ಗದಗ: ಕರ್ನಾಟಕ ರಾಜ್ಯ ಹಾಗೂ ಗದಗ (Gadag) ಜಿಲ್ಲೆಯನ್ನು ಮಾದಕ ವ್ಯಸನ ಮುಕ್ತವಾಗಿಸಲು ಪೊಲೀಸ್ ಇಲಾಖೆ ಹಾಗೂ ಎಸ್‌ಬಿಐ (SBI) ನೇತೃತ್ವದಲ್ಲಿ ಜನಜಾಗೃತಿ ಮ್ಯಾರಥಾನ್ ನಡೆಯಿತು.
ನಗರದ ಕೆ.ಹೆಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಹಸಿರು ನಿಶಾನೆ ತೋರಿಸುವ ಮೂಲಕ ಮ್ಯಾರಥಾನ್‌ಗೆ ಚಾಲನೆ ನೀಡಿದರು. ಸೀನಿಯರ್ ಹಾಗೂ ಜೂನಿಯರ್ 2 ತಂಡ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ 5 ಕಿ.ಮೀ ಹಾಗೂ 10 ಕಿ.ಮೀ ಮ್ಯಾರಥಾನ್ ನಡೆಸಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ| ಖಾಸಗಿ ಬಸ್ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು – ಇಬ್ಬರು ಸಜೀವ ದಹನ
ನಗರದ ಕೆ.ಸಿ ರಾಣಿ ರೋಡ್, ಮಹಾತ್ಮ ಗಾಂಧಿ ಸರ್ಕಲ್, ಹುಯಿಲಗೋಳ ನಾರಾಯಣರಾವ್ ಸರ್ಕಲ್, ಬನ್ನಿ ಕಟ್ಟಿ, ಕಾರ್ಯಪ್ಪ ಸರ್ಕಲ್, ಎಪಿಎಂಸಿ ಮಾರ್ಗವಾಗಿ ಸ್ಟೇಡಿಯಂ ತಲುಪಿದರು. ಕರ್ನಾಟಕ ಮಾದಕ ವ್ಯಸನ ಮುಕ್ತವಾಗಬೇಕು. ಎಲ್ಲರೂ ಫಿಟ್ ಆಗಿರಬೇಕು ಎಂಬ ಜನಜಾಗೃತಿ ಮೂಡಿಸುವುದು ಮ್ಯಾರಥಾನ್ ಉದ್ದೇಶವಾಗಿತ್ತು. ಇದನ್ನೂ ಓದಿ: ಕನ್ನಡಕ್ಕೆ ಬಾಲಿವುಡ್ ಡೈರೆಕ್ಟರ್- ಸುಜಯ್ ಶಾಸ್ತ್ರಿ ನಿರ್ದೇಶನದ ‘8’ ಸಿನಿಮಾದಲ್ಲಿ ಅನುರಾಗ್ ಕಶ್ಯಪ್
ಮ್ಯಾರಥಾನ್ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಕ್ರೀಡಾ ಇಲಾಖೆ, ಎನ್‌ಎಸ್‌ಎಸ್, ಎನ್.ಸಿ.ಸಿ, ಆರ್.ಡಿ.ಪಿ.ಆರ್. ಯೂನಿವರ್ಸಿಟಿ, ಮೆಡಿಕಲ್, ಇಂಜನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗಿಯಾಗಿದ್ದರು. ಇದನ್ನೂ ಓದಿ: Ramanagara| ಊರಹಬ್ಬದ ದಿನವೇ ಗ್ರಾಮಕ್ಕೆ 4 ಕಾಡಾನೆಗಳ ಎಂಟ್ರಿ – ದಿಕ್ಕಾಪಾಲಾಗಿ ಓಡಿದ ಜನ