ChikkaballapurDistrictsKarnatakaLatestMain Post

ಚಿತ್ರಾವತಿ ನದಿಯಲ್ಲಿ ಆಟೋ ಸಮೇತ ಕೊಚ್ಚಿ ಹೋದ ಚಾಲಕ

Advertisements

ಚಿಕ್ಕಬಳ್ಳಾಪುರ: ಚಿತ್ರಾವತಿ ನದಿಯ ಅಬ್ಬರಕ್ಕೆ ಆಟೋ ಸಮೇತ ಚಾಲಕ ಕೊಚ್ಚಿ ಹೋಗಿ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. ಶಾನಗಾನಪಲ್ಲಿಯ ವಿಶೇಷ ಚೇತನ ಆಟೋ ಚಾಲಕ ಶಂಕರ್(40) ಮೃತ ದುರ್ದೈವಿ.

ಕಳೆದ 2 ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಈಗಾಗಲೇ ತುಂಬಿದ್ದ ಬಾಗೇಪಲ್ಲಿ ತಾಲೂಕು ಪರಗೋಡು ಬಳಿಯ ಚಿತ್ರಾವತಿ ಜಲಾಶಯ ಮತ್ತೆ ಕೋಡಿ ಹರಿದಿದೆ. ಪರಿಣಾಮ ಚಿತ್ರಾವತಿ ನದಿ ಭೋರ್ಗೆರೆಯುತ್ತಿದ್ದು, ಆಂಧ್ರಪ್ರದೇಶಕ್ಕೆ ಯಥೇಚ್ಛವಾದ ನೀರು ಹರಿದು ಹೋಗುತ್ತಿದೆ. ಇದನ್ನೂ ಓದಿ: ರಾಖಿ ಕಟ್ಟಿದ ಸಹೋದರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಗಿಫ್ಟ್‌ ಕೊಡಲು ಕಳ್ಳತನ ಮಾಡುತ್ತಿದ್ದ ಯುವಕ ಬಂಧನ

ಸುಬ್ಬಾರಾಯನಪೇಟೆ ಗ್ರಾಮದ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದ್ದರಿಂದ, ಅದರಲ್ಲಿ ಆಟೋ ಮೂಲಕ ರಸ್ತೆ ದಾಟಲು ಹೋದ ಶಂಕರ್ ಆಟೋ ಸಮೇತ ಕೊಚ್ಚಿ ಹೋಗಿದ್ದಾರೆ. ಬಳಿಕ ಗಿಡಗಂಟಿಗಳ ಮಧ್ಯೆ ಶಂಕರ್ ಮೃತದೇಹ ಪತ್ತೆಯಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ನಿಲ್ಲದ ಪ್ಲಾಸ್ಟಿಕ್ ಬಳಕೆ- ದಂಡದ ರೂಪದಲ್ಲಿ ಪಾಲಿಕೆ ಖಜಾನೆಗೆ ಹರಿದು ಬಂತು 21,48,600 ರೂ.!

ಚಿತ್ರಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಆಂಧ್ರಪ್ರದೇಶದ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜನರಿಗೆ ನದಿ ಪಾತ್ರದತ್ತ ತೆರಳದಂತೆ ಸೂಚನೆ ನೀಡಿದ್ದಾರೆ. ಅಲ್ಲಿನ ಕೆಲ ತಗ್ಗು ಪ್ರದೇಶದ ಗ್ರಾಮಗಳಿಗೆ ನೀರು ನುಗ್ಗಿರುವ ವರದಿಗಳು ಕೇಳಿಬಂದಿವೆ.

Live Tv

Leave a Reply

Your email address will not be published.

Back to top button