ಬಿಗ್ ಬಾಸ್ ಮನೆಯಲ್ಲಿರುವ ಡ್ರೋನ್ ಪ್ರತಾಪ್ ಅವರು ತಮಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು ಎರಡು ದಿನಗಳ ಹಿಂದೆಯಷ್ಟೇ ಸಾರಂಗ್ ಮಾನೆ ಎನ್ನುವವರು ಆರೋಪ ಮಾಡಿದ್ದರು. ಈ ಕುರಿತಂತೆ ಕಾನೂನು ಕ್ರಮಕ್ಕೂ ಮುಂದಾಗುವುದಾಗಿ ಅವರು ತಿಳಿಸಿದ್ದರು. ಇದೀಗ ಪ್ರತಾಪ್ ಅವರಿಗೆ ಸಮಯ ನೀಡುವುದಾಗಿ ತಿಳಿಸಿದ್ದಾರೆ.
Advertisement
ಪ್ರತಾಪ್ ನ ಕಂಪೆನಿ ಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಜೊತೆ ಬ್ಯುಸಿನೆಸ್ ಪಾರ್ಟನರ್ ಆಗಿದ್ದ ಸಾರಂಗ್ ಮಾನೆ, ನಮ್ಮ ಜೊತೆ ಪ್ರತಾಪ್ ಬ್ಯುಸಿನೆಸ್ ಮಾಡಿ ಡ್ರೋನ್ ಗಳನ್ನು ಕೊಟ್ಟಿಲ್ಲ, ಅವುಗಳಿಗಾಗಿ ಕೊಟ್ಟಿದ್ದ ಹಣವನ್ನ ಕೂಡ ನೀಡದೆ ವಂಚನೆ ಮಾಡ್ತಿರುವುದಾಗಿ ಆರೋಪ ಮಾಡಿದ್ದಾರೆ ಸಾರಂಗ್ ಮಾನೆ.
Advertisement
Advertisement
ಪ್ರತಾಪ್ ಕಳೆದ ಎಂಟು ತಿಂಗಳ ಹಿಂದೆ ಮಹಾರಾಷ್ಟ್ರದ ದುಲೇನಲ್ಲಿ ಭೇಟಿ ಮಾಡಿದ್ರಂತೆ. ಅವಾಗ ಬ್ಯುಸಿನೆಸ್ ಪಾರ್ಟ್ ನರ್ ಆಗಿ ಮಾಡಿಕೊಂಡು 9 ಡ್ರೋನ್ ಗಳನ್ನ ನೀಡುವುದಾಗಿ ಹೇಳಿ 35 ಲಕ್ಷ ತೆಗೆದುಕೊಂಡಿದ್ರಂತೆ ಪ್ರತಾಪ್. ಆದರೆ ಡ್ರೋನ್ ಗಳನ್ನ ನೀಡಲು ಸತಾಯಿಸಿದ್ದಾರೆ. ಎರಡುವರೆ ತಿಂಗಳು ಸಮಯ ತೆಗೆದುಕೊಂಡಿದ್ದ ಹಾಗೂ ಎರಡು ಡ್ರೋನ್ ಗಳನ್ನ ನೀಡಿದ್ದ ಪ್ರತಾಪ್ ಅದಾದ ನಂತರ ಮತ್ತೆ ಡಿಲೇ ಮಾಡಿ ಮತ್ತೆರಡು ಡ್ರೋನ್ ಕಳುಹಿಸಿದ್ದರಂತೆ.
Advertisement
ಆದರೆ ಕೊಟ್ಟಿರುವ ನಾಲ್ಕು ಡ್ರೋನ್ ಗಳು ಈಗ ಕೆಲಸ ಮಾಡುತ್ತಿಲ್ಲ. ಬ್ಯಾಟರಿಗಳ ಕ್ವಾಲಿಟಿ ಸರಿಯಿಲ್ಲದೆ ಮತ್ತೊಂದು ಹಾರಬೇಕಾದರೆ ಕೆಳಗಡೆ ಬಿದ್ದು ಹೋಗಿ ಮೂಲೆ ಸೇರಿವೆ ಎಂದಿದ್ದಾರೆ ಸಾರಂಗ್. ಇತ್ತ ಡ್ರೋನ್ ಕೊಡುವುದಾಗಿ ಹೇಳಿ ರೈತರಿಂದ ಹಣ ಪಡೆದಿದ್ದ ಸಾರಂಗ್, ಇದೀಗ ಹಣನೂ ಹಿಂದಿರುಗಿಸಲೇ ಆಗದೆ ಕಂಪೆನಿ ಕೂಡ ಲಾಸ್ ನಲ್ಲಿ ನಡೆಯುತ್ತಿದ್ದು ಕಷ್ಟ ಪಡುತ್ತಿರುವುದಾಗಿ ಹೇಳಿದ್ದಾರೆ. ಡ್ರೋನ್ ಪ್ರತಾಪ್ ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದಾರೆ 30 ನೇ ತಾರೀಖಿನವರೆಗೂ ಸಮಯ ಕೊಟ್ಟು, ಆನಂತರ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.