Bengaluru) ಡ್ರಗ್ಸ್ ದಂಧೆ ಹೆಚ್ಚಾಗಲು ಹಿಂದಿನ ಬಿಜೆಪಿ ಆಡಳಿತವೇ ಕಾರಣ ಎಂದು ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ. ಈ ವೇಳೆ ಬೆಂಗಳೂರು ಉಡ್ತಾ ಬೆಂಗಳೂರು ಆಗ್ತಿದೆ ಎಂಬ ಬಿಜೆಪಿ (BJP) ನಾಯಕರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಿದೆ. ಇದಕ್ಕೆ ಹಿಂದಿನ ಬಿಜೆಪಿ ಆಡಳಿತವೇ ಕಾರಣ. ನೈತಿಕ ಪೊಲೀಸ್‍ಗಿರಿ ಇವರ ಪಕ್ಷದವರೇ ಮಾಡ್ತಾ ಇದ್ದಿದ್ದು. ಇವರ ದುರ್ಬಲ ಆಡಳಿತದಿಂದಲೇ ಎಲ್ಲವೂ ಆಗಿದ್ದು ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೂ ಒಂದು ಪರಿಷತ್ ಸ್ಥಾನ ನೀಡಬೇಕು: ರಾಮಲಿಂಗಾರೆಡ್ಡಿ

ನಾನೂ ಸಹ ಗೃಹ ಸಚಿವನಾಗಿದ್ದೆ, ಈಗ ಪರಮೇಶ್ವರ್ ಇದ್ದಾರೆ. ಇಲಾಖೆಯನ್ನು ಬಹಳ ಚೆನ್ನಾಗಿ ನಡೆಸಿಕೊಂಡು ಹೋಗ್ತಿದ್ದಾರೆ. ಕಳೆದ ನಾಲ್ಕು ವರ್ಷದಲ್ಲಿ ಬಿಜೆಪಿ ಏನು ಮಾಡಿದೆ? ಈಗ ನಮ್ಮ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಹಿಂದಿನ ಮೈತ್ರಿ ಸರ್ಕಾರದಲ್ಲಿ ಹೆಚ್‍ಡಿಕೆ ಬೆನ್ನಿಗೆ ಕಾಂಗ್ರೆಸ್ ಚೂರಿ: ಆರ್.ಅಶೋಕ್

Share This Article