ಹಾವೇರಿ: ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಲಾರಿಯಲ್ಲಿದ್ದ (Lorry) 13 ಟನ್ ಸ್ಟೀಲ್‍ನ್ನು (Steel) ದೋಚಿದ ಪ್ರಕರಣ ಹಾವೇರಿಯಲ್ಲಿ (Haveri) ನಡೆದಿದೆ. ದುಷ್ಕರ್ಮಿಗಳ ದಾಳಿಗೆ ತುತ್ತಾದ ಚಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೀರಜ್‍ನಿಂದ ಚನ್ನೈನತ್ತ ಹೊರಟಿದ್ದ ಸ್ಟೀಲ್ ತುಂಬಿದ್ದ ಲಾರಿಯನ್ನು ಕಳ್ಳರು ತಡೆದಿದ್ದಾರೆ. ಲಾರಿಯಲ್ಲಿದ್ದ ಸ್ಟೀಲ್ ಕಂಡು ಲಾರಿ ಚಾಲಕನ ಮೇಲೆ ಮಾರಣಾತಿಕ ಹಲ್ಲೆ ಮಾಡಿದ್ದಾರೆ. ಬಳಿಕ ಲಾರಿ ಚಾಲಕನನ್ನು ರಸ್ತೆ ಪಕ್ಕದಲ್ಲಿ ಎಸೆದಿದ್ದಾರೆ. ಲಾರಿಯಲ್ಲಿದ್ದ 13 ಟನ್ ಸ್ಟೀಲ್‍ನ್ನು ತಮ್ಮ ಲಾರಿಗೆ ತುಂಬಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಶಾಲಾ ಕಟ್ಟಡ ಕುಸಿದು ವಿದ್ಯಾರ್ಥಿ ದುರ್ಮರಣ- ಕಳಪೆ ಕಾಮಗಾರಿ ಆರೋಪ
- Advertisement -
ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಚಾಲಕನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಬಳಿಕ ಅಲ್ಲಿಂದ ಹುಬ್ಬಳ್ಳಿಯ (Hubballi)
ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿತ್ತು. ಆದರೆ ಚಾಲಕ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಮಹಾರಾಷ್ಟ್ರ ಮೂಲದ ಗೋವಿಂದ ನಾರಾಯಣ ಖಂಡೇಕರ (40) ಎಂದು ತಿಳಿದು ಬಂದಿದೆ. ಈ ಸಂಬಂಧ ಹಾವೇರಿ ನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
- Advertisement
- Advertisement
ಹಲವು ಟ್ರಾನ್ಸ್‌ಪೋರ್ಟ್ ಕಂಪನಿಗಳು ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳನ್ನು ಈ ದಾರಿಯಲ್ಲಿ ಸಾಗಿಸಲಾಗುತ್ತದೆ. ರಾಜ್ಯದಿಂದ ರಾಜ್ಯಕ್ಕೆ ಹಲವಾರು ಸಾಮಾಗ್ರಿಗಳನ್ನು ಲಾರಿ ಮೂಲಕ ಸಾಗಿಸಲಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಈ ರೀತಿಯ ಕಳ್ಳತನದಲ್ಲಿ ತೊಡಗಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿ ಕಂಡುಬಂದಿದೆ. 2021 ಸೆಪ್ಟೆಂಬರ್ ತಿಂಗಳು 28 ಲಕ್ಷ ರೂ. ಮೌಲ್ಯದ ಮೆಣಸಿನಕಾಯಿ ಚೀಲ ತುಂಬಿದ ಲಾರಿ ಮತ್ತು 27 ಲಕ್ಷ ರೂ. ಮೌಲ್ಯದ ಮೆಣಸಿನಕಾಯಿ ಪುಡಿ ಚೀಲ ತುಂಬಿರುವ ಲಾರಿ ಕಳ್ಳತವಾಗಿತ್ತು. ಆಗಸ್ಟ್ 2021 ರಲ್ಲಿ ಲಕ್ಷಾಂತರ ರೂ. ಮೌಲ್ಯದ ತಾಮ್ರದ ತಂತಿ ಮತ್ತು ಸಿಲ್ವರ್ ತಂತಿ ತುಂಬಿದ ಬೊಲೆರೋ ವಾಹನ ಕಳ್ಳತನವಾಗಿತ್ತು. ಅಕ್ಟೋಬರ್ 2022 ರಲ್ಲಿ 34.50 ಲಕ್ಷ ರೂ. ನಗದು 5 ಸ್ಮಾರ್ಟ್ ಫೋನ್ ಹಾಗೂ 4 ಕಾರುಗಳು, ಒಟ್ಟು 1.08 ಕೋಟಿ ರೂ. ಬೆಲೆ ಬಾಳುವ ವಿವಿಧ ವಸ್ತುಗಳು ಕಳವಾಗಿತ್ತು. ಇದನ್ನೂ ಓದಿ: ಪ್ರದೀಪ್ ಈಶ್ವರ್ ನಿಮ್ಮೊಂದಿಗೆ- ಶಾಸಕರ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ವಂಚನೆ