ಜಮ್ಮು-ಕಾಶ್ಮೀರ: ಗುರುವಾರ ಜಮ್ಮುವಿನ ಪೌನಿ ಚಾಕ್ ಪ್ರದೆಶದಲ್ಲಿ ಡ್ರೋನ್ ಅನ್ನು ಪೊಲೀಸರು ಪತ್ತೆಹಚ್ಚಿದ್ದು, ಡ್ರೋನ್ ಎಲ್ಲಿಂದ ಬಂತು ಎಂಬುದನ್ನು ಪರಿಶೀಲಿಸುತ್ತಿದ್ದಾರೆ.
ಗುರುವಾರ ರಾತ್ರಿ 10:40ರ ಸುಮಾರಿಗೆ ಪೌನಿ ಚಾಕ್‌ನ ಗೋಪಾಲ್ ಶರ್ಮಾ ಎಂಬವರ ಪ್ಲಾಟ್‌ನಲ್ಲಿ ಡ್ರೋನ್ ಮಾದರಿಯ ವಸ್ತು ಪತ್ತೆಯಾಗಿತ್ತು. ತಕ್ಷಣ ಇದರ ಬಗ್ಗೆ ಗೋಪಾಲ್ ಶರ್ಮಾ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಡ್ರೋನ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ
Advertisement
Advertisement
ಡ್ರೋನ್‌ನಲ್ಲಿ ಮೇಲ್ನೋಟಕ್ಕೆ ಯಾವುದೇ ಭಯೋತ್ಪಾದನೆಯ ಅಂಶ ಕಂಡುಬಂದಿಲ್ಲವಾದರೂ ಅದನ್ನು ಪೊಲೀಸರು ಪರೀಕ್ಷೆಗೆ ತೆಗೆದುಕೊಂಡಿದ್ದಾರೆ. ಡ್ರೋನ್ ಎಲ್ಲಿಂದ ಬಂತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಪಾಕಿಸ್ತಾನದ ಮೊದಲ ಮಹಿಳಾ ನ್ಯಾಯಾಧೀಶೆಯಾಗಿ ಆಯಿಷಾ ಮಲಿಕ್ ನೇಮಕ
Advertisement
ಮೇಲ್ನೋಟಕ್ಕೆ ಇದು ಕಾರ್ಯಕ್ರಮಗಳಲ್ಲಿ ಛಾಯಾಗ್ರಹಣಕ್ಕೆ ಬಳಸಲಾಗುವ ಚಿಕ್ಕ ಡ್ರೋನ್ ರೀತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.