ಬೆಂಗಳೂರು: ಚಾಲಕ ರಹಿತ ನಮ್ಮ ಮೆಟ್ರೋ (Namma Metro) ಹಳದಿ ಮಾರ್ಗದಲ್ಲಿ (Yellow Line) ಸಂಚರಿಸಿ ಶೀಘ್ರದಲ್ಲೇ ಇತಿಹಾಸ ಸೃಷ್ಟಿಸಲಿದೆ. ಈ ಚಾಲಕ ರಹಿತ ಮೆಟ್ರೋ ಬೋಗಿಗಳು ಚೀನಾದಿಂದ ಬರಲಿದೆ. ಇದರ ಬೋಗಿಗಳು ಯಾವ ರೀತಿ ಇರಲಿವೆ ಎಂಬ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ.
Advertisement
ಚಾಲಕ ರಹಿತ ಮೆಟ್ರೋ ಶೀಘ್ರವೇ ಹಳಿಗೆ ಬರಲಿದ್ದು, ಈ ಮೆಟ್ರೋ ಹೇಗಿರಬಹುದು ಎಂಬ ಕುತೂಹಲ ಜೋರಾಗಿತ್ತು. ಹಳದಿ ಮಾರ್ಗದಲ್ಲಿ ಮೋಡಿ ಮಾಡಲಿರುವ ಚಾಲಕ ರಹಿತ ಮೆಟ್ರೋ ಚೀನಾದಿಂದ ಬೆಂಗಳೂರು (Bengaluru) ಕಡೆ ಹೊರಟಿದೆ. ಇದರ ಎಕ್ಸ್‌ಕ್ಲ್ಯೂಸಿವ್ ದೃಶ್ಯವೂ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಗೆ ಮೊದಲ ಚಾಲಕ ರಹಿತ ರೈಲು ಚೀನಾದಿಂದ ಹೊರಟಿದೆ. ಮೊದಲ ಆರು ಬೋಗಿಗಳ ರೈಲನ್ನು ಜನವರಿ 20ರಂದು ಹಡಗಿಗೆ ಲೋಡ್ ಮಾಡಲಾಗಿದ್ದು, ಹಡಗು ಮೆಟ್ರೋ ರೈಲು ಹೊತ್ತು ಸದ್ಯ ಚೆನ್ನೈನತ್ತ ತೆರಳುತ್ತಿದೆ. ಫೆಬ್ರವರಿ 7ಕ್ಕೆ ಕಾರ್ಗೋಶಿಪ್ ಮೂಲಕ ಚೆನ್ನೈ (Chennai) ಬಂದರಿಗೆ ಬರಲಿದೆ. ಇದನ್ನೂ ಓದಿ: ಇಂದು ಬಹುನಿರೀಕ್ಷಿತ ಮಧ್ಯಂತರ ಬಜೆಟ್ – ನಿರ್ಮಲಾ ಸೀತಾರಾಮನ್‌ರಿಂದ 6ನೇ ಬಾರಿಗೆ ಆಯವ್ಯಯ ಮಂಡನೆ
Advertisement
Advertisement
ಬಂದರಿಗೆ ಬಂದ ನಂತರ ಚೆನ್ನೈನಿಂದ ರಸ್ತೆ ಮೂಲಕ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ರವಾನೆಯಾಗಲಿದ್ದು, ಈ ಚಾಲಕ ರಹಿತ ಮೆಟ್ರೋ ರೈಲಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಜೋಡಣೆ ಮಾಡಿದ ಬಳಿಕ ಎಲೆಕ್ಟ್ರಾನಿಕ್ ಸಿಟಿ-ಆರ್‌ವಿ ರಸ್ತೆಗೆ ಸಂಪರ್ಕಿಸುವ 19-ಕಿಮೀ ಹಳದಿ ಮಾರ್ಗದಲ್ಲಿ ಓಡಾಡಲಿದೆ. ಈ ಮೆಟ್ರೋ ಸೆಪ್ಟೆಂಬರ್ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ಸಂತ್ರಸ್ತ ಕುಟುಂಬಕ್ಕೆ ಗುಡ್ ನ್ಯೂಸ್ – 36 ಕುಟುಂಬಗಳಲ್ಲಿ 32 ಕುಟುಂಬಗಳಿಗೆ ಉದ್ಯೋಗ
Advertisement