ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿ (Kumaraswamy) ಅವರು ಟೀಕೆ ಮಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರದ ಜೊತೆ ಮಾತುಕತೆ ಮಾಡಿ ಬರ ಪರಿಹಾರ ಬಿಡುಗಡೆ ಮಾಡಲಿ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಕಿಡಿಕಾರಿದ್ದಾರೆ.
ಬರ (Drought) ಪರಿಹಾರಕ್ಕೆ ರಾಜ್ಯ ಸರ್ಕಾರ ಕಡಿಮೆ ಪರಿಹಾರ ಬಿಡುಗಡೆಗೆ ಕುಮಾರಸ್ವಾಮಿ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಕುಮಾರಸ್ವಾಮಿ ಇವೆಲ್ಲ ಮಾತಾಡಿದರೆ ಪ್ರಯೋಜನ ಇಲ್ಲ. 37 ಸಾವಿರ ಕೋಟಿ ರೂ. ನಷ್ಟ ಅಗಿದೆ. 17 ಸಾವಿರ ಕೋಟಿ ರೂ. ಕೇಂದ್ರಕ್ಕೆ ಪರಿಹಾರ ಕೇಳಿದ್ದೇವೆ. ಕುಮಾರಸ್ವಾಮಿ ಬಿಜೆಪಿ ಜೊತೆ ಇದ್ದಾರೆ. ಬಿಜೆಪಿ ಅವರು ಮತ್ತು ಕೇಂದ್ರ ಸರ್ಕಾರಕ್ಕೆ ಹೇಳಿ ಹೆಚ್ಚು ಹಣವನ್ನು ಬಿಡುಗಡೆ ಮಾಡಿಕೊಡಿಸಲಿ. ರಾಜಕೀಯ ಹೊರತುಪಡಿಸಿ ಬರ ಕೆಲಸವನ್ನು ಮಾಡೋಣ ಎಂದು ಕುಮಾರಸ್ವಾಮಿ ಕೇಂದ್ರದ ಮೇಲೆ ಒತ್ತಾಯ ಹಾಕಲಿ. ಅದು ಬಿಟ್ಟು ನಮ್ಮ ಮೇಲೆ ಟೀಕೆ ಮಾಡಿದ್ರೆ ಏನು ಪ್ರಯೋಜನ ಇಲ್ಲ ಅಂತ ಕಿಡಿಕಾರಿದರು. ಇದನ್ನೂ ಓದಿ: ಡಿಕೆಶಿ ಸಿಎಂ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ: ಕದಲೂರು ಉದಯ್
Advertisement
Advertisement
ನಾವು ಈಗಾಗಲೇ 500 ಕೋಟಿ ರೂ.ಗೂ ಹೆಚ್ಚು ಹಣ ಡಿಸಿ ಅಕೌಂಟ್ ನಲ್ಲಿ ಇಟ್ಟಿದ್ದೇವೆ. ಪ್ರತಿ ಜಿಲ್ಲೆಗಳಲ್ಲಿ 10, 20 ಕೋಟಿ ರೂ. ಹಣ ಮೀಸಲು ಇಟ್ಟಿದ್ದೇವೆ. ಮತ್ತೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಒಟ್ಟಾರೆ 1 ಸಾವಿರ ಕೋಟಿ ರೂ. ಡಿಸಿ ಅಕೌಂಟ್ ನಲ್ಲಿ ಹಣ ಇಡಲಾಗಿದೆ. ಅದಕ್ಕೂ ಟೀಕೆ ಮಾಡಿದರೆ ಏನು ಪ್ರಯೋಜನ?. 1 ಸಾವಿರ ಕೋಟಿ ರೂ.ನಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಅಗತ್ಯ ಇರೋ ಕಡೆ ಜಿಲ್ಲಾಧಿಕಾರಿಗಳು ಹಣ ಖರ್ಚು ಮಾಡುತ್ತಾರೆ ಎಂದು ಕುಮಾರಸ್ವಾಮಿ ವಿರುದ್ದ ಪರಮೇಶ್ವರ್ ವಾಗ್ದಾಳಿ ನಡೆಸಿದರು.