ಬೆಂಗಳೂರು: ಬರ ಪರಿಹಾರದ (Drought Relief) ಕುರಿತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ (Congress) ಭಾನುವಾರ ಬೆಳಗ್ಗೆ 9:30ಕ್ಕೆ ಪ್ರತಿಭಟನೆಗೆ (Protest) ನಿರ್ಧರಿಸಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾನುವಾರ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಕೇಂದ್ರದ ವಿರುದ್ಧ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ಬಹಳ ಕಡಿಮೆ ಬರ ಪರಿಹಾರ ಕೊಟ್ಟಿದ್ದಾರೆಂದು ಮಹಾತ್ಮ ಗಾಂಧಿ ಪ್ರತಿಮೆ ಎದುರು ನಮ್ಮ ಪಕ್ಷದ ನಾಯಕರು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಾನೂ ಭಾಗವಹಿಸುತ್ತೇನೆ ಎಂದರು. ಇದನ್ನೂ ಓದಿ: ಜಮೀರ್ ರೋಷಾವೇಶದ ಭಾಷಣಕ್ಕೆ ಗ್ಲಾಸ್ ಪೀಸ್ ಪೀಸ್!
223 ತಾಲೂಕುಗಳಲ್ಲಿ ಬರವಿದೆ. 120 ವರ್ಷಗಳ ಇತಿಹಾಸದಲ್ಲಿ ಹೀಗಾಗಿರಲಿಲ್ಲ. ಬೆಂಗಳೂರಿಗೆ ನೀರಿನ ಬವಣೆ ಹೆಚ್ಚಾಗಿತ್ತು. ಆದರೂ ಬವಣೆಯಾಗದಂತೆ ನಿರ್ವಹಿಸುತ್ತಿದ್ದೇವೆ. 56.9 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿತ್ತು. ಎನ್‌ಡಿಆರ್‌ಎಫ್ ನಾರ್ಮ್ಸ್ ಪ್ರಕಾರ ಡಿಕ್ಲೇರ್ ಮಾಡಿದ್ದೆವು. ಆಗಸ್ಟ್ನಲ್ಲೇ ಟೀಂ ಬಂದು ಪರಿಶೀಲಿಸಿತ್ತು. ನಾವು ಕಂಪ್ಲೀಟ್ ದಾಖಲೆ ಕೇಂದ್ರಕ್ಕೆ ಕೊಟ್ಟಿದ್ದೇವೆ. ಅಕ್ಟೋಬರ್ 20ರಂದು ಸಚಿವರು ಭೇಟಿ ಮಾಡಿದ್ದರು. ನವೆಂಬರ್‌ನಲ್ಲಿ ಸಿಎಂ, ಹೋಂ ಮಿನಿಸ್ಟರ್ ಭೇಟಿ ಮಾಡಿದ್ದರು. ಡಿಸೆಂಬರ್‌ನಲ್ಲಿ ಸಿಎಂ, ಕಂದಾಯ ಸಚಿವರು ಭೇಟಿ ಮಾಡಿದ್ದರು. ಅವರು ಹೈಲೆವೆಲ್ ಕಮಿಟಿ ಸಭೆ ಮಾಡುತ್ತೇವೆ ಎಂದರು. ಜನವರಿ 19ರಂದು ಸಿಎಂ ಪ್ರಧಾನಿಯನ್ನು ಭೇಟಿ ಮಾಡಿ ಬರ ಪರಿಹಾರಕ್ಕೆ ಮನವಿ ಮಾಡಿದ್ದರು. ಅಷ್ಟಾದರೂ ಬರ ಪರಿಹಾರವನ್ನು ಕೊಟ್ಟಿರಲಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಲೋಕಸಭಾ ಚುನಾವಣೆ: ಹನೂರು ಭಾಗದ ಒಂದು ಮತಗಟ್ಟೆಗೆ ಏ.29 ರಂದು ಮರು ಮತದಾನ
ನರೇಗಾ 50 ದಿನಕ್ಕೆ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದೆವು. ಅದನ್ನು ಅವರು ಮಾಡಲಿಲ್ಲ. ನಮ್ಮ ರಾಜ್ಯಕ್ಕೆ ಬಿಜೆಪಿ ಕೇಂದ್ರ ಸರ್ಕಾರ ದ್ರೋಹ ಮಾಡಿದೆ. ಮೊದಲೇ ಹಣ ಸಿಕ್ಕಿದ್ದರೆ ಎಷ್ಟು ಕಾಮಗಾರಿ ಮಾಡುತ್ತಿದ್ದೆವು. ಎಷ್ಟು ಉದ್ಯೋಗ ಸೃಷ್ಟಿ ಮಾಡುತ್ತಿದ್ದೆವು. ನಾರ್ಮ್ಸ್ ಪ್ರಕಾರ 18 ಸಾವಿರ ಕೋಟಿ ಬರಬೇಕು. ನಾವು ಕೇಳಿದ್ದು 18 ಸಾವಿರ ಕೋಟಿ. ನಮ್ಮ ತೆರಿಗೆ ನಮ್ಮ ಹಕ್ಕು. ಹೀಗಾಗಿ ನಾಳೆ ಧರಣಿಯನ್ನು ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿಯಾದ್ರೆ ಮುಸ್ಲಿಂ ಮೀಸಲಾತಿ ವಾಪಸ್: ಯತ್ನಾಳ್