ಬೆಂಗಳೂರು: ಬಟ್ಟೆ ಮಾರಾಟ ನೆಪದಲ್ಲಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ವ್ಯಕ್ತಿಯನ್ನು ಅರೆಸ್ಟ್ ಮಾಡಿ, ಯಲಹಂಕ ಪೊಲೀಸರು 2 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.
ನೈಜೀರಿಯಾ ಮೂಲದ ಸ್ಯಾಮುಯೆಲ್ ಇಕ್ಕೆನಾ ಬಂಧಿತ ಆರೋಪಿ. ಬಟ್ಟೆ ಮಾರಾಟದ ನೆಪದಲ್ಲಿ ಮಾದಕವಸ್ತು ಡೀಲಿಂಗ್ ಮಾಡುತ್ತಿದ್ದ ಎನ್ನಲಾಗಿದೆ.ಇದನ್ನೂ ಓದಿ: ಬಳ್ಳಾರಿ-ಸಿರುಗುಪ್ಪ-ಸಿಂಧನೂರು ನೂತನ ರೈಲ್ವೆ ಮಾರ್ಗದ ಅನುಮೋದನೆಗೆ ಮನವಿ
2012ರಲ್ಲಿ ಬ್ಯುಸಿನೆಸ್ ವೀಸಾದಡಿಯಲ್ಲಿ ಭಾರತಕ್ಕೆ ಬಂದಿದ್ದ ಈತ ಬಟ್ಟೆ ಮಾರಾಟದ ನೆಪದಲ್ಲಿ ಮಾದಕವಸ್ತು ಡೀಲಿಂಗ್ ಮಾಡುತ್ತಿದ್ದ. ದೆಹಲಿ ಮತ್ತು ಮುಂಬೈನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಸ್ಯಾಮುಯೆಲ್, ಕಳೆದ ವರ್ಷ ಬೆಂಗಳೂರಿಗೆ ಬಂದಿದ್ದ. ಬನ್ನೇರುಘಟ್ಟ ಬಳಿ ಬಟ್ಟೆ ವ್ಯಾಪಾರ ಮಾಡುವಾಗ 50 ಸಾವಿರ ರೂ. ಕೊಟ್ಟು ಡ್ರಗ್ ಖರೀದಿಸಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.
ಸದ್ಯ ಬಂಧಿತನಿಂದ 2 ಕೋಟಿ ರೂ. ಮೌಲ್ಯದ 2 ಕೆ.ಜಿ ಎಂಡಿಎಂಎ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದ್ದು, ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತಿ ನಗರ, ಜಾಲಹಳ್ಳಿ ಮತ್ತು ಪುಲಕೇಶಿ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿಯೂ ಲಕ್ಷಾಂತರ ರೂ. ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಲಾಗಿದೆ.ಇದನ್ನೂ ಓದಿ: 1.5 ಕೋಟಿ ರೂ. ಆಸ್ತಿ ತೆರಿಗೆ ಬಾಕಿ – ಹೈದರಾಬಾದ್‌ನಲ್ಲಿರೋ ಮಾಜಿ ಸಿಎಂ ಜಯಲಲಿತಾ ಬಂಗಲೆಗೆ ಬೀಗ

