ಬೆಂಗಳೂರು: ಬಸ್‍ಗಾಗಿ ಕಾಯುತ್ತಿದ್ದ ಖಾಸಗಿ ಕಂಪನಿಯ ಉದ್ಯೋಗಿಯನ್ನು ಡ್ರಾಪ್ ಕೊಡುವ ನೆಪದಲ್ಲಿ ಸುಲಿಗೆ ಮಾಡಲಾಗಿದೆ.
ಬೆಂಗಳೂರಿನ ವಿಜಯನಗರ ನಿವಾಸಿ ಸಂದೇಶ್ ಎಂಬವರು ಮಾರುತಿ ಮಂದಿರ ಬಸ್ ನಿಲ್ದಾಣದ ಬಳಿ ಬಸ್‍ಗಾಗಿ ಕಾಯುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಬಂದ ಸ್ವಿಫ್ಟ್ ಕಾರು ನಿಲ್ಲಿಸಿ ಒಂದು ಡ್ರಾಪ್ ಕೊಡುವುದಾಗಿ ತಿಳಿಸಿ ಸಂದೇಶ್ ಅವರನ್ನು ಕಾರಿಗೆ ಹತ್ತಿಸಿಕೊಂಡಿದ್ದರು.
Advertisement
Advertisement
ಕಾರಿಗೆ ಹತ್ತಿಸಿಕೊಂಡು ಸ್ವಲ್ಪ ದೂರ ಹೋದ ನಂತರ ಕಾರು ನಿಲ್ಲಿಸಿದ ದುಷ್ಕರ್ಮಿಗಳು ಸಂದೇಶ್‍ಗೆ ಡ್ರ್ಯಾಗರ್ ಹಿಡಿದು ಹಣ ಮೊಬೈಲ್ ಎಟಿಎಂ ಕಾರ್ಡ್ ಕಸಿದುಕೊಂಡಿದ್ದಾರೆ. ನಂತರ ಹತ್ತಿರದ ಎಟಿಎಂ ಬಳಿ ಕಾರು ನಿಲ್ಲಿಸಿ, ಎಟಿಎಂ ಪಿನ್ ನಂಬರ್ ಪಡೆದು 8,000 ರೂ. ಡ್ರಾ ಮಾಡಿ ಪ್ರಯಾಣಿಕ ಸಂದೇಶ್‍ರನ್ನು ನಡುರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
Advertisement
ಮತ್ತೊಂದು ವಿಷಯವೆನೆಂದರೆ ಈ ಘಟನೆ ಫೆ. 2ರಂದು ಬೆಳಗ್ಗಿನ ಜಾವ ಸುಮಾರು 5.30ಕ್ಕೆ ನಡೆದಿದೆ. ಬೆಳಗಿನ ಟೈಂನಲ್ಲೇ ಈ ರೀತಿ ಸುಲಿಗೆ ಮಾಡಿರುವುದು ನಿಜಕ್ಕೂ ಆತಂಕಕಾರಿ ವಿಚಾರ. ಇನ್ನೂ ಇದೇ ಏರಿಯಾದಲ್ಲಿ ಸಾಕಷ್ಟು ಇದೇ ರೀತಿಯ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದಾರೆ.