ತಮ್ಮ ಹುಟ್ಟು ಹಬ್ಬದ ನೆಪದಲ್ಲಿ ಬಡವರಿಗೆ ಕಣ್ಣು ಆಪರೇಷನ್ ಮಾಡಿಸೋದಾಗಿ ಡ್ರೋನ್ ಪ್ರತಾಪ್ ಹೇಳಿದ್ದರು. ಈಗ ತಾವು ಹೇಳಿದಂತೆ ನಡೆದುಕೊಂಡಿದ್ದಾರೆ. ಅಜ್ಜಿಗೆ ಕಣ್ಣು ಆಪರೇಷನ್ (Eye operation) ಮಾಡಿಸಿರೋ ಪ್ರತಾಪ್, ನಂತರ ಆ ಅಜ್ಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಆ ವಿಡಿಯೋವನ್ನು ಶೇರ್ ಕೂಡ ಮಾಡಿದ್ದಾರೆ.
ಡ್ರೋನ್ ಪ್ರತಾಪ್ ಈವರೆಗೂ ಏನೆಲ್ಲ ಮಾತು ಕೊಟ್ಟಿದ್ದರೋ, ಅದೆಲ್ಲವನ್ನೂ ಪಾಲಿಸ್ತಾ ಬಂದಿದ್ದಾರೆ. ಹಾಗಾಗಿ ಪ್ರತಾಪ್ ಮೇಲೆ ಮೆಚ್ಚುಗೆಯ ಮಹಾಪುರವೇ ಹರಿದು ಬರ್ತಿದೆ. ಬಿಗ್ ಬಾಸ್ (Big Boss) ಸ್ಪರ್ಧೆಯಲ್ಲಿ ತಮಗೆ ಬಹುಮಾನವಾಗಿ ಬಂದಿದ್ದ ಎಲೆಕ್ಟ್ರಿಕ್ ಬೈಕ್ ಅನ್ನು ದಾನ ಮಾಡುವುದಾಗಿ ವೇದಿಕೆಯ ಮೇಲೆಯೇ ಘೋಷಿಸಿದ್ದರು ಡ್ರೋನ್ ಪ್ರತಾಪ್ (Drone Pratap). ಅಗತ್ಯವಿದ್ದವರಿಗೆ ಈ ಬೈಕ್ ಅನ್ನು ನೀಡುವುದಾಗಿ ತಿಳಿಸಿದ್ದರು. ಹೇಳಿದ ಹಾಗೆ ಪ್ರತಾಪ್ ನಡೆದುಕೊಂಡಿದ್ದರು.
ಬಿಗ್ ಬಾಸ್ ಸ್ಪರ್ಧೆಯಲ್ಲಿ ಡ್ರೋನ್ ಪ್ರತಾಪ್ ಗೆ ಹತ್ತು ಲಕ್ಷ ರೂಪಾಯಿ ಹಣ ಮತ್ತು ಒಂದು ಎಲೆಕ್ಟ್ರಿಕ್ ಬೈಕ್ (Bike) ಬಹುಮಾನವಾಗಿ ಬಂದಿತ್ತು. ತಮಗೆ ಬಹುಮಾನವಾಗಿ ಬಂದ ಅಷ್ಟೂ ಹಣವನ್ನೂ ದಾನ ಮಾಡುವುದಾಗಿ ಹೇಳಿಕೊಂಡಿದ್ದರು. ಅದರ ಮೊದಲ ಭಾಗವಾಗಿ ಈಗ ಬೈಕ್ ಅನ್ನು ನೀಡಿದ್ದರು.
ಬೆಂಗಳೂರಿನ ರಾಜು (Raju) ಎನ್ನುವವರು ತಮ್ಮ ಗೆಳೆಯನ ಹೆಸರಿನಲ್ಲಿ ಬೈಕ್ ತೆಗೆದುಕೊಂಡು ತಿಂಗಳ ಕಂತು ಕಟ್ಟುತ್ತಾ ಫುಡ್ ಡಿಲೆವರಿ ಮಾಡುತ್ತಿದ್ದರು. ಗೆಳೆಯ ಮೋಸ ಮಾಡಿದ್ದಕ್ಕೆ ಬೈಕ್ ಅನ್ನು ಬ್ಯಾಂಕ್ ನವರು ಸೀಸ್ ಮಾಡಿದ್ದರು. ಅಂತಹ ರಾಜುವಿಗೆ ತಮಗೆ ಬಹುಮಾನವಾಗಿ ಬಂದಿದ್ದ ಬೈಕ್ ಅನ್ನು ಡ್ರೋನ್ ನೀಡಿದ್ದರು. ಬೈಕ್ ನೀಡುವುದಷ್ಟೇ ಅಲ್ಲ, ರಾಜು ಅವರ ಮನೆಗೂ ಡ್ರೋನ್ ಭೇಟಿ ಮಾಡಿ ಧೈರ್ಯ ತುಂಬಿದ್ದರು. ಮತ್ತಷ್ಟು ನೆರವಿನ ಅಗತ್ಯವಿದ್ದರೆ ಮಾಡುವುದಾಗಿಯೂ ಅವರು ಹೇಳಿದ್ದರು.