ಡ್ರೋನ್ ಪ್ರತಾಪ್ (Drone Pratap) ಅಭಿಮಾನಿಗಳಿಗೆ ಆಘಾತ ಕಾದಿದೆ. ದೊಡ್ಮನೆಯ ಆಟಕ್ಕೆ ಬ್ರೇಕ್ ಬೀಳಲು ಕೆಲವೇ ಕೆಲವು ದಿನಗಳು ಬಾಕಿಯಿದೆ. ಫಿನಾಲೆ ಘಟ್ಟ ತಲುಪುತ್ತಿದ್ದಂತೆ ಸ್ಪರ್ಧಿಗಳ ಅಸಲಿ ಆಟ ಶುರುವಾಗಿದೆ. ಇದೀಗ ಡ್ರೋನ್ ಪ್ರತಾಪ್‌ಗೆ ಕಳಪೆ ಎಂದು ಜೈಲಿಗೆ ಮನೆಮಂದಿ ಅಟ್ಟಿದ್ದಾರೆ.
ಬಿಗ್ ಮನೆಗೆ (Big Boss Kannada) ಕಾಲಿಟ್ಟ ದಿನದಿಂದ ಕೆಲ ಸ್ಪರ್ಧಿಗಳಿಂದ ಪ್ರತಾಪ್ ಟಾರ್ಗೆಟ್ ಆಗುತ್ತಲೇ ಬಂದಿದ್ದರು. ಅನೇಕರ ಕೆಂಗಣ್ಣಿಗೆ ಪ್ರತಾಪ್ ಗುರುಯಾಗಿದ್ದರು. ಆ ನಂತರ ಪ್ರತಾಪ್ ಪರ ಸುದೀಪ್ ನಿಂತು.. ಡ್ರೋನ್‌ನ ಹೀಯಾಳಿಸಿದವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಇದರಿಂದ ಪ್ರತಾಪ್‌ಗೆ ಬಲಬಂದAತೆ ಆಗಿತ್ತು. ಬಳಿಕ ಆಟದಲ್ಲಿ ಪ್ರತಾಪ್ ಪಿಕ್ ಅಪ್ ಆದರು.
ಇತ್ತೀಚಿನ ಪ್ರತಾಪ್ ಆಟ ಡಲ್ ಆಗಿದೆ. ಫಿನಾಲೆ ಟಿಕೆಟ್ ವೇಳೆ, ಸಂಗೀತಾ ಮತ್ತು ನಮ್ರತಾಗೆ ಡ್ರೋನ್ ಠಕ್ಕರ್ ಕೊಟ್ಟಿದ್ದು ಬಿಟ್ಟರೆ, ಇದೀಗ ಮತ್ತೆ ಮಂಕಾಗಿದ್ದಾರೆ. ಹಾಗಾಗಿಯೇ ೧೫ ವಾರಗಳ ಆಟ ನೋಡಿ, ಸಂಗೀತಾಗೆ ಉತ್ತಮ ಸಿಕ್ಕಿದೆ. ಪ್ರತಾಪ್‌ಗೆ ವಿನಯ್, ತುಕಾಲಿ, ಕಾರ್ತಿಕ್ ಸೇರಿದಂತೆ ಅನೇಕರು ಕಳಪೆ ಹಣೆಪಟ್ಟಿ ಕೊಟ್ಟಿದ್ದಾರೆ.
ಪ್ರತಾಪ್‌ಗೆ ಕಳಪೆ ಸಿಕ್ಕಿದ್ದಕ್ಕೆ ಸಂಗೀತಾ ಭಾವುಕರಾಗಿದ್ದಾರೆ. ನನ್ನ ಪ್ರಕಾರ ಯಾರು ಇಲ್ಲಿ ಕಳಪೆ ಇಲ್ಲ ಎಂದು ಹೇಳಿದ್ದಾರೆ. ಸಂಗೀತಾ ದೀದಿ ಇಷ್ಟು ವಾರಗಳು ನನ್ನ ಪರವಾಗಿ ನಿಂತಿದ್ದರು. ಅದಕ್ಕೆ ಋಣಿಯಾಗಿದ್ದೀನಿ ಎಂದು ಹೇಳುತ್ತಲೇ ಜೈಲಿಗೆ ಪ್ರತಾಪ್ ಕಾಲಿಟ್ಟಿದ್ದಾರೆ. ಆಗ ಸಂಗೀತಾ, ನನ್ನ ಪಕ್ಕ ಯಾರು ನಿಲ್ತಾರೆ ಅವರೆಲ್ಲರೂ ಜೈಲಿಗೆ ಹೋಗುತ್ತಾರೆ ಎಂದು ಸಂಗೀತಾ.. ಸಹಸ್ಪರ್ಧಿಗಳ ಮೇಲೆ ಬೇಸರ ಹೊರಹಾಕಿದ್ದಾರೆ.