ಪ್ರತಾಪ್‌ಗೆ ‘ಡೋಂಗಿ ಡ್ರೋಣ’ ಎಂದು ಗದರಿದ ಸ್ನೇಹಿತ್

Public TV
1 Min Read
bigg boss 8

ಬಿಗ್ ಬಾಸ್ ಮನೆಯ (Bigg Boss Kannada) ಅಸಲಿ ಆಟ ಈಗ ಶುರುವಾಗಿದೆ. ದೊಡ್ಮನೆ ಆಟ ಶುರುವಾಗಿ 3 ದಿನಕ್ಕೆ ಮನೆ ರಣರಂಗವಾಗಿದೆ. ಡ್ರೋನ್ ಪ್ರತಾಪ್‌ಗೆ (Drone Prathap) ಡೋಂಗಿ ಎಂದು ಸ್ಪರ್ಧಿಗಳು ಕಾಲೆಳೆದಿದ್ದಾರೆ. ಡ್ರೋನ್ ಪ್ರತಾಪ್ ಅವರನ್ನ ಸ್ಪರ್ಧಿಗಳು ಕೆಣಕಿದ್ದಾರೆ.

drone prathap 1 1

ಡ್ರೋನ್ ಪ್ರತಾಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೇ ಒಂದಲ್ಲಾ ಒಂದು ವಿಚಾರವಾಗಿ ಟ್ರೋಲ್‌ಗೆ ಒಳಗಾಗುತ್ತಾರೆ. ಈಗ ಅವರು ತಮ್ಮದೇ ಆಫೀಸ್ ಆರಂಭಿಸಿದ್ದಾರೆ. ಔಷಧಿ ಸಿಂಪಡನೆಗೆ ಡ್ರೋನ್‌ನ ಅವರು ಬಾಡಿಗೆ ನೀಡುತ್ತಾರೆ. ಈ ವಿಚಾರ ಬಿಗ್ ಬಾಸ್ ಮನೆಯಲ್ಲಿ ಚರ್ಚೆಗೆ ಬಂದಿದೆ. ತುಕಾಲಿ ಸಂತೋಷ್ ಅವರು ಪ್ರತಾಪ್‌ನ ಕೆಣಕಿದ್ದಾರೆ. ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

bigg boss 1 7

ಪ್ರತಾಪ್ ಅವರ ಡ್ರೋನ್ ವಿಚಾರ ಇಟ್ಟುಕೊಂಡು ಮನೆಯವರೆಲ್ಲ ಆಡಿಕೊಂಡಿದ್ದಾರೆ. ಡ್ರೋನ್‌ನ ಇವರೇ ತಯಾರಿಸುವುದಲ್ಲ. ಬೇರೆ ಕಡೆಯಿಂದ ತಂದು ಇವರು ಬಾಡಿಗೆ ಕೊಡೋದು ಅಷ್ಟೇ ಎಂದು ಹೇಳಿಕೊಂಡು ನಕ್ಕರು ತುಕಾಲಿ ಸಂತೋಷ್. ಇದನ್ನು ಕೇಳಿ ಪ್ರತಾಪ್‌ಗೆ ಸಿಟ್ಟೇ ಬಂತು. ಬಿಸ್ನೆಸ್ ಬಗ್ಗೆ ಮಾತನಾಡೋದಾದರೆ ಕಚೇರಿಗೆ ಬನ್ನಿ, ಇಲ್ಲಿ ಆ ಬಗ್ಗೆ ಮಾತನಾಡಬೇಡಿ ಎಂದು ಸಿಟ್ಟಲ್ಲೇ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಮಗಳ ಮದುವೆ ಖಚಿತ ಪಡಿಸಿದ ಆಮೀರ್ ಖಾನ್: ಇರಾ ಮ್ಯಾರೇಜ್ ಡೇಟ್ ಫಿಕ್ಸ್

bigg boss 2 6ಇದು ಜೆನ್ಯೂನ್ ಪ್ರಶ್ನೆ ಆಗಿತ್ತು ಎಂದು ಸ್ಪಷ್ಟನೆ ನೀಡುವ ಕೆಲಸ ಮಾಡಿದರು ಸ್ನೇಹಿತ್. ಆಗ ಪ್ರತಾಪ್ ಅವರು ಸಿಟ್ಟಿನಿಂದಲೇ ಉತ್ತರಿಸಿದರು. ಈ ವೇಳೆ ನೀನು ಡೋಂಗಿ ಎಂದು ಸ್ನೇಹಿತ್ ಕೂಡ ತುಸು ಖಾರವಾಗಿಯೇ ಕಾಲೆಳೆದರು. ಇದರಿಂದ ಬಿಗ್ ಬಾಸ್ ಮನೆಯಲ್ಲಿ ಚರ್ಚೆ ಜೋರಾಗಿದೆ.

ಮೊನ್ನೆ ಎಪಿಸೋಡ್‌ನಲ್ಲಿ (ಅ.9) ಕೂಡ ತುಕಾಲಿ ಸಂತೋಷ್ ಅವರು ನಮ್ಮ ಹೊಲಕ್ಕೆ ಬರುತ್ತೀರಾ ಔಷಧಿ ಸಿಂಪಡಿಸುತ್ತೀರಾ? ಎಂದು ಕೇಳಿದ್ದರು. ನಮ್ಮ ತಂಡದವರನ್ನ ಕಳುಹಿಸಿ ಕೊಡುತ್ತೀನಿ ಎಂದು ಕೂಲ್ ಆಗಿ ಪ್ರತಾಪ್ ರಿಪ್ಲೈ ಮಾಡಿದ್ದರು.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article