ದೊಡ್ಮನೆಗೆ ಸಂಗೀತಾ, ಡ್ರೋನ್ ಪ್ರತಾಪ್ (Drone Prathap) ಎಂಟ್ರಿ ಕೊಟ್ಟು, ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಕಣ್ಣಿಗೆ ಆಗಿರುವ ಪೆಟ್ಟಿನಿಂದ ಚೇತರಿಕೊಳ್ತಿದ್ದಾರೆ. ಮಾನವೀಯತೆ ಇಲ್ಲದೇ ರಾಕ್ಷಸರಂತೆ ಆಟ ಆಡಿದ ವಿನಯ್ ಟೀಮ್ ಬಗ್ಗೆ ಡ್ರೋನ್ ಅಸಮಾಧಾನ ಹೊರ ಹಾಕಿದ್ದಾರೆ. ನೀವೆಲ್ಲಾ ಮನುಷ್ಯರಾ? ಸಂಗೀತಾ (Sangeetha Sringeri) ಏನು ಕೊಲೆ ಮಾಡಿ ಬಂದಿದ್ದಾರಾ? ಎಂದು ವರ್ತೂರು ಸಂತೋಷ್‌ಗೆ (Varthur Santhosh) ಪ್ರತಾಪ್ ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ.
ಮಾನವೀಯತೆ ಮರೆಯು ವಿನಯ್, ನಮ್ರತಾ ಟೀಮ್ ರಾಕ್ಷಸರಾದಾಗ ಟಾಸ್ಕ್ವೊಂದು ಬಂದಾಗ ಆರಂಭದಿಂದಲೇ ನೀರಿನಲ್ಲಿ ಸೋಪು ಪುಡಿ ಸುರಿದು, ಸಂಗೀತಾ ತಲೆ ಮೇಲೂ ಸೋಪು ಪುಡಿ ಹಾಕಿ. ಉಸಿರಾಡದಂತೆ ನೀರನ್ನ ಜೋರಾಗಿ ಎರಚಿದ್ದರು. ಇದನ್ನೂ ಓದಿ:‘ಸಲಾರ್’ ಸಿನಿಮಾಗೆ ಐದೂ ಭಾಷೆಗಳಿಗೂ ತಾವೇ ಡಬ್ ಮಾಡಿದ ಪೃಥ್ವಿರಾಜ್
ಹೆಚ್ಚು ನೀರು ಎರಚಿಸಿಕೊಂಡಿದ್ರಿಂದ ಸಿಟ್ಟಿನಲ್ಲಿ ಪವಿ (Pavi Povappa) ಹಾಗೂ ವರ್ತೂರು ಸಂತೋಷ್ ಸೇಡು ತೀರಿಸಿಕೊಂಡರು. ಆದರೆ, ವಿನಯ್ ಹಾಗೂ ನಮ್ರತಾ ಚೇರ್ ಮೇಲೆ ಕೂತು ನೀರು ಎರಚಿಸಿಕೊಳ್ಳಲಿಲ್ಲ. ಅಂದ್ಮೇಲೆ, ಇವರಿಬ್ಬರಿಗೆ ಯಾಕೆ ಸಂಗೀತಾ ಮೇಲೆ ಅಷ್ಟೋಂದು ಸಿಟ್ಟು ಇತ್ತು. ಸಂಗೀತಾ ಮೇಲೆ ಟಾರ್ಗೆಟ್ ಮಾಡಿ ಆಟವಾಡಿದ್ದಾರೆ ಎಂದು ವೀಕ್ಷಕರು ಕೂಡ ಕಿಡಿಕಾರಿದ್ದಾರೆ. ಮಾಡಿದ್ದ ತಪ್ಪಿನ ಅರಿವಿಗೆ ಬಂದಿದ್ರೂ ಕೂಡ ತೆಪ್ಪಗೆ ಇರುವ ವಿನಯ್ ಟೀಮ್ ವಿರುದ್ಧ ಪ್ರತಾಪ್ ಸಿಡಿದೆದ್ದಾರೆ. ಸಂಗೀತಾ, ಪ್ರತಾಪ್ ಪರ ನಿಂತು ವಿನಯ್ ಟೀಮ್‌ಗೆ ಕ್ಯಾಕರಿಸಿ ಉಗಿದಿದ್ದಾರೆ.
ಇದನ್ನೆಲ್ಲಾ ಡ್ರೋನ್ ಪ್ರತಾಪ್ ಕೂಡ ಗಮನಿಸಿದ್ದು, ನೀವೆಲ್ಲಾ ಮನುಷ್ಯರಾ? ಸಂಗೀತಾ ಏನು ಕೊಲೆ ಮಾಡಿ ಬಂದಿದ್ದಾರಾ? ಎಂದು ವರ್ತೂರು ಸಂತೋಷ್‌ಗೆ (Varthur Santhosh) ಕಟುವಾಗಿ ಪ್ರಶ್ನೆ ಮಾಡಿದ್ದಾರೆ. ಇಷ್ಟೇಲ್ಲಾ ಆದರೂ ವಿನಯ್, ನಮ್ರತಾ, ಮೈಕಲ್ ಮಾನವೀಯತೆಗೂ ಹೇಗಿದ್ದೀರಾ ಎಂದು ಕೇಳಲಿಲ್ಲ. ಸೌಜನ್ಯ ಆರೋಗ್ಯದ ಬಗ್ಗೆ ವಿಚಾರಿಸಲಿಲ್ಲ.
ಅಸಲಿಗೆ, ಯಾರ ಮೇಲೂ ಡ್ರೋನ್ ಪ್ರತಾಪ್ ಕ್ರೂರವಾಗಿ ನೀರು ಎರಚಿರಲಿಲ್ಲ. ಸೊಪ್ಪಿನ ಹುಳ ಅಂತ್ಹೇಳಿ ವರ್ತೂರು ಸಂತೋಷ್‌ರನ್ನ ಡ್ರೋನ್ ಪ್ರತಾಪ್ ಹೆದರಿಸಿದ್ದರು. ಚಿಲ್ಲಿ ವಾಟರ್ ಅಂತ್ಹೇಳಿ ಸೊಪ್ಪಿನ ರಸ ತಂದಿದ್ದರು. ಆದರೂ, ಡ್ರೋನ್ ಪ್ರತಾಪ್ ಮೇಲೂ ಸೋಪಿನ ನೀರನ್ನ ದಾಳಿ ಮಾಡಿದರು. ಒಟ್ನಲ್ಲಿ ಯಾರದ್ದೋ ಸಿಟ್ಟಿಗೆ, ಯಾರದ್ದೋ ವೈಯಕ್ತಿಕ ದ್ವೇಷಕ್ಕೆ, ಯಾರೋ ಸೇಡು ತೀರಿಸಿಕೊಳ್ಳುವ ಸಲುವಾಗಿ ಇನ್ಯಾರೋ ಏಟು ತಿದ್ದರು.