ಬಾಗ್ದಾದ್: ಸ್ಫೋಟಕ ತುಂಬಿದ ಡ್ರೋನ್ ಬಳಸಿ ಬಾಗ್ದಾದ್‌ನಲ್ಲಿರುವ ಇರಾಕ್ ಪ್ರಧಾನಿ ಮುಸ್ತಾಫ ಅಲ್-ಕಧಿಮಿ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
Advertisement
ಇದು ಹತ್ಯೆಗೆ ನಡೆದಿರುವ ಯತ್ನ. ಪ್ರಧಾನಿಗಳು ಸುರಕ್ಷಿತವಾಗಿದ್ದಾರೆ ಎಂದು ಇರಾಕ್ ಮಿಲಿಟರಿ ತಿಳಿಸಿದೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ
Advertisement
ಕಳೆದ ತಿಂಗಳು ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಕುರಿತು ಇರಾಕಿನ ರಾಜಧಾನಿಯಲ್ಲಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ ನಂತರ ಕಧಿಮಿ ಅವರ ರಕ್ಷಣೆಯಲ್ಲಿದ್ದ ಹಲವರು ಸದಸ್ಯರು ಗಾಯಗೊಂಡಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
Advertisement
Advertisement
ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯ ಮತದಾನದಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಪ್ರತಿಭಟನಾ ನೇತೃತ್ವ ವಹಿಸಿರುವ ಸಂಘಟನೆಗಳು ಗಂಭೀರ ಆರೋಪ ಮಾಡಿದ್ದವು. ಇದನ್ನೂ ಓದಿ: ಜಮ್ಮು & ಕಾಶ್ಮೀರ: ಜಾಕ್ ಸ್ಲಿಪ್ ಆಗಿ ಗಾಯಗೊಂಡು ಕೋಮಾದಲ್ಲಿದ್ದ ಕಾಫಿನಾಡಿನ ಯೋಧ ಸಾವು
ಸರ್ಕಾರಿ ಕಟ್ಟಡಗಳು ಮತ್ತು ವಿದೇಶಿ ರಾಯಭಾರಿ ಕಚೇರಿಗಳನ್ನು ಹೊಂದಿರುವ ಬಾಗ್ದಾದ್ ಕೋಟೆಯ ಹಸಿರು ವಲಯದಲ್ಲಿರುವ ಕಧಿಮಿ ಅವರ ನಿವಾಸದ ಮೇಲಿನ ದಾಳಿಯ ಹೊಣೆಯನ್ನು ಯಾವುದೇ ಗುಂಪು ವಹಿಸಿಕೊಂಡಿಲ್ಲ.
ಕಧಿಮಿ ಅವರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಪ್ರಧಾನಿಯವರು ಸುರಕ್ಷಿತವಾಗಿದ್ದಾರೆ ಎಂದು ಅವರ ಅಧಿಕೃತ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.