ಇಂಫಾಲ: ಭಾನುವಾರ ಇಂಫಾಲದ ವಿಮಾನ ನಿಲ್ದಾಣದ (Imphal Airport) ಮೇಲೆ ಡ್ರೋನ್ (Drone) ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಹಲವು ವಿಮಾನಗಳ ಹಾರಾಟ ವಿಳಂಬ ಮಾಡಿದ್ದು, ಮಾಹಿತಿ ಪಡೆದ ಭಾರತೀಯ ವಾಯುಪಡೆ (IAF) 2 ರಾಫೆಲ್ ವಿಮಾನವನ್ನು (Rafale Jet) ಅಪರಿಚಿತ ವಸ್ತುವನ್ನು ಹುಡುಕಲು ಕಳುಹಿಸಿದೆ.
ಮಣಿಪುರದ ಇಂಫಾಲ ವಿಮಾನ ನಿಲ್ದಾಣದ ಬಳಿ ಡ್ರೋನ್ ಇರುವಿಕೆ ಬಗ್ಗೆ ಮಾಹಿತಿ ಪಡೆದ ಬಳಿಕ ಐಎಎಫ್ ಹಶಿಮಾರಾದಿಂದ ಒಂದು ರಾಫೆಲ್ ಅನ್ನು ಹುಡುಕಾಟಕ್ಕೆ ಕಳುಹಿಸಿತು. ಆದರೆ ಅದು ಯಾವುದೇ ಅಪರಿಚಿತ ವಸ್ತುವನ್ನು ಪತ್ತೆಹಚ್ಚಿಲ್ಲ ಎಂದು ಮೂಲಗಳು ತಿಳಿಸಿವೆ.
Advertisement
Advertisement
ಮೊದಲ ವಿಮಾನ ಏನನ್ನೂ ಪತ್ತೆ ಹಚ್ಚದೇ ವಾಪಸ್ ತನ್ನ ನೆಲೆಗೆ ಮರಳಿದ ಬಳಿಕ ಮತ್ತೊಂದು ಬಾರಿ ಪರಿಶೀಲಿಸಲು ರಾಫೆಲ್ ಅನ್ನು ಕಳುಹಿಸಲಾಯಿತು. 2ನೇ ಬಾರಿಯೂ ಆಕಾಶದಲ್ಲಿ ಹಾರುತ್ತಿದ್ದ ಅಪರಿಚಿತ ವಸ್ತುವನ್ನು ಪತ್ತೆ ಮಾಡದೇ ಹಿಂತಿರುಗಿದೆ. ಇದನ್ನೂ ಓದಿ: ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಅಧಿಕಾರಿ, ಕಚೇರಿಗೆ ಜೀವ ಬೆದರಿಕೆ- ಭದ್ರತೆ ಹೆಚ್ಚಿಸಿದ ಪೊಲೀಸರು
Advertisement
ಮಣಿಪುರದ (Manipur) ಇಂಫಾಲದಲ್ಲಿರುವ ಬಿರ್ ಟಿಕೇಂದ್ರಜಿತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಡ್ರೋನ್ ಕಂಡುಬಂದ ಬಳಿಕ ಹಲವು ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಯುಎಫ್‌ಒ ಸಂಜೆ 4 ಗಂಟೆಯವರೆಗೆ ವಾಯುನೆಲೆಯ ಪಶ್ಚಿಮಕ್ಕೆ ಚಲಿಸುತ್ತಿದ್ದು, ಅದು ಬರಿ ಕಣ್ಣುಗಳಿಗೂ ಕಾಣಿಸುತ್ತಿತ್ತು ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಕೋಲ್ಕತ್ತಾದಿಂದ ಆಗಮಿಸುತ್ತಿದ್ದ ಇಂಡಿಗೋ ವಿಮಾನ ಸೇರಿದಂತೆ ಹಲವು ವಿಮಾನಗಳ ಮಾರ್ಗ ಬದಲಿಸಲಾಗಿತ್ತು. 25 ನಿಮಿಷಗಳ ನಂತರ ಅದನ್ನು ಗುವಾಹಟಿಗೆ ಕಳುಹಿಸಲಾಯಿತು. ತಡವಾದ ವಿಮಾನಗಳು ಸುಮಾರು 3 ಗಂಟೆಗಳ ಬಳಿಕ ಇಂಫಾಲ ನಿಲ್ದಾಣದಿಂದ ಹೊರಟಿವೆ. ಘಟನೆ ಬಗ್ಗೆ ಶಿಲ್ಲಾಂಗ್‌ನಲ್ಲಿರುವ ಭಾರತೀಯ ವಾಯುಪಡೆಯ ಪೂರ್ವ ಕಮಾಂಡರ್‌ಗೂ ತಿಳಿಸಲಾಗಿದೆ. ಇದನ್ನೂ ಓದಿ: ಹಣಕಾಸು ಕೊರತೆಯ ನೆಪ ಬೇಡ; 6 ಮತ್ತು 7ನೇ ವೇತನ ಆಯೋಗ ಶಿಫಾರಸಿನನ್ವಯ ಶಿಕ್ಷಕರಿಗೆ ವೇತನ ನೀಡಿ: ಹೈಕೋರ್ಟ್ ಆದೇಶ