ಕನ್ನಡ ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada) ಕಾರ್ಯಕ್ರಮ ಶುರುವಾಗಿದೆ. ದೊಡ್ಮನೆ ಆಟಕ್ಕೆ ಡ್ರೋನ್ ಪ್ರತಾಪ್ (Drone Prathap) ಎಂಟ್ರಿ ಕೊಟ್ಟಿದ್ದಾರೆ. ಪ್ರೇಕ್ಷಕರ ವೋಟ್ ಮೇರೆಗೆ ಪ್ರತಾಪ್ ಹೋಲ್ಡ್‌ನಲ್ಲಿದ್ದಾರೆ.
ಕಿಚ್ಚನ (Kichcha Sudeep) ನಿರೂಪಣೆಯಲ್ಲಿ ಬಿಗ್ ಬಾಸ್‌ಗೆ ಅದ್ದೂರಿ ಚಾಲನೆ ಸಿಕ್ಕಿದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಪ್ರೇಕ್ಷಕರ ವೋಟ್ (Vote) ಮೇರೆಗೆ ಸ್ಪರ್ಧಿ ಮನೆ ಒಳಗೆ ಹೋಗತ್ತಾರಾ ಅಥವಾ ಔಟ್ ಆಗುತ್ತಾರಾ ಅಂತಾ ನಿರ್ಧಾರವಾಗುತ್ತದೆ. ಅದರಂತೆ 41% ವೋಟ್ ಪಡೆದು ಸದ್ಯ ಪ್ರತಾಪ್ ಹೋಲ್ಡ್‌ನಲ್ಲಿದ್ದಾರೆ.
ತನ್ನದೇ ಆದ ಸ್ಟಾರ್ಟಪ್ ಶುರುಮಾಡಿ ಅದನ್ನು ಗ್ಲೋಬಲ್ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕನಸು ಹೊತ್ತಿರುವ ಪ್ರತಾಪ್, ಬಿಗ್‌ಬಾಸ್ ಮನೆಯಲ್ಲಿ ಮಿಂಚುತ್ತಾರಾ? ಕಾದು ನೋಡಬೇಕಿದೆ.
ಈಗಾಗಲೇ ಬಿಗ್ ಬಾಸ್ ಸ್ಪರ್ಧಿಗಳಾಗಿ ಪ್ರೇಕ್ಷಕರ ವೋಟ್ ಪಡೆದು ನಮ್ರತಾ ಗೌಡ, ಸ್ನೇಹಿತ್ ಗೌಡ, ವಿನಯ್ ಗೌಡ, ರ‍್ಯಾಪರ್ ಇಶಾನಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:Bigg Boss Kannada10 : ಬಿಗ್ ಬಾಸ್ ಶುರುವಾಗುವ ಮುನ್ನವೇ ಶಾಕ್ ಕೊಟ್ಟ ಕಿಚ್ಚ ಸುದೀಪ್
ವಿಶೇಷ ಅತಿಥಿಗಳಾಗಿ ಹಿರಿಯ ನಟಿ ಶ್ರುತಿ, ಪ್ರಥಮ್, ಚಂದನ್ ಶೆಟ್ಟಿ, ಮುಂಜು ಪಾವಗಡ ಭಾಗಿಯಾಗಿ ಕಿಚ್ಚನಿಗೆ ಸಾಥ್ ನೀಡಿದ್ದಾರೆ.