ಸ್ಟಾಕ್ಹೋಮ್: ಡ್ರೋನ್ ಸಹಾಯದಿಂದ 71 ವರ್ಷದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿ ಸುದ್ದಿಯಾಗಿದ್ದಾನೆ.
ಸ್ವೀಡನ್‍ನ ಟ್ರೋಲ್‍ಹಟ್ಟನ್‍ನಲ್ಲಿ 71 ವರ್ಷದ ವ್ಯಕ್ತಿಯೊಬ್ಬ ಮನೆಯ ಹೊರಗೆ ಹಿಮವನ್ನು ನೂಕುತ್ತಿದ್ದಾಗ ಹೃದಯಾಘಾತವಾಗಿದೆ. ಆಗ ಅಲ್ಲೇ ಇದ್ದ ವ್ಯಕ್ತಿ ಸಹಾಯಕ್ಕೆ ಧಾವಿಸಿದರು. ನಂತರ ಅವರು ತುರ್ತು ಸಹಾಯವಾಣಿಗೆ ಕರೆ ಮಾಡಿದ್ದಾರೆ. ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಸಮಸ್ಯೆಗೆ ಶೀಘ್ರ ಪರಿಹಾರ: ಅಶ್ವಥ್ ನಾರಾಯಣ್ ಭರವಸೆ
Advertisement
Advertisement
ಈ ಕರೆಯ ಆಧಾರದಲ್ಲಿ ಹತ್ತಿರದಲ್ಲಿದ್ದ ಆಸ್ಪತ್ರೆಯಲ್ಲಿ ಅಲಾರಂ ಆಗಿದೆ. ಕೂಡಲೇ ಆಸ್ಪತ್ರೆ ಸಿಬ್ಬಂದಿ ಡ್ರೋನ್ ಮೂಲಕ ಸ್ಥಳಕ್ಕೆ ಕಿಟ್ ಕಳುಹಿಸಿದ್ದಾರೆ. ಆಂಬ್ಯುಲೆನ್ಸ್ ಬರುವುದಕ್ಕೂ ಮುನ್ನ ಚಿಕಿತ್ಸೆ ಕಿಟ್ ತಲುಪಿದೆ. ಪರಿಣಾಮ ವ್ಯಕ್ತಿ ಸಾವಿನಿಂದ ಬಚಾವ್ ಆಗಿದ್ದಾನೆ.
Advertisement
ಈ ಕುರಿತು ಮಾತನಾಡಿದ ಅವರು, ಹೊಸ ತಂತ್ರಜ್ಞಾನದಿಂದ ಡ್ರೋನ್ ಬಂದು ಚಿಕಿತ್ಸೆ ಕೊಟ್ಟಿದೆ. ಇದಕ್ಕೆ ನಾನು ಎಷ್ಟು ಕೃತಜ್ಞನಾಗಿದ್ದೇನೆ ಎಂಬುದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಡ್ರೋನ್ ಇಲ್ಲದಿದ್ದರೆ ನಾನು ಬಹುಶಃ ಇಲ್ಲಿ ಇರುತ್ತಿರಲಿಲ್ಲ ಎಂದು ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಧಾರವಾಡ ಬೈಪಾಸ್ 6 ಪಥದ ಎಕ್ಸ್ ಪ್ರೆಸ್‌ವೇ 4 ಪಥದ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಟೆಂಡರ್: ಪ್ರಹ್ಲಾದ್ ಜೋಶಿ
Advertisement
ಡಾ.ಮುಸ್ತಫಾ ಅಲಿ ವ್ಯಕ್ತಿಯ ಸಹಾಯಕ್ಕೆ ಧಾವಿಸಿದ್ದು, ನಾನು ಸ್ಥಳೀಯ ಆಸ್ಪತ್ರೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದೆ. ನಾನು ಕಾರಿನ ಕಿಟಕಿಯಿಂದ ಹೊರಗೆ ನೋಡಿದಾಗ ಒಬ್ಬ ವ್ಯಕ್ತಿ ಕುಸಿದು ಬಿದ್ದಿರುವುದನ್ನು ನೋಡಿದೆ. ಏನೋ ತೊಂದರೆಯಾಗಿದೆ ಎಂದು ನಾನು ತಕ್ಷಣ ಅರ್ಥಮಾಡಿಕೊಂಡು ಅವರ ಸಹಾಯಕ್ಕೆ ಧಾವಿಸಿದೆ ಎಂದು ವಿವರಿಸಿದರು.