ಮಂಗಳೂರು: ಕಾರಿನ ಚಾಲಕ ಸೀಟ್ ಬೆಲ್ಟ್ ಧರಿಸಿದ್ದ ಕಾರಣ ಭಾರೀ ದುರಂತವೊಂದು ತಪ್ಪಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಗೆ ಕಾರು ಹಾರಿದೆ. ಆದರೆ ಅದ್ರಷ್ಟವಶಾತ್ ಕಾರಿನ ಚಾಲಕ ಸೀಟ್ ಬೆಲ್ಟ್ ಧರಿಸಿದ್ದ ಕಾರಣ ಕಾರು ಹತೋಟಿಗೆ ತರಲು ಸಫಲರಾಗಿದ್ದಾರೆ.
Advertisement
Advertisement
ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದು, ಅಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಚಾಲಕ ಸೀಟ್ ಬೆಲ್ಟ್ ಧರಿಸದಿದ್ದರೆ ಕಾರು ಹತೋಟಿಗೆ ಸಿಗದೆ ಕಾರಿನಲ್ಲಿದ್ದವರಿಗೆ ತೊಂದರೆಯಾಗುವ ಸಂಭವವಿತ್ತು.
Advertisement
Advertisement
ಕಾರು ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಕೆಳಗೆ ಇಳಿದ ದೃಶ್ಯ ಸರ್ವಿಸ್ ರಸ್ತೆಯಲ್ಲಿರುವ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದ್ದಕ್ಕಿದ್ದಂತೆ ಕಾರು ಸರ್ವೀಸ್ ರಸ್ತೆಗಿಳಿಯೋದನ್ನ ನೋಡಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಚಾಲಕನಿಗೆ ಏನಾಯಿತು ಎಂದು ಗಾಬರಿಯಿಂದ ನೋಡೋದನ್ನ ವಿಡಿಯೋದಲ್ಲಿ ಕಾಣಬಹುದು.
ಆ ಕಾರ್ನಲ್ಲಿ ಇದ್ದವರು ವಿಟ್ಲ ಮೂಲದರು ಎನ್ನಲಾಗಿದೆ.
https://www.youtube.com/watch?v=EmfSToY9Yxs&feature=youtu.be