ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡ್ರೋನ್, ಸಂಗೀತಾ

Public TV
1 Min Read
Big Boss

ನಿನ್ನೆ ದಿಢೀರ್ ನೆ ದೊಡ್ಮನೆಯಿಂದ ಡ್ರೋನ್ ಪ್ರತಾಪ್ (Drone Pratap) ಮತ್ತು ಸಂಗೀತಾ ಶೃಂಗೇರಿ (Sangeetha Sringeri) ಹೊರ ಬಂದಿದ್ದಾರೆ. ಟಾಸ್ಕ್ ವೊಂದರಲ್ಲಿ ಅವರ ಮುಖಕ್ಕೆ ಕೆಮಿಕಲ್ ನೀರು ಹಾಕಿದ ಕಾರಣದಿಂದಾಗಿ ಅವರು ಅಸ್ವಸ್ಥಗೊಂಡಿದ್ದರು ಎಂದು ಹೇಳಲಾಗುತ್ತಿದೆ. ಕಣ್ಣಿಗೆ ಮತ್ತು ಮೂಗು, ಬಾಯಿಗೆ ನೀರು ಬಿದ್ದ ಪರಿಣಾಮದಿಂದ ಡ್ರೋನ್ ಮತ್ತು ಸಂಗೀತಾ ಒದ್ದಾಡಿದ್ದಾರೆ ಎನ್ನುವ ಮಾಹಿತಿ ಇದೆ. ಅವರೀಗ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದಾರೆ.

bigg boss

ಕಳೆದ ಎರಡು ದಿನಗಳಿಂದ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ಗುಂಪುಗಳಾನ್ನಾಗಿ ಮಾಡಿ, ಹಲವು ಟಾಸ್ಕ್ ಗಳನ್ನು ನೀಡಲಾಗಿದೆ. ಈ ಟಾಸ್ಕ್ ನಲ್ಲಿ ಡ್ರೋನ್ ಮತ್ತು ಸಂಗೀತಾ ಗಾಯ ಮಾಡಿಕೊಂಡಿದ್ದಾರೆ ಎನ್ನುವುದು ಲೇಟೆಸ್ಟ್ ಅಪ್ ಡೇಟ್. ಈ ವಿಷಯದ ಕುರಿತಂತೆ ವಾಹಿನಿಯಾಗಲಿ ಅಥವಾ ಸಂಬಂಧಿಸಿದವರಾಗಲಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ನ್ಯೂಸ್ ಭರ್ಜರಿ ಸೇಲ್ ಆಗುತ್ತಿದೆ.

Bigg Boss 2

ರಾಕ್ಷಸರು ಮತ್ತು ಗಂಧರ್ವರ ಗುಂಪುಗಳ ನಡುವೆ ಭಾರೀ ಕದನವೇ ನಡೆಯುತ್ತಿದೆ. ಹಲವರು ಟಾರ್ಗೆಟ್ ಮಾಡಿಕೊಂಡು ಆಡುತ್ತಿದ್ದಾರೆ. ಅದರಲ್ಲೂ ಸಂಗೀತಾ ಮತ್ತು ವಿನಯ್ ಮಧ್ಯ, ಕಾರ್ತಿಕ್ ಮತ್ತು ವಿನಯ್ ಮಧ್ಯ, ಸಂಗೀತಾ ಮತ್ತು ನಮ್ರತಾ ಮಧ್ಯ ಹೀಗೆ ವೈಯಕ್ತಿಕವಾಗಿ ಆಟಗಳನ್ನು ಆಡುತ್ತಿದ್ದಾರೆ. ಒಬ್ಬರಿಗೊಬ್ಬರನ್ನು ಕೆಣಕುತ್ತಿದ್ದಾರೆ. ಇದು ಎಲ್ಲೋ ಒಂದು ಕಡೆ ಅನಾಹುತ ಮಾಡಲಿದೆ ಎಂದೇ ಅಂದಾಜಿಸಲಾಗಿತ್ತು. ಬಹುಶಃ ಅದೇ ಆಗಿರಬಹುದು.

 

ಕೆಮಿಕಲ್ ನೀರಿನ ಪರಿಣಾಮದಿಂದಾಗಿ ಸದ್ಯಕ್ಕೆ ಡ್ರೋನ್ ಮತ್ತು ಸಂಗೀತಾರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ತನಿಷಾರನ್ನು ಹೀಗೆಯೇ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಆನಂತರ ಬಿಗ್ ಬಾಸ್ (Bigg Boss Kannada) ಮನೆಗೆ ಕರೆತರಲಾಗಿತ್ತು. ಈ ಇಬ್ಬರನ್ನೂ ಹಾಗೆಯೇ ಮಾಡುವ ಸಾಧ್ಯತೆ ಇದೆ.

Share This Article