ಬೈಕ್ ದಾನ ಮಾಡಿ, ಕೊಟ್ಟ ಮಾತು ಉಳಿಸಿಕೊಂಡ ಡ್ರೋನ್ ಪ್ರತಾಪ್

Public TV
1 Min Read
Drone Pratap 1 1

ಬಿಗ್ ಬಾಸ್ (Big Boss) ಸ್ಪರ್ಧೆಯಲ್ಲಿ ತಮಗೆ ಬಹುಮಾನವಾಗಿ ಬಂದಿದ್ದ ಎಲೆಕ್ಟ್ರಿಕ್ ಬೈಕ್ ಅನ್ನು ದಾನ ಮಾಡುವುದಾಗಿ ವೇದಿಕೆಯ ಮೇಲೆಯೇ ಘೋಷಿಸಿದ್ದರು ಡ್ರೋನ್ ಪ್ರತಾಪ್ (Drone Pratap). ಅಗತ್ಯವಿದ್ದವರಿಗೆ ಈ ಬೈಕ್ ಅನ್ನು ನೀಡುವುದಾಗಿ ತಿಳಿಸಿದ್ದರು. ಹೇಳಿದ ಹಾಗೆ ಪ್ರತಾಪ್ ನಡೆದುಕೊಂಡಿದ್ದಾರೆ.

Drone Pratap 1

ಬಿಗ್ ಬಾಸ್ ಸ್ಪರ್ಧೆಯಲ್ಲಿ ಡ್ರೋನ್ ಪ್ರತಾಪ್ ಗೆ ಹತ್ತು ಲಕ್ಷ ರೂಪಾಯಿ ಹಣ ಮತ್ತು ಒಂದು ಎಲೆಕ್ಟ್ರಿಕ್ ಬೈಕ್ (Bike) ಬಹುಮಾನವಾಗಿ ಬಂದಿತ್ತು. ತಮಗೆ ಬಹುಮಾನವಾಗಿ ಬಂದ ಅಷ್ಟೂ  ಹಣವನ್ನೂ ದಾನ ಮಾಡುವುದಾಗಿ ಹೇಳಿಕೊಂಡಿದ್ದರು. ಅದರ ಮೊದಲ ಭಾಗವಾಗಿ ಈಗ ಬೈಕ್ ಅನ್ನು ನೀಡಿದ್ದಾರೆ.

Drone Pratap 2

ಬೆಂಗಳೂರಿನ ರಾಜು (Raju) ಎನ್ನುವವರು ತಮ್ಮ ಗೆಳೆಯನ ಹೆಸರಿನಲ್ಲಿ ಬೈಕ್ ತೆಗೆದುಕೊಂಡು ತಿಂಗಳ ಕಂತು ಕಟ್ಟುತ್ತಾ ಫುಡ್ ಡಿಲೆವರಿ ಮಾಡುತ್ತಿದ್ದರು. ಗೆಳೆಯ ಮೋಸ ಮಾಡಿದ್ದಕ್ಕೆ ಬೈಕ್ ಅನ್ನು ಬ್ಯಾಂಕ್ ನವರು ಸೀಸ್ ಮಾಡಿದ್ದರು. ಅಂತಹ ರಾಜುವಿಗೆ ತಮಗೆ ಬಹುಮಾನವಾಗಿ ಬಂದಿದ್ದ ಬೈಕ್ ಅನ್ನು ಡ್ರೋನ್ ನೀಡಿದ್ದಾರೆ.

 

ಬೈಕ್ ನೀಡುವುದಷ್ಟೇ ಅಲ್ಲ, ರಾಜು ಅವರ ಮನೆಗೂ ಡ್ರೋನ್ ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಮತ್ತಷ್ಟು ನೆರವಿನ ಅಗತ್ಯವಿದ್ದರೆ ಮಾಡುವುದಾಗಿಯೂ ಅವರು ಹೇಳಿದ್ದಾರೆ. ಈ ಮೂಲಕ ಡ್ರೋನ್ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

Share This Article