ಕಾರ್ತಿಕ್‌ಗೆ ಗುನ್ನ ಕೊಟ್ಟ ಡ್ರೋನ್‌ಗೆ ‘ಬಿಗ್ ಬಾಸ್’ ತಿರುಮಂತ್ರ

Public TV
2 Min Read
karthik mahesh 4

ಬಿಗ್ ಬಾಸ್ ಮನೆಯ (Bigg Boss Kannada 10)  ಗೇಮ್ ಮಾಸ್ಟರ್ ಡ್ರೋನ್ ಪ್ರತಾಪ್ (Drone Prathap) ಅವರು ತೆಗೆದುಕೊಂಡ ಆ ಒಂದು ನಿರ್ಧಾರದಿಂದ ಏಡವಿದ್ದಾರೆ. ಕಾರ್ತಿಕ್‌ಗೆ (Karthik Mahesh) ಗುನ್ನ ಕೊಟ್ಟಿದ್ದಕ್ಕೆ ಬಿಗ್ ಬಾಸ್ ಇದೀಗ ಉಲ್ಟಾ ಹೊಡೆದಿದ್ದಾರೆ. ಪ್ರತಾಪ್ ಆಡಿದ ಆಟಕ್ಕೆ ಕರ್ಮ ರಿಟರ್ನ್ಸ್ ಎಂಬಂತೆ ಆಗಿದೆ.

drone prathap 1 2

ಪ್ರತಿ ವಾರದಂತೆ ಈ ವಾರವೂ ಕೂಡ 2 ತಂಡಗಳಾಗಿ ಬಿಗ್ ಬಾಸ್ ವಿಂಗಡಿಸಿದ್ದರು. ‘ಮಣ್ಣಿನ ಮಕ್ಕಳು’ ತಂಡಕ್ಕೆ ಡ್ರೋನ್ ಕ್ಯಾಪ್ಟನ್ ಆದರೆ ‘ವಿಕ್ರಾಂತ್’ ತಂಡಕ್ಕೆ ಮೈಕಲ್ ಕ್ಯಾಪ್ಟನ್ ಆಗಿದ್ದರು. ಪ್ರತಾಪ್ ಅವರ ತಂಡ ಸೇರಿದ್ದರು ಕಾರ್ತಿಕ್. ಆದರೆ, ದುರ್ಬಲ ಸದಸ್ಯರೊಬ್ಬರನ್ನ ತಂಡದಿಂದ ಹೊರಗೆ ತಳ್ಳಬೇಕಾದ ಪರಿಸ್ಥಿತಿ ಬಂದಾಗ ಕಾರ್ತಿಕ್ ಅವರನ್ನ ಡ್ರೋನ್ ಪ್ರತಾಪ್ ಹೊರಗಿಟ್ಟರು. ಆ ಮೂಲಕ ಕ್ಯಾಪ್ಟೆನ್ಸಿ ಓಟದಿಂದ ಕಾರ್ತಿಕ್ ಹೊರಬಿದ್ದರು. ಇದನ್ನೂ ಓದಿ:ಮಾಡೆಲ್ ಜೊತೆ ಮದುವೆಯಾದ ಬಾಲಿವುಡ್ ನಟ ರಣ್ ದೀಪ್ ಹೂಡಾ

drone prathap 2ವಾರದ ಎಲ್ಲಾ ಟಾಸ್ಕ್‌ಗಳಲ್ಲಿ ಡ್ರೋನ್ ಪ್ರತಾಪ್ ನೇತೃತ್ವದ ತಂಡ ಸೋಲು ಅನುಭವಿಸಿದೆ. ಹೀಗಾಗಿ, ಡ್ರೋನ್ ಪ್ರತಾಪ್ ನೇತೃತ್ವದ ಸಂಪೂರ್ಣ ತಂಡ ಕ್ಯಾಪ್ಟೆನ್ಸಿ ರೇಸ್‌ನಿಂದ ಹೊರಬಿದ್ದಿದೆ. ಮೈಕಲ್ ಟೀಮ್ ಗೆದ್ದಿದೆ. ಎಲ್ಲಾ ಚಟುವಟಿಕೆಗಳಿಗೂ ಉಸ್ತುವಾರಿ ಆಗಿದ್ದ ಕಾರ್ತಿಕ್ ಮಹೇಶ್‌ಗೆ ಬಿಗ್ ಬಾಸ್ (Bigg Boss) ವಿಶೇಷ ಅವಕಾಶ ನೀಡಿದರು.

karthik mahesh

ಉಸ್ತುವಾರಿ ಕೆಲಸವನ್ನ ಕಾರ್ತಿಕ್ ಉತ್ತಮವಾಗಿ ನಿಭಾಯಿಸಿದರು ಎಂದು ಇತರೆ ಸ್ಪರ್ಧಿಗಳಿಂದ ಮೆಜಾರಿಟಿ ವೋಟ್ ಬಿದ್ದಿದ್ರಿಂದ ಕ್ಯಾಪ್ಟೆನ್ಸಿ ಓಟಕ್ಕೆ ಕಾರ್ತಿಕ್ ವಾಪಸ್ ಬಂದಿದ್ದಾರೆ. ಯಾವ ಕೈಯಲ್ಲಿ ಕಾರ್ತಿಕ್ ಫೋಟೋಗೆ ಡ್ರೋನ್ ಪ್ರತಾಪ್ x ಚಿಹ್ನೆ ಹಾಕಿದ್ರೋ, ಅದೇ ಕೈಯಲ್ಲಿ ಕಾರ್ತಿಕ್ ಫೋಟೋದಿಂದ x ಚಿಹ್ನೆಯನ್ನ ಬಿಗ್ ಬಾಸ್ ವಾಪಸ್ ತೆಗೆಸಿದ್ದಾರೆ. ಅದನ್ನ ಕಂಡ ಸಂಗೀತಾ ಕರ್ಮ ಅನ್ನೋದು ಇದಕ್ಕೇನಾ ಎಂದು ಮಾತನಾಡಿದ್ದಾರೆ.

ಯಾರು ಕಡೆಯಿಂದ ಕ್ಯಾಪ್ಟೆನ್ಸಿಗೆ ಹೊರದಬ್ಬಿದ್ರೋ ಅವರ ಕಡೆಯಿಂದಲೇ ಕಾರ್ತಿಕ್ ಫೋಟೋ ಮೇಲಿರುವ x ಮಾರ್ಕ್ ತೆಗೆಸಿದ್ದಾರೆ ಬಿಗ್ ಬಾಸ್. ಪ್ರತಾಪ್ ಕೈಯಿಂದಲೇ ಈ ಕೆಲಸ ಮಾಡಿಸಿದ್ದಾರೆ. ಉಸ್ತುವಾರಿಯೇ ಕಾರ್ತಿಕ್ ಗೆದ್ದು ಕ್ಯಾಪ್ಟೆನ್ಸಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಮೈಕಲ್ ಟೀಮ್ ಜೊತೆ ಕಾರ್ತಿಕ್ ಸೆಣಸಾಡಬೇಕಿದೆ. ವಿಶೇಷ ಏನೆಂದರೆ, ಈ ಬಾರಿ ಕ್ಯಾಪ್ಟನ್ ಆದರೆ ಎರಡು ಪಟ್ಟು ಹೆಚ್ಚಿನ ಅಧಿಕಾರ ಇರಲಿದೆ. ಹಾಗಾಗಿಯೇ ಅಸಲಿ ಆಟ ಈಗ ಶುರುವಾಗಿದೆ. ಯಾರು ಗೆಲ್ತಾರೆ, ಕಾಯಬೇಕಿದೆ.

Share This Article