‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ಖ್ಯಾತಿಯ ಡ್ರೋನ್ ಪ್ರತಾಪ್ (Drone Prathap) ಇದೇ ಜೂನ್ 11ಕ್ಕೆ ಹುಟ್ಟುಹಬ್ಬವಾಗಿದ್ದು, ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಬಡಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ನೆರವಾಗಲು ಪ್ರತಾಪ್ ನಿರ್ಧರಿಸಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ಪ್ರತಾಪ್ ಹಂಚಿಕೊಂಡಿದ್ದಾರೆ.
ಸ್ನೇಹಿತರೇ ಎಲ್ಲರಿಗೂ ನಮಸ್ಕಾರ, ಡಾ.ರಾಜ್‌ಕುಮಾರ್ ಸರ್ ಹೇಳ್ತಾರೆ ನೇತ್ರದಾನ ಮಹಾದಾನ ಅಂತ. ಮುಂಬರುವ ಜೂನ್ 11ಕ್ಕೆ ನನ್ನ ಹುಟ್ಟುಹಬ್ಬವಿದೆ ಸ್ನೇಹಿತರೇ ನನಗಂತೂ ಭಾರೀ ಎಕ್ಸೈಟ್‌ಮೆಂಟ್ ಇದೆ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕು ಎಂದು ನಾನು ನಿರ್ಧರಿಸಿದ್ದೇನೆ. ಅದಕ್ಕಾಗಿ ಯಾರಾದರೂ ಬಡವರಿಗೆ 5 ಜನಕ್ಕೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ನಾನು ತೀರ್ಮಾನ ಮಾಡಿದ್ದೇನೆ ಎಂದು ವಿಡಿಯೋ ಮೂಲಕ ಪ್ರತಾಪ್ ತಿಳಿಸಿದ್ದಾರೆ. ಇದನ್ನೂ ಓದಿ:‘ಪೌಡರ್’ ಹಚ್ಚಲು ರೆಡಿಯಾದ ಧನ್ಯಾ ರಾಮ್‌ಕುಮಾರ್- ಪೋಸ್ಟರ್ ಔಟ್
View this post on Instagram
ನಿಮ್ಮಲ್ಲಿ ಯಾರಿಗಾದರೂ ಆಸಕ್ತಿ ಇದ್ದರೆ, ನಿಮಗೆ ಕಣ್ಣಿನ ಸಮಸ್ಯೆ ಇದ್ದರೆ ಉಚಿತವಾಗಿ ಶಸ್ತç ಚಿಕಿತ್ಸೆ ಮಾಡಿಸುತ್ತಿದ್ದೇವೆ ಎಂದು ಪ್ರತಾಪ್ ತಿಳಿಸಿದ್ದಾರೆ. ಯಾರಿಗೆ ಸಮಸ್ಯೆ ಇದೆ ಮೆಸೇಜ್ ಮಾಡಿ, ಕಾಮೆಂಟ್ ಬಾಕ್ಸ್‌ನಲ್ಲಿ ತಿಳಿಸಿ ಎಂದು ಪ್ರತಾಪ್ ಮನವಿ ಮಾಡಿದ್ದಾರೆ.
ಅಂದಹಾಗೆ, ಬಿಗ್ ಬಾಸ್ ಶೋ ನಂತರ ‘ಗಿಚ್ಚಿ ಗಿಲಿಗಿಲಿ’ (Gicchi Giligili) ಕಾರ್ಯಕ್ರಮದಲ್ಲಿ ಪ್ರತಾಪ್ ಆಗಾಗ ನಟಿಸುತ್ತಾರೆ. ಇದರ ಜೊತೆಗೆ ಡ್ರೋನ್‌ಗೆ ಸಂಬಂಧಿಸಿದ ಆಫೀಸ್ ಅನ್ನು ಕೂಡ ನೋಡಿಕೊಳ್ತಿದ್ದಾರೆ.