ಬೀದರ್: ಅಕ್ರಮವಾಗಿ ಅಡುಗೆ ಎಣ್ಣೆ (Cooking Oil) ಮಾರಾಟ ಮಾಡಿ ಲಾರಿ ಪಲ್ಟಿಯಾಗಿ ಎಣ್ಣೆ ಕಳುವಾಗಿದೆ ಎಂದು ಮಾಲೀಕರಿಗೆ ಸುಳ್ಳು ಹೇಳಿದ್ದ ಚಾಲಕ (Driver) ಸಿಕ್ಕಿಬಿದ್ದಿದ್ದಾನೆ.
ಪಲ್ಟಿಯಾದ ಲಾರಿಯಿಂದ ಅಡುಗೆ ಎಣ್ಣೆ ಕಳವಾಗಿದೆ ಎಂದು ಸುಳ್ಳು ಹೇಳಿದ್ದ ಲಾರಿ ಚಾಲಕ ಪರಮೇಶ್ವರನನ್ನು ಪೊಲೀಸರು ಬಂಧಿಸಿದ್ದು ಕೋರ್ಟ್ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಿದೆ. ಇದನ್ನೂ ಓದಿ: ನಾಳೆ ಆರ್‌ಸಿಬಿ ಮ್ಯಾಚ್ – ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಫುಡ್ ಟೆಸ್ಟ್‌ಗೆ ಮುಂದಾದ ಸರ್ಕಾರ
ಲಾರಿ ಮಾಲೀಕ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರು 19 ಲಕ್ಷ ರೂ. ಅಧಿಕ ಹಣ ಕೂಡಾ ಜಪ್ತಿ ಮಾಡಿದ್ದಾರೆ. ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.