ತುಮಕೂರು: ಕೃಷಿ ಹೊಂಡದಲ್ಲಿ ಸೋಡಿಯಂ (Sodium) ಹಾಕಿ ಬ್ಲಾಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಮಾಜಿ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್‌ನನ್ನ (Drone Prathap) ಘಟನಾ ಸ್ಥಳಕ್ಕೆ ಕರೆತಂದು ತುಮಕೂರು ಪೊಲೀಸರು (Tumkur Police) ಸ್ಥಳ ಮಹಜರು ನಡೆಸಿದ್ದಾರೆ. ಈ ಬೆನ್ನಲ್ಲೇ ಹಲವು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
Advertisement
ಸ್ಥಳ ಮಹಜರು ವೇಳೆ ಹಲವು ಪ್ರಶ್ನೆಗಳನ್ನ ಪೊಲೀಸರು ಕೇಳಿದ್ದು, ಇದಕ್ಕೆ ಡ್ರೋನ್ ಪ್ರತಾಪ್ ಉತ್ತರ ಕೊಟ್ಟಿದ್ದಾರೆ. ಯಾರ‍್ಯಾರು ಬಂದಿದ್ರಿ? ನಿಮ್ಮ ಸ್ನೇಹಿತನ ಹೆಸರೇನು? ಯಾವ ಕಾರಲ್ಲಿ ಬಂದಿದ್ರಿ ಅಂತ ಪೊಲೀಸರು ಕೇಳಿದ್ದಾರೆ, ಇದಕ್ಕೆ ಪ್ರತಾಪ್ ಐ20 ಕಾರಲ್ಲಿ ಬಂದಿದ್ವಿ ಅಂತ ಉತ್ತರಿಸಿದ್ದಾರೆ. ಬಳಿಕ ಸಾರ್ವಜನಿಕ ಸ್ಥಳದಲ್ಲಿ ಹೀಗೆ ಮಾಡೋದು ತಪ್ಪಲ್ವಾ? ಅಂತ ಪ್ರಶ್ನೆ ಮಾಡಿದ್ದಕ್ಕೆ ಹೌದು ಎಂದು ತಲೆಯಾಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಸ್ಥಳೀಯರ ಆರೋಪ ಏನು?
ಡ್ರೋನ್ ಪ್ರತಾಪ್ ಬ್ಲಾಸ್ಟ್ ಮಾಡಿದ ಕೃಷಿಹೊಂಡ ಇರೋದು ಸಾರ್ವಜನಿಕರು ಓಡಾಡುವ ರಸ್ತೆ ಮಗ್ಗುಲಲ್ಲೇ, ಸ್ಫೋಟ ಕಂಡು ಸಮೀಪದಲ್ಲೇ ದನ, ಕುರಿ ಮೇಯಿಸುತ್ತಿದ್ದವರು ಆತಂಕಕ್ಕೊಳಗಾಗಿದ್ದರು. ಒಂದು ವೇಳೆ ಗಾಳಿ ಜೋರಾಗಿ ಬೀಸಿದ್ದರೆ ಬೆಂಕಿಯ ಜ್ವಾಲೆ ರಸ್ತೆಗೂ ಪಸರಿಸುತಿತ್ತು, ಪ್ರತಾಪ್ ನ ಕೈ ಸುಟ್ಟ ಹಾಗೆ, ಸಾರ್ವಜನಿಕರಿಗೂ ಬೆಂಕಿ ತಗುಲಿ ಅಪಾಯವಾಗುತ್ತಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.
Advertisement
ಸೈಟ್ ಮಾಡಿ ಮಾರಾಟ ಮಾಡೋಕೆ ಪ್ಲ್ಯಾನ್:
ಬ್ಲಾಸ್ಟ್ ನಡೆದ ಸ್ಥಳ ಇದರೋದು ಜಿತೇಂದ್ರ ಜೈನ್ ಅವರಿಗೆ ಸೇರಿದ್ದ ಫಾರಂ ಹೌಸ್‌ನಲ್ಲಿ. ಸ್ಥಳೀಯರಿಗೆ ಉದ್ಯೋಗ ಕೊಡುವ ಕಂಪನಿ ನಿರ್ಮಾಣ ಮಾಡ್ತಿವಿ ಎಂದು ಸುಳ್ಳು ಹೇಳಿ ಫಾರಂ ಹೌಸ್ ಮಾಡಿದ್ದರಂತೆ, ಜೈನ್‌ಗೆ ಡ್ರೋನ್ ಪ್ರತಾಪ್ ಸಹ ಪಾರ್ಟರ್ ಅಂತೆ. 25 ಎಕರೆ ಫಾರಂ ಹೌಸ್‌ನಲ್ಲಿ ಸೈಟ್ ಮಾಡಿ ಮಾರಾಟ ಮಾಡೋ ಪ್ಲ್ಯಾನ್ ಮಾಡಿದ್ದರಂತೆ ಎಂದು ಸ್ಥಳೀಯರು ʻಪಬ್ಲಿಕ್ ಟಿವಿʼಯೊಂದಿಗೆ ಮಾತನಾಡಿದ್ದಾರೆ.
ಮೂವರ ವಿರುದ್ಧ ಕೇಸ್:
ಡ್ರೋನ್ ಪ್ರತಾಪ್, ರಾಯರ ಬೃಂದಾವನ ಫಾರಂನ ಮಾಲೀಕ ಜಿತೇಂದ್ರ ಜೈನ್ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ ಮತ್ತೋರ್ವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಪ್ರತಾಪ್‌ನನ್ನ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.
ಪ್ರಕರಣ ಏನು?
ನೀರಿಗೆ ಕೆಮಿಕಲ್ ಹಾಕಿ ಡ್ರೋನ್ ಪ್ರತಾಪ್ ನೀರಿನಾಳದಲ್ಲಿ ಬ್ಲಾಸ್ಟ್ ಮಾಡಿದ್ದಾರೆ. ಕೆಮಿಕಲ್ ಎಸೆದಿದ್ದೇ ತಡ ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಆಗಿದೆ. ಬೆಂಕಿ ಸಹ ಚಿಮ್ಮಿದೆ. ಅಷ್ಟೇ ಅಲ್ಲದೇ ಬಾಂಬ್ ಬ್ಲಾಸ್ಟ್ ರೀತಿ ದೃಶ್ಯ ಕಂಡುಬಂದಿದೆ. ಈ ವೀಡಿಯೋ ನೋಡಿ ಪ್ರತಾಪ್ ಬಿಲ್ಡಪ್ ಬೇರೆ ಕೊಟ್ಟಿದ್ದಾರೆ. ಜೊತೆಗೆ ನಗು-ನಗುತ್ತಲೇ ನೋಡಿ.. ನೋಡಿ ದೊಡ್ಡ ಬ್ಲಾಸ್ಟ್ ಇದು ಎಂದು ಪ್ರತಾಪ್ ಕೂಗಿದ್ದಾರೆ.
ಈ ರೀತಿ ವಿಡಿಯೋ ಮಾಡೋದು ಕಾನೂನು ಬಾಹಿರ. ಹೀಗಾಗಿ ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ. ಯಾವೆಲ್ಲ ಕೆಮಿಕಲ್ ಹಾಕಿದ್ರೇ ಬ್ಲಾಸ್ಟ್ ಆಗುತ್ತೆ ಅಂತಾನೂ ಲೈವ್‌ನಲ್ಲಿ ಹೇಳಿದ್ದು, ಇದನ್ನು ಕಿಡಿಗೇಡಿಗಳು ಕುಕೃತ್ಯಕ್ಕೆ ಬಳಸುವ ಸಾಧ್ಯತೆ ಇದೆ ಅಂತಾ ಪರಿಸತವಾದಿ ವಿಜಯ್ ನಿಶಾಂತ್ ಕಿಡಿಕಾರಿದ್ದಾರೆ.
ಈ ರೀತಿಯ ಪ್ರಯೋಗ ಅಪಾಯಕಾರಿ ಮತ್ತು ಕಾನೂನು ಬಾಹಿರವಾದದ್ದು. ಈ ಬ್ಲಾಸ್ಟ್ ವಿಡಿಯೋ ಮಾಡುವ ಮುನ್ನ ಕನಿಷ್ಟ ಪಕ್ಷ ಡ್ರೋನ್ ಪ್ರತಾಪ್ ಯೋಚನೆ ಮಾಡಬೇಕಾಗಿತ್ತು ಇದ್ಯಾವ ಸೀಮೆ ವಿಜ್ಞಾನದ ಬಗ್ಗೆ ಮಾಹಿತಿ ಕೊಡ್ತಾ ಇರೋದು ಅವರಿಗೆ ಗೊತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.