ಸಿನಿಮಾ ರಂಗದಲ್ಲಿ ಡ್ರಗ್ಸ್ (Drugs) ಸೇವನೆ ಎಗ್ಗಿಲ್ಲದೇ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಪೊಲೀಸರು (Police) ಮಫ್ತಿಯಲ್ಲಿ ಬರಲಿದ್ದಾರೆ ಎಂದು ಕೇರಳದ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಚಿತ್ರೀಕರಣ ಸ್ಥಳದಲ್ಲಿ ನಟರೂ ಸೇರಿದಂತೆ ಅನೇಕರು ಡ್ರಗ್ಸ್ ಸೇವನೆ ಮಾಡುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದರು.
ಮೊನ್ನೆಯಷ್ಟೇ ಕೇರಳದ ಫಿಲ್ಮ್ ಚೇಂಬರ್ ಇಬ್ಬರು ನಟರ ಮೇಲೆ ಗುರುತರ ಆರೋಪ ಮಾಡಿತ್ತು. ಅವರಿಂದಾಗಿ ಚಿತ್ರೀಕರಣಕ್ಕೆ ತೊಂದರೆ ಆಗುತ್ತಿದೆ ಎಂದು ಹೇಳಿತ್ತು. ಅದಕ್ಕೆ ಕಾರಣ ಸದಾ ಅವರು ಅಮಲಿನ ಸ್ಥಿತಿಯಲ್ಲಿ ಇರುತ್ತಾರೆ ಎನ್ನುವುದು ನಿರ್ಮಾಪಕರ ಆರೋಪವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಇಂಥದ್ದೊಂದು ಕ್ರಮ ತಗೆದುಕೊಂಡಿದ್ದಾರೆ. ಶೂಟಿಂಗ್ ಸ್ಪಾಟ್ ಗೆ ಮಫ್ತಿಯಲ್ಲಿ ಪೊಲೀಸರು ಕಾವಲು ಕಾಯಲಿದ್ದಾರಂತೆ. ಇದನ್ನೂ ಓದಿ:ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ
ಕೇರಳ ಸಿನಿಮೋದ್ಯಮದಲ್ಲಿ ಡ್ರಗ್ಸ್ ಸೇವನೆ ವಿಪರೀತವಾಗಿದೆಯಂತೆ. ಹೀಗಾಗಿ ಸಿನಿಮಾ ರಂಗಕ್ಕೆ ಮಕ್ಕಳನ್ನು ಕಳುಹಿಸಲು ಭಯ ಆಗುತ್ತಿದೆ ಎಂದು ಮೊನ್ನೆಯಷ್ಟೇ ರಾಜಕಾರಣಿಯೊಬ್ಬರು ಮಾತನಾಡಿದ್ದರು. ಈ ಮಾತು ಕೂಡ ವೈರಲ್ ಆಗಿತ್ತು. ಈ ಮಾತಿನ ಬೆನ್ನಲ್ಲೇ ಸರಕಾರ ಕೂಡ ಎಚ್ಚೆತ್ತುಕೊಂಡಿತ್ತು. ಪೊಲೀಸರಿಗೆ ಬಿಸಿ ಮುಟ್ಟಿಸಿತ್ತು. ಹಾಗಾಗಿ ಡ್ರಗ್ಸ್ ವಿರುದ್ಧ ಪೊಲೀಸರು ತಿರುಗಿ ಬಿದ್ದಿದ್ದಾರೆ.