ಬಿಗ್ ಬಾಸ್ ಮನೆಗೆ ಕೊನೆಗೂ ಪ್ರತಾಪ್ (Drone Prathap) ಪೋಷಕರ (Parents) ಎಂಟ್ರಿಯಾಗಿದೆ. ತಂದೆ-ತಾಯಿಯನ್ನ ನೋಡ್ತಿದ್ದಂತೆ ಗಳಗಳನೇ ಅತ್ತಿದ್ದಾರೆ ಡ್ರೋನ್ ಪ್ರತಾಪ್. ಮಗನ ಜೊತೆ ಮನೆಯ ಪರಿಸ್ಥತಿ, ಬಿಗ್ ಬಾಸ್ (Bigg Boss Kannada 10) ಆಟದ ಬಗ್ಗೆ ಮತ್ತು ತಂಗಿ ಕೆಲಸ ಮತ್ತು ಮದುವೆಯ ಬಗ್ಗೆ ಚರ್ಚಿಸಿದ್ದಾರೆ. ಇದೆಲ್ಲದರ ನಡುವೆ ಡ್ರೋನ್ ಪ್ರತಾಪ್ ಮದುವೆ (Wedding) ಬಗ್ಗೆ ಕೂಡ ಚರ್ಚೆಯಾಗಿದೆ. ಇದನ್ನೂ ಓದಿ:ಎಷ್ಟೇ ಕಳಪೆ ಕೊಟ್ಟರೂ ತಲೆ ಕೆಡಿಸಿಕೊಳ್ಳಬೇಡ- ಸಂಗೀತಾಗೆ ಅತ್ತಿಗೆ ಕಿವಿ ಮಾತು
Advertisement
ಡ್ರೋನ್ ಪ್ರತಾಪ್, ತಮ್ಮ ಪೋಷಕರನ್ನು ಮತ್ತೆ ಸೇರಿದ್ದು ಮನೆಯ ಸದಸ್ಯರನ್ನು ಭಾವುಕಗೊಳಿಸಿತು. ಹಲವು ಭಾವುಕ ಸನ್ನಿವೇಶಗಳು ಡ್ರೋನ್ ಪ್ರತಾಪ್ ಹಾಗೂ ಅವರ ಪೋಷಕರ ನಡುವೆ ನಡೆಯಿತು. ಇದೆಲ್ಲದರ ನಡುವೆ ಪ್ರತಾಪ್‌ರ ಮದುವೆ ವಿಷಯವೂ ಸಹ ಮನೆಯಲ್ಲಿ ಚರ್ಚೆಯಾಯ್ತು.
Advertisement
Advertisement
ಮನೆಗೆ ಪ್ರತಾಪ್ ಪೋಷಕರ ಎಂಟ್ರಿಯಾಗುತ್ತಿದ್ದಂತೆ ವರ್ತೂರು ಸಂತೋಷ್ ಮೊದಲಿಗೆ ಡ್ರೋನ್ ಪ್ರತಾಪ್‌ರ ಮದುವೆ ಚರ್ಚೆ ಎತ್ತಿದ್ದಾರೆ. ಯಜಮಾನರೇ ನೀವು ಹೇಳಿದರೆ ನಿಮ್ಮ ಮಗ ಮದುವೆ ಆಗ್ತಾನಂತೆ, ನೀವು ಹೂ ಅನ್ನಿ ಎಂದು ವರ್ತೂರು ಸಂತೋಷ್ (Varthur Santhosh) ಕೇಳಿಕೊಂಡಿದ್ದಾರೆ. ಅದಕ್ಕೆ ಪ್ರತಾಪ್‌ರ ತಂದೆ ನನ್ನ ಅಭ್ಯಂತರವೇನೂ ಇಲ್ಲ ಎಂದರು. ಬಳಿಕ ಹಾಗಿದ್ದರೆ ಆ ಜವಾಬ್ದಾರಿ ನನಗೆ ಬಿಡಿ ನಾನು ನೋಡುತ್ತೇನೆ ಎಂದರು. ಹೌದು, ನಿಮ್ಮ ಊರಲ್ಲೇ ಒಂದು ಒಳ್ಳೆಯ ಹೆಣ್ಣು ನೋಡಪ್ಪ ಎಂದರು ಪ್ರತಾಪ್‌ರ ತಂದೆ.
Advertisement
ಬಳಿಕ ತುಕಾಲಿ ಸಂತು, ನಮ್ಮ ಊರಲ್ಲಿ ಒಂದು ಒಳ್ಳೆಯ ಹೆಣ್ಣು ಇದೆ ನೀವು ಹೂ ಹೇಳಿ ನಾನು ಮಾತಾಡ್ತೀನಿ ಮಾತನಾಡಿದ್ದಾರೆ. ನಾವು ಹೂ ಅಂದರೆ ಹುಡುಗಿಯೂ ಒಪ್ಪಿಕೊಳ್ಳಬೇಕಲ್ಲ ಪ್ರತಿಯುತ್ತರ ನೀಡಿದ್ದರು. ಅವರಿಗೆ ನನ್ನ ಮಾತೇ ಅಂತಿಮ, ನಾನು ಮಾತನಾಡಿದರೆ ಮುಗಿದಂತೆ ಎಂದು ಮಾತನಾಡಿದ್ದಾರೆ.
ಬಳಿಕ ಅಪ್ಪ-ಅಮ್ಮನೊಟ್ಟಿಗೆ ಮಾತನಾಡುವಾಗ ತಂಗಿಯ ಬಗ್ಗೆ ವಿಚಾರಿಸಿದರು. ತಂಗಿ ಕೆಲಸಕ್ಕೆ ಸೇರಿದ್ದಾಳೆ ಹಾಗಾಗಿ ಬರುವುದಕ್ಕೆ ಸಾಧ್ಯವಾಗಲಿಲ್ಲ. ಆಕೆ ಚೆನ್ನಾಗಿ ದುಡಿಯುತ್ತಿದ್ದಾಳೆ, ನನ್ನನ್ನು-ಅಮ್ಮನನ್ನು ನೋಡಿಕೊಳ್ಳುತ್ತಿದ್ದಾಳೆ ಎಂದರು. ಆಗ ನಾನು ಮನೆಗೆ ಬರುತ್ತೇನೆ. ತಂಗಿಯ ಮದುವೆ ಮಾಡ್ತೀನಿ ಎಂದು ಪ್ರತಾಪ್ ಭಾವುಕರಾಗಿದ್ದಾರೆ.