ದೊಡ್ಮನೆ ಆಟಕ್ಕೆ (Bigg Boss Kannada 10) ಕಾಲಿಟ್ಟ ದಿನದಿಂದಲೂ ಸಾಕಷ್ಟು ಏಳು ಬೀಳುಗಳನ್ನ ಡ್ರೋನ್ ಪ್ರತಾಪ್ (Drone Prathap) ಎದುರಿಸಿದ್ದರು. ಬಳಿಕ ಅವಮಾನ ಮಾಡಿದವರಿಗೆ ತಕ್ಕ ಪಾಠ ಕೂಡ ಕಲಿಸಿದ್ದರು. ಆದರೆ ಈಗ ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಮತ್ತೆ ಚಾರ್ಮ್ ಕಳೆದುಕೊಂಡಿದ್ದಾರೆ. ಸ್ಪರ್ಧಿಗಳು ಕೊಟ್ಟಿರುವ ಕಳಪೆ ಹಣೆಪಟ್ಟಿಯ ಏಟಿಗೆ ಪ್ರತಾಪ್ ಸೈಲೆಂಟ್ ಆಗಿದ್ದಾರೆ.
Advertisement
ಪ್ರತಾಪ್ ವಿಚಾರದಲ್ಲಿ ಮನೆಯಲ್ಲಿ ಆರಂಭದಲ್ಲಿ ನಡೆದುಕೊಂಡ ರೀತಿಗೆ ಬಿಗ್ ಬಾಸ್ ವೀಕ್ಷಕರಿಗೂ ಬೇಸರವಾಗಿತ್ತು. ಇದು ಕಿಚ್ಚ ಸುದೀಪ್ (Kichcha Sudeep) ಗಮನಕ್ಕೂ ಬಂದಿತ್ತು. ಹೀಗಾಗಿ ಮನೆಯವರ ಮನಸ್ಥಿತಿಯನ್ನು ಬದಲಿಸಿ, ಪ್ರತಾಪ್ಗೆ ಒಂದಷ್ಟು ಶಕ್ತಿಯನ್ನು ತುಂಬಿದ್ದರು. ಹೀಗಾಗಿ ಪ್ರತಾಪ್ ಮೊದಲ ವಾರದಲ್ಲಿಯೇ ಫುಲ್ ಆ್ಯಕ್ಟಿವ್ ಆಗಿದ್ದರು. ಆದರೆ ಈಗ ಮತ್ತೆ ಡ್ರೋನ್ ಪ್ರತಾಪ್ ಮಂಕಾಗಿದ್ದಾರೆ.
Advertisement
Advertisement
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ತಾನೇ ಬುದ್ದಿವಂತ ಎಂದು ಬದುಕುತ್ತಿರುವ ಬುದ್ದಿವಂತ ದಡ್ಡ ಯಾರು? ಎಂದು ಬಿಗ್ ಬಾಸ್ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಬೋರ್ಡ್ನಲ್ಲಿ ಹಲವು ಹೆಸರುಗಳನ್ನು ಬರೆಯಲಾಗಿತ್ತು. ಆದರೆ, ಹೆಚ್ಚಿನದಾಗಿ ಪ್ರತಾಪ್ ಹೆಸರೇ ಬಂದಿತ್ತು. ಅದಕ್ಕೆ ಸೂಕ್ತ ಉತ್ತರಗಳನ್ನು ನೀಡಲಾಗಿತ್ತು. ತಾನೇ ಬುದ್ದಿವಂತ, ಮನೆಯಲ್ಲಿ ಉಳಿದವರೆಲ್ಲ ದಡ್ಡರು ಎಂದೇ ನಂಬಿದ್ದಾರೆ. ಆದರೆ ಅದು ಸುಳ್ಳು ಎಂದು ಮನೆ ಮಂದಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ಶಿಲಾಬಾಲಿಕೆಯಂತೆ ಕಂಗೊಳಿಸಿದ ಮೇಘಾ ಶೆಟ್ಟಿ
Advertisement
ಮನೆಯ ಬೋರಿಂಗ್ ಸದಸ್ಯ ಯಾರು ಎಂದಾಗಲೂ ಪ್ರತಾಪ್ ಹೆಸರನ್ನೇ ತೆಗೆದುಕೊಂಡಿದ್ದಾರೆ. ಮಂಗಳವಾರ, ಬುಧವಾರ, ಚೆನ್ನಾಗಿರುತ್ತಾರೆ. ವೀಕೆಂಡ್ ಬಂತು ಅಂದ್ರೆ ಪ್ರೊಫೆಸರ್ ಆಗಿ ಬಿಡುತ್ತಾರೆ. ಯಾರ ಜೊತೆಗೂ ಮಾತನಾಡುವುದಿಲ್ಲ. ಅವನಿಗೆ ಬೇಕಾದಾಗ ಮಾತ್ರ ಮಾತನಾಡುತ್ತಾನೆ. ಗುಡ್ ಮಾರ್ನಿಂಗ್ ಹೇಳಿದರೂ ರೆಸ್ಪಾನ್ಸ್ ಇರುವುದಿಲ್ಲ. ವೀಕೆಂಡ್ನಲ್ಲಿ ಮಾತ್ರ ಅವರ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬೇಕು. ಎಂದೆಲ್ಲಾ ಪ್ರತಾಪ್ ಬಗ್ಗೆ ಮನೆಮಂದಿ ಅಭಿಪ್ರಾಯ ತಿಳಿಸಿದ್ದಾರೆ.
ವಾರಾಂತ್ಯದ ಸುದೀಪ್ ಕ್ಲಾಸ್ ಬಳಿಕ ಪ್ರತಾಪ್ ಮುಖದಲ್ಲಿ ನಗು ಕಳೆದುಕೊಂಡಿದ್ದಾರೆ. ನಾಮಿನೇಷನ್ನಿಂದ ಪಾರಾಗುವುದಕ್ಕೆ ವಾದ ಮಾಡಬೇಕಿತ್ತು. ಆದರೆ, ನಮ್ರತಾ ಜೊತೆಗೆ ವಾದಕ್ಕೆ ಇಳಿಯಲಿಲ್ಲ. ನಾನು ತೆಗೆದುಕೊಂಡ ಒಂದು ನಿರ್ಧಾರದಿಂದ ಈ ರೀತಿ ಆಗಿರಬಹುದು. ನಮ್ರತಾ ದೀದಿ ಅವರನ್ನೇ ಸೇವ್ ಮಾಡಿ ಎಂದು ಕೈತೊಳೆದುಕೊಂಡು ಬಿಟ್ಟರು. ಈ ವಾದದ ನಡುವೆ ಪ್ರತಾಪ್ ಆತ್ಮ ವಿಶ್ವಾಸ ಮತ್ತೆ ಕುಸಿದಿರುವುದು ಎದ್ದು ಕಾಣಿಸುತ್ತಿತ್ತು. ಇದೀಗ 9ನೇ ವಾರದ ನಾಮಿನೇಷನ್ ಲಿಸ್ಟ್ನಲ್ಲಿ ಡ್ರೋನ್ ಪ್ರತಾಪ್ ಕೂಡ ಇದ್ದಾರೆ. ಇದ್ದು ಗೆಲ್ಲುತ್ತಾರಾ, ಸೈಲೆಂಟ್ ಆಗಿರೋ ಪ್ರತಾಪ್ ಔಟ್ ಆಗಿ ಹೋಗುತ್ತಾರಾ ಎಂದು ಕಾದುನೋಡಬೇಕಿದೆ.