ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆಯನ್ನು ದೂರದ ಹಳ್ಳಿಗಳಿಗೆ ಡ್ರೋನ್ ಮುಖಾಂತರ ತಲುಪಿಸುವ ವ್ಯವಸ್ಥೆ ನಡೆದಿದೆ.
ಮಹಾರಾಷ್ಟ್ರದ ಪಾಲ್ಘರ್‌ನ ಜಿಲ್ಲಾಡಳಿತವು ಈ ಪ್ರಯೋಗವನ್ನು ನಡೆಸಿದೆ. ಈ ಪ್ರಯೋಗದ ಭಾಗವಾಗಿ 300 ಲಸಿಕೆಗಳನ್ನು ಜವಾಹರ್‌ನಿಂದ ಝಾಫ್ ಗ್ರಾಮಕ್ಕೆ ಸಾಗಿಸಲಾಗಿದೆ. ವಾಹನದ ಮೂಲಕ 40 ನಿಮಿಷಕ್ಕಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳಬೇಕಾದ ಕಾರ್ಯವು ಕೇವಲ ಒಂಭತ್ತು ನಿಮಿಷಗಳಲ್ಲಿ ಪೂರ್ಣಗೊಂಡಿದೆ ಎಂದು ಜಿಲ್ಲಾಡಳಿತ ಹೇಳಿದೆ. ಇದನ್ನೂ ಓದಿ: ದೇಶದಲ್ಲಿ 62 ಲಕ್ಷಕ್ಕೂ ಅಧಿಕ ಕೋವಿಡ್ ಡೋಸ್ ವ್ಯರ್ಥ
Advertisement
Advertisement
ಗುರುವಾರ ಯಶಸ್ವಿಯಾಗಿ ನಡೆಸಿದ ಪ್ರಯೋಗ ಬಹುಶಃ ರಾಜ್ಯದಲ್ಲಿಯೇ ಮೊದಲನೆಯದು ಎಂದು ಜಿಲ್ಲಾಧಿಕಾರಿ ಡಾ. ಮಾಣಿಕ್ ಗುರ್ಸಾಲ್ ಹೇಳಿದರು.
Advertisement
ಲಸಿಕೆಗಳನ್ನು ವೇಗವಾಗಿ ಗ್ರಾಮಸ್ಥರ ಮನೆ ಬಾಗಿಲಿಗೆ ಡ್ರೋನ್ ಮೂಲಕ ತಲುಪಿಸಬಹುದು. ಲಸಿಕೆಗಳು ಸರಿಯಾದ ಸಂದರ್ಭಕ್ಕೆ ಸಿಗುವುದಿಲ್ಲ ಎಂಬ ಜನರ ತಪ್ಪು ಕಲ್ಪನೆಗಳನ್ನು ತೆಗದು ಹಾಕಲು ಈ ಪ್ರಯೋಗ ಸಹಾಯಕಾರಿಯಾಗುತ್ತದೆ ಎಂದು ಪಾಲ್ಘರ್‌ನ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ದಯಾನಂದ ಸೂರ್ಯವಂಶಿ ಹೇಳಿದ್ದಾರೆ. ಇದನ್ನೂ ಓದಿ: ಸ್ಪುಟ್ನಿಕ್ ಲಸಿಕೆ ಓಮಿಕ್ರಾನ್‌ಗೆ ಪರಿಣಾಮಕಾರಿ – ರಷ್ಯಾ