ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆಯ UI ಸಿನಿಮಾ ಇದೇ ಡಿ.20ಕ್ಕೆ ರಿಲೀಸ್ ಸಜ್ಜಾಗಿದೆ. ಇದರ ನಡುವೆ ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜಿಗೆ UI ಟೀಮ್ ಭೇಟಿ ಕೊಟ್ಟಿದೆ. ಮಾದಕ ವ್ಯಸನಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಉಪೇಂದ್ರ ಭಾಗಿಯಾಗಿದ್ದಾರೆ. ಮಾದಕ ವ್ಯಸನಕ್ಕೆ ದಾಸರಾಗಬಾರದು ಎಂದು ವಿದ್ಯಾರ್ಥಿಗಳಿಗೆ ಉಪೇಂದ್ರ ಕಿವಿಹಿಂಡಿದ್ದಾರೆ.
Advertisement
ಬಿವಿಬಿ ಕಾಲೇಜಿನಲ್ಲಿ ಉಪೇಂದ್ರ ಮಾತನಾಡಿ, ಇಷ್ಟೊಂದು ದೇವರುಗಳಿಗೆ ಹೇಳೋದೇನಿದೆ. ವಿದ್ಯಾರ್ಥಿಗಳನ್ನ ನಟ ದೇವರು ಎಂದಿದ್ದಾರೆ. ಮನೆಯಲ್ಲಿ ಎಲ್ಲಾ ಒಳ್ಳೆಯ ವಿಷಯ ಹೇಳಿರುತ್ತಾರೆ. ನಾವು ಏನು ತಗೋತಿವಿ ಅನ್ನೋದು ಮುಖ್ಯ. ನಿಮ್ಮೊಳಗಿನ ಆತ್ಮ, ಪರಮಾತ್ಮನ ಮಾತು ಕೇಳಿ ಬೇರೆ ಯಾರ ಮಾತು ಕೇಳೋದು ಬೇಡ. ಇದನ್ನೂ ಓದಿ:ಶಿವಾಜಿ ಮಹಾರಾಜ್ ಬಯೋಪಿಕ್‌ನಲ್ಲಿ ನಟಿಸಲು ಒಪ್ಪಿಕೊಂಡ ರಿಷಬ್ ಶೆಟ್ಟಿ: ಪರ- ವಿರೋಧ ಚರ್ಚೆ
Advertisement
Advertisement
ನಿಮ್ಮೊಳಗೆ ಒಬ್ಬ ನಾಯಕ ಇದ್ದಾನೆ. ಹೇ ಸುಮ್ಮನಿರಪ್ಪ ಅಂತ ನಾವು ಕೂರಿಸಿರುತ್ತೇವೆ ಎಲ್ಲದಕ್ಕೂ ನಿಮ್ಮಲ್ಲೇ ಉತ್ತರ ಇರುತ್ತೆ ನಾನು ನನ್ನ ಮೊದಲ ಸಿನಿಮಾದಲ್ಲೇ ಐಮ್ ಗಾಡ್, ಗಾಡ್ ಈಸ್ ಗ್ರೇಟ್ ಎಂದು ಹೇಳಿದ್ದೇನೆ ಎನ್ನುತ್ತಾ, ವಿದ್ಯಾರ್ಥಿಗಳಿಗೂ ಐಮ್ ಗಾಡ್, ಗಾಡ್ ಈಸ್ ಗ್ರೇಟ್ ಡೈಲಾಗ್ ಹೇಳಿಸಿದ್ದಾರೆ. UI ಟ್ರೈಲರ್ ನೋಡಿದ್ರಾ? ನೀವೆಲ್ಲ ಈಗ ವಾರ್ನರ್ಸ್ ಎಂದಿದ್ದಾರೆ. ಧಿಕ್ಕಾರಕ್ಕಿಂತ, ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ವಿದ್ಯಾರ್ಥಿಗಳ ಮುಂದೆ ಉಪೇಂದ್ರ ‘ಯುಐ’ ಸಿನಿಮಾದ ಡೈಲಾಗ್ ಹೊಡೆದಿದ್ದಾರೆ.
Advertisement
ಅಂದಹಾಗೆ, AI ಯುಗದಲ್ಲಿ UI ಮ್ಯಾಜಿಕ್, ಟ್ರೈಲರ್‌ನಲ್ಲಿ ಮಸ್ತ್ ಆಗಿ ಮೂಡಿ ಬಂದಿದೆ. ಪ್ರೇಕ್ಷಕರ ಬುದ್ದಿವಂತಿಕೆಗೆ UI ವಾರ್ನರ್ (ಟ್ರೈಲರ್) ಸವಾಲು ಹಾಕುವಂತಿದೆ. ಹಸಿವಿಗಾಗಿ ಜನರ ಹೊಡೆದಾಟ, ರಕ್ತಪಾತ ಇದು UI ಟ್ರೈಲರ್‌ನಲ್ಲಿ ರೋಚಕವಾಗಿ ತೋರಿಸಲಾಗಿದೆ. ಜಾತಿ, ಅಧಿಕಾರ ಭಾರತಕ್ಕೆ ಮಾರಕವಾಗುತ್ತ? ಎಂಬ ಜಿದ್ದಾ ಜಿದ್ದಿಯ ನಡುವೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ಖಡಕ್ ಆಗಿ ಉಪೇಂದ್ರ ಡೈಲಾಗ್ ಹೊಡೆದಿದ್ದಾರೆ. ಗನ್ ಹಿಡಿದು ಜನಗಳ ಕಡೆ ಶೂಟ್ ಮಾಡುತ್ತ ಖಡಕ್ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡುವಂತೆ ಮಾಡಿದ್ದಾರೆ.
ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ಡಿ.20ಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ (Reeshma Nanaiah) ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮಹೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.