ಬೆಂಗಳೂರಿನ ಡ್ರಗ್ಸ್ ಪಾರ್ಟಿ (Drugs) ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾ (Hema) ಇಂದು ಬೆಂಗಳೂರಿನ ಸಿಸಿಬಿ (CCB) ಕಚೇರಿಗೆ ವಿಚಾರಣೆಗಾಗಿ (Inquiry) ಹಾಜರಾಗಿದ್ದಾರೆ. ಈ ಮೊದಲು ಹಾಜರಾಗುವಂತೆ ಅವರಿಗೆ ಮೊದಲ ನೋಟಿಸ್ ನೀಡಲಾಗಿತ್ತು. ಆದರೆ, ಅವರು ಅಂದು ಹಾಜರಾಗದೇ ಸಮಯಾವಕಾಶ ಕೇಳಿದ್ದರು.
Advertisement
ಹೇಮಾ ಹಾಜರಾಗದ ಹಿನ್ನೆಲೆಯಲ್ಲಿ 2ನೇ ನೋಟಿಸ್ ಕೂಡ ನೀಡಿದ್ದರು ಸಿಸಿಬಿ ಅಧಿಕಾರಿಗಳು. ಇಂದು ಸಂಜೆ 4 ಗಂಟೆಗೆ ಬೆಂಗಳೂರಿಗೆ ಆಗಮಿಸಿರುವ ಹೇಮಾ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಹೇಮಾ ಅವರ ವಿಚಾರಣೆಯನ್ನು ಅಧಿಕಾರಿಗಳು ಸಿಸಿಬಿ ಕಚೇರಿಯಲ್ಲಿ ಮಾಡುತ್ತಿದ್ದಾರೆ.
Advertisement
Advertisement
ಮೊನ್ನೆಯಷ್ಟೇ ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ ಹೇಮಾ ರಿಪೋರ್ಟ್ ಪಾಸಿಟೀವ್ ಬಂದಿತ್ತು. ಆನಂತರ ಮೊದಲ ನೋಟಿಸ್ ನೀಡಲಾಗಿತ್ತು. ಅನಾರೋಗ್ಯದ ಕಾರಣಕೊಟ್ಟು ಕಾಲಾವಕಾಶ ಕೇಳಿದ್ದರು ನಟಿ ಹೇಮಾ. ಆನಂತರ 2ನೇ ನೋಟಿಸ್ ನೀಡಲಾಗಿತ್ತು. ಎರಡನೇ ನೋಟಿಸ್ ಗೆ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.