ದೊಡ್ಮನೆಯಲ್ಲಿ ಫ್ಯಾಮಿಲಿ ರೌಂಡ್ ಶುರುವಾಗಿದೆ. ಕೊನೆಗೂ ಅಪ್ಪ ಅಮ್ಮನ ಜೊತೆ ಡ್ರೋನ್ ಪ್ರತಾಪ್ (Drone Prathap) ಭೇಟಿಯಾಗಿದೆ. 3 ವರ್ಷಗಳ ನಂತರ ಮಗ ಜೊತೆಗಿನ ಭೇಟಿ ಹೇಗಿತ್ತು ಎಂದು ಪಬ್ಲಿಕ್ ಟಿವಿ ಡಿಜಿಟಲ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ.
Advertisement
3 ವರ್ಷಗಳ ನಂತರ ಮಗ ಪ್ರತಾಪ್ನನ್ನು ಬಿಗ್ ಬಾಸ್ ಶೋನಲ್ಲಿ ಕಣ್ತುಂಬಿಕೊಂಡ ಕ್ಷಣ ಹೇಗಿತ್ತು ಎಂದು ತಂದೆ ಮರಿಮಾದಯ್ಯ (Marimadhayya) ತಿಳಿಸಿದ್ದಾರೆ. ಬಿಗ್ ಬಾಸ್ ಶೋನಲ್ಲಿ (Bigg Boss Kannada 10) ಪ್ರತಾಪ್ನನ್ನು ನೋಡಿ ನಮಗೆ ಪುನರ್ಜನ್ಮ ಸಿಕ್ಕಂತೆಯೇ ಆಯ್ತು ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ:ನಟ, ರಾಜಕಾರಣಿ ವಿಜಯಕಾಂತ್ ನಿಧನ
Advertisement
Advertisement
ಬಿಗ್ ಬಾಸ್ಗೆ (Bigg Boss Kannada 10) ನಡುರಾತ್ರಿ ಎಂಟ್ರಿ ಕೊಟ್ಟಿದ್ದು, 2 ಗಂಟೆಗಳ ಕಾಲ ಕಳೆದ್ದೇವು. ಅವನ ಆಟ ಮತ್ತು ಇಂದಿನ ಪ್ರತಾಪ್ ಸಾಧನೆ ನೋಡಿದ್ರೆ ಹೆಮ್ಮೆ ಅನಿಸುತ್ತದೆ. ಯಾವ ಜನ ನನ್ನ ಮಗನನ್ನು ಬೈಯುತ್ತಿದ್ದರೋ ಇಂದು ಅವರೇ ಅವನನ್ನು ಹಾಡಿ ಹೊಗಳುತ್ತಿದ್ದಾರೆ. ಇದನ್ನೆಲ್ಲಾ ನೋಡಿದ್ರೆ ನಿಜಕ್ಕೂ ಖುಷಿ ಆಗುತ್ತಿದೆ ಎಂದು ಪ್ರತಾಪ್ ತಂದೆ ಮಾತನಾಡಿದ್ದಾರೆ.
Advertisement
ಮನೆಯ ಪ್ರತಿ ಸದಸ್ಯರಿಗೂ ಮುದ್ರೆ ಊಟ ಬಡಿಸಿದ್ದಾರೆ. ದೀದಿಯರಿಗೆ ಪ್ರತಾಪ್ ಕಡೆಯಿಂದ ಸ್ಪೆಷಲ್ ಆಗಿ ಸೀರೆ ಗಿಫ್ಟ್ ಮಾಡಿದ್ದಾರೆ. ಮಗ ಜೊತೆ ಪ್ರತಾಪ್ ಸಹ ಸ್ಪರ್ಧಿಗಳ ಜೊತೆ ಕೆಲ ಕ್ಷಣ ಕಳೆದಿರುವುದಾಗಿ ತಿಳಿಸಿದ್ದಾರೆ.
ಕೆಲ ಅಹಿತಕರ ಘಟನೆಗಳಿಂದ ನಾವು ನೊಂದಿದ್ದೇವು. ಆದರೆ ಬಿಗ್ ಬಾಸ್ ಶೋ ಮೂಲಕ ಪ್ರತಾಪ್ ವ್ಯಕ್ತಿತ್ವ ಎಂತಹದ್ದು ಎಂದು ಜನರಿಗೆ ತಿಳಿಸಿಕೊಟ್ಟಿದೆ. ಅದಕ್ಕಾಗಿ ನಾವು ಬಿಗ್ ಬಾಸ್ ಶೋ ಮತ್ತು ಸುದೀಪ್ ಸರ್ಗೆ ಎಂದಿಗೂ ನಾವು ಆಭಾರಿಯಾಗಿದ್ದೇವೆ. ನನ್ನ ಮಗನನ್ನು ಸಾಕಷ್ಟು ಕಡೆ ಸುದೀಪ್ (Sudeep) ಸರ್ ತಿದ್ದಿ ಬುದ್ಧಿ ಹೇಳಿದ್ದಾರೆ ಎಂದು ಪ್ರತಾಪ್ ತಂದೆ ಸಂತಸ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಮ್ಮ ಮಗ ಪ್ರತಾಪ್ ಗೆದ್ದು ಬಂದರೆ ಖುಷಿಯಾಗುತ್ತದೆ. ಇಲ್ಲಿ ಟಫ್ ಕಾಂಪಿಟೇಶನ್ ಇದೆ ಎಂದು ಗೊತ್ತು. ಆದರೆ ಪ್ರತಾಪ್ ಗೆಲ್ಲಬೇಕು ಎಂದು ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಡ್ರೋನ್ ಪ್ರತಾಪ್ ಅವರು ಹಲವು ಸಮಯದಿಂದ ತಮ್ಮ ಕುಟುಂಬ ಸದಸ್ಯರ ಜೊತೆಗೆ ಮಾತನಾಡಿರಲಿಲ್ಲ. ಅಪ್ಪ, ಅಮ್ಮ, ತಂಗಿಯನ್ನ ನೋಡಿ 3 ವರ್ಷ ಆಯ್ತು. ಅವರ ಜೊತೆ ನಾನು ಮಾತನಾಡುತ್ತಿಲ್ಲ ಎಂಬುದನ್ನು ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಹೇಳಿಕೊಂಡಿದ್ದರು. ಆದರೆ ಈಗ ಅಪ್ಪ-ಅಮ್ಮನನ್ನು ನೇರವಾಗಿ ಭೇಟಿಯಾಗುವ ಅವಕಾಶವನ್ನು ‘ಬಿಗ್ ಬಾಸ್’ (Bigg Boss) ಮಾಡಿಕೊಟ್ಟಿದ್ದಾರೆ.