ಖ್ಯಾತ ಪೋರ್ನ್ ಸ್ಟಾರ್ ಎಮಿಲಿ ವಿಲ್ಸ್ (Emily Wills) ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದ್ದಾರೆ. ಓವರ್ ಡೋಸ್ ಡ್ರಗ್ (Drugs) ನೀಡಿದ ಪರಿಣಾಮ ಅವರು ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಏಳು ನೂರಕ್ಕೂ ಹೆಚ್ಚು ಪೋರ್ನ್ ಸಿನಿಮಾಗಳಲ್ಲಿ ನಟಿಸಿರುವ ಎಮಿಲಿ, ಅತಿಯಾದ ಡ್ರಗ್ಸ್ ಕೂಡ ತೆಗೆದುಕೊಳ್ಳುತ್ತಿದ್ದರಂತೆ.
ಪೋರ್ನ್ ಲೋಕದ ತಾರೆಯಾಗಿದ್ದ ಎಮಿಲಿ ಇತ್ತೀಚೆಗೆ ಡ್ರಗ್ ವ್ಯಸನಿಯಾದ ಕಾರಣದಿಂದಾಗಿ, ಡ್ರಗ್ ನಿಂದ ಮುಕ್ತಿ ಹೊಂದುವುದಕ್ಕಾಗಿ ಕ್ಯಾಲಿಪೋರ್ನಿಯಾದ ಮಾಲಿಬು ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಂತೆ. ಈ ವೇಳೆಯಲ್ಲೇ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.
ಔಷಧಿಯಲ್ಲಿ ಏರುಪೇರಾಗಿ ಎಮಿಲಿ ಇದೀಗ ತುರ್ತು ಘಟಕದಲ್ಲಿ ಚಿಕಿತ್ಸೆ (Treatment) ಪಡೆಯುತ್ತಿದ್ದು, ಆರೋಗ್ಯ ತೀರಾ ಹದಗೆಟ್ಟಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಎಮಿಲಿಯ ಆರೋಗ್ಯಕ್ಕಾಗಿ ಅವರು ಕುಟುಂಬ ಪ್ರಾರ್ಥಿಸಿದೆ.